ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 139 ರನ್ನು ಆ ಕ್ಷಣವೇ ಶಿಕ್ಷಿಸಬೇಕು, ಅವರ ಸ್ನೇಹಿತರು ಮೊದಲಾದವರನ್ನು ಸಾವಕಾಶ ವಾಗಿ 'ನಿಗ್ರಹಿಸಿಕೊಳ್ಳಬಹುದು, ಬೇರು ಕಡಿದ ವೃಕ್ಷದ ಕೊಂಬುಗಳು ತಮಗೆ ತಾವೇ ಒಣಗಿ ಹೋಗುವ ಹಾಗೆ ಪರಪಕ್ಷಬಲವು ದಿನದಿನಕ್ಕೂ ತಾನೇ ಸವೆದುಹೋ ಗುವುದು. ಅಣಿ ತಪ್ಪಿದ ವೇಳೆಯಲ್ಲಿ ಆಲೋಚನೆ ಮಾಡದೆ ಸಾಹಸವನ್ನಾಗಲಿ ಸಂಧಿಯನ್ನಾಗಲಿ ಪಲಾಯನವನ್ನಾಗಲಿ ನಾಚಿಕೆಯ ಕೆಲಸವೆಂದು ಹೇಳದೆ ನಡಿಸ ಬೇಕು, ಸಮಸ್ತ ಜನಗಳಿ೦ದ ಹೊಗಳಿಸಿಕೊಳ್ಳುವ ನಿಮಿತ್ತವಾಗಿಯಾದರೂ ಶತ್ರುಗ ಇನ್ನೂ ಇತರರನ್ನೂ ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರವಾಗಿಯಾದರೂ ಧನವ್ರ ಯವನ್ನು ಮಾಡದೆ ಸಾಹಸದಿಂದಲೇ ಸಾಧಿಸಿಕೊಳ್ಳಬೇಕು, ಶತ್ರುವಾದವನು ಸರಾ ಜಿತನಾಗಿ ಓಡಿಹೋಗಿ ಇನ್ನಾರನ್ನಾದರೂ ಆಶ್ರಯಿಸಿ ಸಮಯವನ್ನು ಸಾಧಿ ಸುತ್ತಾ ಇರುವುದನ್ನು ತಿಳಿದು ಎಂಥಾ ಬಲಿಷ್ಠನಾದರೂ ಮೈಮರೆತಿರಬಾರದು. ತಾನೊಂದು ವೇಳೆ ಪರಾಜಿತನಾದರೆ ತನಗೆ ಸಮಯ ಸಿಕ್ಕುವ ಪರ್ಯಂತರ ಯಜ್ಞ ಮಾಡುವವನ ಹಾಗೂ ಜಟಾಜಿನ ವಕ್ಕಲಗಳನ್ನು ಧರಿಸಿಕೊಂಡು ಸರ್ವಸಂಗಪರಿ ತ್ಯಾಗ ಮಾಡಿದವನ ಹಾಗೂ ಜನರನ್ನು ವಂಚಿಸುತ್ತಾ ಸಮಯವನ್ನು ಸಾಧಿಸಬೇಕು. ಹೀಗೆ ಜನರನ್ನು ವಂಚಿಸುತ್ತಾ ಸಮಯ ಸಿಕ್ಕಿದಾಗ ತೋಳನು ಕುರಿಯಮ೦ದೆಯಲ್ಲಿ ಹೊಂಚಿ ಬೀಳುವ ಹಾಗೆ ತನ್ನ ಶತ್ರುವಿನ ಮೇಲೆ ಬಿದ್ದು ಸಾಹಸವನ್ನು ಮಾಡಬೇಕು. ಜನರು ಹಣ್ಣು ಕಾಯಿಗಳು ತುಂಬಿರುವ ಮರದ ಕೊನೆಯನ್ನು ಕೊಕ್ಕೆ .೦ದ ಒಗ್ಗಿಸಿ ಅವುಗಳಲ್ಲಿ ಪಕ್ಕಾ ಪಕ್ವವಾದುವುಗಳನ್ನು ವಿಚಾರಿಸುವ ತೆರದಿಂದ ಶತ್ರುಗಳನ್ನು ಒಳಹೊಕ್ಕು ಬಲಾಬಲಗಳನ್ನು ವಿಚಾರಿಸಿ ಅಬಲನಾಗಿ ಇರುವಾಗ ಆತನನ್ನು ಕೊಲ್ಲಬೇಕು ಉಪೇಕ್ಷೆ ಯನ್ನು ಮಾಡಕೂಡದು ಮತ್ತು ಶತ್ರುವಾದ ವನು ತನಗೆ ಅಧೀನವಾಗದಿದ್ದರೆ ಆತನನ್ನು ಅನುಸರಿಕೊಂಡಿದ್ದು ಸಮಯ ಬಂದಾಗ ತುಂಬಿದ ಗಡಿಗೆಯನ್ನು ಎತ್ತಿ ಹಾಕಿ ಚೂರುಚೂರಾಗಿ ಒಡೆದು ಹಾಕುವ ಹಾಗೆ ಶತ್ರುವನ್ನು ನಿಃಶೇಷವಾಗಿ ಕೊಂದುಹಾಕಬೇಕು, ಶತ್ರುವು ತನ್ನ ಕೈಗೆ ಸಿಕ್ಕಿದಾಗ ಅವನು ಎಷ್ಟು ಪ್ರಿಯವಚನಗಳನ್ನು ಆಡಿದಾಗೂ ದಯೆಯನ್ನು ತೋರಿಸದೆ ಕೊಂದು ಹಾಕಬೇಕು. : ತನಗೆ ದಾಯಾದಿಗಳಾದವರನ್ನು ಸಾಮದಿಂದಾಗಲಿ ಭೇದದಿಂದಾಗಲಿ ದಾನ ದಿಂದಾಗಲಿ ದಂಡದಿಂದಾಗಲಿ ವಿಷಪ್ರಯೋಗಾದಿ ಕಪಟಕೃತ್ಯಗಳಿಂದಾಗಲಿ ಕೊಂದು ಹಾಕಬೇಕೇ ಹೊರತಾಗಿ ಅವರನ್ನು ಉಳಿಸಕೂಡದು. ಹೀಗೆ ಹೇಳಿದ ಕಳಿಂಗನ ಮಾತನ್ನು ಕೇಳಿ ಧೃತರಾಷ್ಟ್ರ ನು ಈ ಚತುರೋಪಾಯಗಳಿಂದ ಶತ್ರುಗಳನ್ನು ಜಯಿ ಸುವುದು ಹೇಗೆ ? ಅದರ ರೀತಿಯನ್ನು ವಿಶದವಾಗಿ ತಿಳಿಯಪಡಿಸಬೇಕೆಂದು ಕೇಳಿ ಕೊಳ್ಳಲು ಆ ಕಳಿಂಗನು ಮತ್ತೂ ಹೇಳಿದನು. ಹೇಗಂದರೆ ಎಲೈ, ಧೃತರಾಷ್ಟ್ರ ನೇ ! ಈ ಅರ್ಧಕ್ಕೆ ಅನುಕೂಲವಾದ ಒಂದು ಇತಿಹಾಸ ಉಂಟು. ಅದನ್ನು ತಿಳಿಸುತ್ತಿದ್ದೇನೆ ; ಕೇಳು, ಒಂದು ವನದಲ್ಲಿ ಒಂದು ನರಿಯು ವಾಸಮಾಡಿಕೊಂಡು ಇರುವುದು, ಒಂದು ಹುಲಿಯ ಒಂದು ತೋಳವೂ ಒಂದು