138 KANARESE SELECTIONS-PART III 4, KALINGA'S POLICY. ೪, ಕಳಿಂಗನ ನೀತಿ. ಧೃತರಾಷ್ಟ್ರ ರಾಜನು ತಾನೂ ತನ್ನ ಮಕ್ಕಳೂ ನಿಷ್ಕಂಟಕವಾಗಿ ಬದುಕತ ಕುದು ಹೇಗೆ ?"ಎಂದು ಯೋಚಿಸುತ್ತಾ ಶಕುನಿಯ ಮಂತ್ರಿಯಾದ ಕಳಿಂಗನೆಂಬ ಬ್ರಾಹ್ಮಣನನ್ನು ಕರತರಿಸಿ ಏಕಾಂತದಲ್ಲಿ ಆತನನ್ನು ಕುರಿತು-ಎಲೈ, ಭೂಸುರೋ ತಮನೇ ! ಈ ಪಾಂಡು ಕುಮಾರಕರು ಬಲಪರಾಕ್ರಮಗಳಿಂದ ಪ್ರತಿದಿನದಲ್ಲಿ ಯ ಹೆಚ್ಚಿಬರುತ್ತಿದ್ದಾರೆ. ಅವರ ಏಳಿಗೆಯನ್ನು ನಾನು ಸಹಿಸಲಾರೆನು. ನೂರು ಮಂದಿ ಮಕ್ಕಳೊಡನೆ ಕೂಡಿರುವ ನನಗೆ ಹೇಗೆ ನಡೆದರೆ ಕ್ಷೇಮಬರುವುದೋ ಆ ಅರ್ಧವನ್ನು ತಿಳುಹಿಸಬೇಕೆನಲು ಆ ಕಳಿಂಗನು ತೀಕ ವಾದ ನೀತಿಶಾಸ್ತ್ರವನ್ನು ಅವಲಂಬಿಸಿ ಇಂತೆಂದನು-ಎಲೈ, ಧೃತರಾಷ್ಟ್ರ ರಾಜನೇ ! ಕೇಳು ! ಲೋಕದಲ್ಲಿ ಅರಸುಗಳಿಗೆ ಬ್ರಾಹ್ಮಣರನ್ನು ಪೂಜಿಸುವುದೂ ದುಷ್ಟರನ್ನು ಶಿಕ್ಷಿಸುವುದೂ ಅಪರಾಧವನ್ನು ಮಾಡಿ ದವರಿಗೆ ಶಾಸ್ಕೋಕಪ್ರಕಾರವಾಗಿ ದಂಡನೆಯನ್ನು ಮಾಡುವುದೂ ನಿತ್ಯ ಕರ್ತವ್ಯವಾಗಿ ಇರುವುದು, ಹೀಗೆ ಮಾಡಿದರೆ ಇಹಪರಗಳಲ್ಲಿ ಸೌಖ್ಯವು ಲಭಿಸುವುದು. ಆಮೆಯು ತನ್ನ ಅಂಗಗಳನ್ನು ಇತರರಿಗೆ ತಿಳಿಸದೆ ಇರುವಂತೆ ಅರಸು ತನ್ನ ಮರ್ಮವನ್ನು ತಿಳಿಸದೆ ಸರರ ಮರ್ಮಗಳನ್ನು ತಾನು ತಿಳಿದುಕೊಂಡು ತಪ್ಪು ಮಾಡಿ ದವರನ್ನು ಸಾವಕಾಶ ಮಾಡದೆ ಶಿಕ್ಷಿಸುತ್ತಾ ಇದ್ದರೆ ಅವನಿಗೆ ಸಮಸ್ತ ಜನಗಳೂ ಭಯಪಟ್ಟು, ವಿನೀತರಾಗಿ ನಡೆಯುತ್ತಾ ಇರುವರು. ಅಪರಾಧ ಮಾಡಿದವರನ್ನು ಶಿಕ್ಷಿಸದೆ ಬಿಟ್ಟರೆ ಅವರ ದೆಸೆಯಿ೦ದ ಲೋಕದಲ್ಲಿ ಅವಮಾನವನ್ನು ಹೊಂದಿ ಇಹಪರ ಗಳಲ್ಲಿ ಸೌಖ್ಯವನ್ನು ಹೊಂದದೆ ಹೋಗುವನು ಐಶ್ವಖ್ಯಾತಿಶಯದಿಂದ ತನ್ನನ್ನು ಎಣಿ ಸದೆ ಇರುವಂಥಾವರನ್ನು ಹಿಡಿತರಿಸಿ ನಿಗ್ರಹಿಸಿ ಅವರ ಧನವನ್ನು ಅನ್ಯರಿಗೆ ಕೊಡಿಸ ಬೇಕು, ಒಂದು ಉದ್ಯೋಗವನ್ನು ನಡಿಸಬೇಕಾದರೆ ತನಗೆ ಆಪ್ತರಾಗಿಯೂ ಕಾರ್ಯ ಸಾಧನಾನಿಪುಣರಾಗಿಯ ಇರುವಂಧವರನ್ನು ಬಿಟ್ಟು ಅನ್ಯರನ್ನು ಆ ಕೆಲಸದಲ್ಲಿ ನಿಯೋಗಿಸಿದರೆ ಅವರಿಂದ ಆ ಕೆಲಸವು ನೆರವೇರಲಾರದು, ಗ್ರಾಮಗಳಲ್ಲಿಯ ಪಟ್ಟಿ ಣಗಳಲ್ಲಿ ಯ ದೇಶಗಳಲ್ಲಿಯೂ ನೇಮಿಸಿ ಇರಿಸಿದ ಜನಗಳು ಧರ್ಮಗಳನ್ನು ಬಿಡದೆ ಜನರಿಗೆ ತೊಂದರೆ ಕೊಡದೆ ಇರುವ ರೀತಿಯನ್ನು ಗೋಪ್ಯವಾಗಿ ಚಾರರ ಮುಖಾ೦ ರದಿಂದ ತಿಳಿದು ಅವರು ಒಂದು ವೇಳೆ ದುರ್ಮಾರ್ಗ ಪ್ರವರ್ತಕರಾದರೆ ಅವರನ್ನಾ ಕ ಇವೇ ಆ ಅಧಿಕಾರದಿಂದ ತಪ್ಪಿಸಿ ನಿಗ್ರಹಿಸಬೇಕು, ಅನ್ಯರಛಿದ್ರ ಗಳನ್ನು ತಾನು ತಿಳಿಯ ಬೇಕಲ್ಲದೆ ತನ್ನ ಛಿದ್ರಗಳನ್ನು ಒಬ್ಬರಿಗೂ ತಿಳಿಸಕೂಡದು. ಒಬ್ಬನನ್ನು ನಿಗ್ರಹಿಸಬೇಕಾದರೆ ಸಮಲವಾಗಿ ನಿಗ್ರಹಿಸಬೇಕು ಸ್ವಲ್ಪ ನಿಗ್ರಹಿ ಸಿ ಬಿಟ್ಟು ಬಿಟ್ಟರೆ ಅವನು ಅರ್ಧ ಮುರಿದ ಮುಳ್ಳಿನೋಪಾದಿಯಲ್ಲಿ ಬಾರಿಬಾರಿಗೂ ಬಾಧಿಸುತ್ತಾ ಇರುವನು, ಶತ್ರುವನ್ನು ಪ್ರಾಣಾಂತವಾಗಿ ನಿಗ್ರಹಿಸಿದರೆ ಸುಖವಾಗಿ ನಿಶಿ ಂತಯಿಂದಿರಬಹುದು, ಅಪರಾಧವನ್ನು ಮಾಡಿದವರೊಳಗೆ ಒಬ್ಬಿಬ್ಬರು ಮರು ಮಂದಿ ಹತ್ತು ಮಂದಿ ಸಿಕ್ಕಿದರೂ ಎಲ್ಲರೂ ಸಿಕ್ಕಲಿ ಎಂದು ಸುಮ್ಮನಿರದೆ ಸಿಕ್ಕಿದವ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೫೦
ಗೋಚರ