ಕಥಾಸಂಗ್ರಹ-೩ನೆಯ ಭಾಗ 137 ಚಿನ್ನ ಬೆಳ್ಳಿ ವಸ್ತ್ರಗಳೂ ಆಭರಣಗಳೂ ಮುತ್ತಿನ ಹಾರಗಳೂ ಹವಳಗಳೂ ಇವು ಮೊದ ಲಾದ ವಸ್ತುಗಳಲ್ಲಿ ಬೇಕಾದುದನ್ನು ಕೊಡುತ್ತೇನೆ. ತೆಗೆದು ಕೊಂಡು ತಡಮಾಡದೆ ನಡೆ ! ನಿನ್ನನ್ನು ನೋಡಲಾರೆನು ! ಬೇಗ ಹೊರಟು ಹೋಗು ! ಎಂದು ನುಡಿಯಲು ಶಕುಂತಳೆಯು-ಎಲೆ, ಮಹಾರಾಜನೆ ! ನಿನಗೂ ನನಗೂ ಸಾಸುವೆಕಾಳಿಗೂ ಮೇರುಪರ್ವತಕ್ಕೂ ಇರುವಷ್ಟು ಹೆಚ್ಚು ಕಡಿಮೆ ಇದೆ. ಹೇಗಂದರೆ ನಾನು ದೇವ ಕನಕೆಯು, ನೀನು ಮನುಷ್ಯನು, ಮತ್ತು ಸತ್ಯಕ್ಕೂ ಮತ್ತು ಅಸತ್ಯಕ್ಕೂ ನಿನ್ನ ಮನಸ್ಸೇಕಾರಣವು ; ನಾನು ಎಷ್ಟು ಹೇಳಿದರೂ ನನ್ನ ವಾಕ್ಯವನ್ನು ಸಟೆ ಎಂದು ದೃಢ ವಾಗಿ ನಂಬಿರುವ ತುಚ್ಛಮನುಷ್ಯನಾದ ನಿನ್ನಿ೦ದ ನನಗೇನಾಗಬೇಕು ? ಇಂಧ ಸಭೆಯಲ್ಲಿ ನನ್ನನ್ನು ಅವಮಾನ ಮಾಡಿದುದರಿಂದ ನಾನು ನಿನ್ನ ಬಳಿಯಲ್ಲಿ ಅರೆಗಳಿಗೆ ಯ ನಿಲ್ಲಲಾರೆನು, ನಾನಾದಲೋ ಹೋಗುತ್ತೇನೆ. ಇವನು ಖಂಡಿತವಾಗಿಯೂ ನಿನ್ನ ಮಗನು. ಲೋಕದಲ್ಲಿ ನಡೆ ನುಡಿ ಧ್ವನಿ ಬುದ್ದಿ ಬಲ ಆಚಾರ ವಿದ್ಯೆ ಪರಾಕ್ರಮ ಧೈರ್ಯ ಆಕಾರ ಮನಸ್ಸು ಸುಳಿಗಳು ಮೊದಲಾದ ಲಕ್ಷಣಗಳು ಇಬ್ಬರಿಗೂ ಒಂದೇ ಪ್ರಕಾರವಾಗಿ ಇದ್ದರೆ ಅವರೇ ತಂದೆ ಮಕ್ಕಳೆನ್ನಿಸಿಕೊಳ್ಳುವರು. ಆದುದರಿಂದ ಈ ಬಾಲಕನು ಸಕಲ ಲಕ್ಷಣಗಳಲ್ಲಿಯೂ ನಿನ್ನನ್ನೇ ಹೋಲುತ್ತಾನೆ. ತಂದೆಯೇ ಎಂದು ಮಾತಾಡಿಸುತ್ತಾ ನಿಂತುಕೊಂಡು ಇದ್ದಾನೆ. ಇಂಧವನನ್ನು ಅಂಗೀಕರಿಸದೆ ಇರಬೇಡ. ಇನ್ನು ಮೇಲಾದರೂ ದುರ್ಬುದ್ದಿಯನ್ನು ಬಿಟ್ಟು ಇವನನ್ನು ಮನ್ನಿಸು. ಇಲ್ಲದಿದ್ದರೆ ನಿನ್ನ ತಲೆ ಸಹಸ್ರ ಹೋಳಾಗುತ್ತದೆ ಎಂದು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಆಸ್ಥಾನವನ್ನು ಬಿಟ್ಟು ವನಕ್ಕೆ ಅಭಿಮುಖಳಾದಳು. ಆ ಸಮಯದಲ್ಲಿ ಋತ್ತಿ ಕುರೋಹಿತಾಚಾರ್ಯಮಂತ್ರಿಸಮೇತನಾದ ದುಷ್ಯಂತ ಮಹಾರಾಜನನ್ನು ಕುರಿತು ಅಶರೀರವಾಣಿಯು-ಎಲೈ, ರಾಯನೇ ! ನಿನಗೆ ಈ ಬಾಲಕನು ಪ್ರತ್ರನಹುದು. ಆ ಶಕುಂತಳೆಯು ಹೇಳಿದವುಗಳೆಲ್ಲಾ ಸತ್ಯವು. ಈಕೆಯು ಮಹಾ ಪತಿವ್ರತೆಯ ನಿನ್ನ ಪತ್ನಿಯ ಹೌದು, ಸಾವಿರ ಮಾತುಗಳಿಂದ ಪ್ರಯೋಜನವೇನು ? ಈ ಬಾಲಕನನ್ನು ಮನಃಪೂರ್ವಕವಾಗಿ ಅಂಗೀಕರಿಸು, ಶಕುಂ ತಳೆಯನ್ನು ಕರಿಸಿ ನನ್ನಿ ಸು. ನಿನ್ನ ಈ ಮಗನು ಭರತವೆಂಬ ನಾಮದಿಂದ ಪ್ರಸಿದ್ಧನಾಗಿ ಚಕ್ರವರ್ತಿ ಎನ್ನಿಸಿಕೊಂಡು ನಿನ್ನ ಕುಲವನ್ನು ಉದ್ಧರಿಸುವನು ಎಂದು ನುಡಿಯಲು ಆಗ ತಿಳುವಳಿಕೆಯಿಂದ ರಾಯಮ ಸಂತುಷ್ಟ ಚಿತನಾಗಿ ಸಿಂಹಾಸನದಿಂದಿಳಿದು ಸಭಾ ಜನರನ್ನು ಕುರಿತು ಎಲೈ, ಸಾಮಾಜಿಕರೇ ! ಕೇಳಿರಿ ಈ ಶಕುಂತಳೆಯು ನನ್ನ ಪತ್ನಿ ಎಂದೂ ಈ ಬಾಲಕನು ನನ್ನ ಮಗನೆಂದೂ ನಾನು ತಿಳಿದಿದ್ದರೂ ಲೋಕಾಪ ವಾದಕ್ಕೊಸ್ಕರ ಭಯ ಪಟ್ಟು ನನಗೆ ತಿಳಿಯದು ಎಂದು ಹೇಳಿದೆನೇ ಹೊರತು ಬೇರೆ ಅಲ್ಲ ಎಂದು ನುಡಿದು ಸಕಲ ಜನಸಮ್ಮತಿಯಿಂದ ಮಗನನ್ನು ತಬ್ಬಿಕೊಂಡು ಶಿರಸ್ಸನ್ನು ಆಘ್ರಾಣಿಸಿ ಕುಮಾರನ ಅಂಗಸಂಗದಿಂದ ಉಂಟಾದ ಸುಖವನ್ನನುಭವಿಸಿ ಶಕುಂತ ಳೆಯನ್ನು ಕರೆಯಿಸಿ ಬಹುಮಾನವನ್ನು ಮಾಡಿ ಸಕಲಜನ ಸಮ್ಮತವಾಗಿ ರಾಜ್ಯ ಪರಿ ಪಾಲನೆಯನ್ನು ಮಾಡಿಕೊಂಡು ಪತ್ನಿ ಪುತ್ರರೊಡನೆ ಸುಖದಲ್ಲಿದ್ದನು.
ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೯
ಗೋಚರ