ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 KANARESE SELECTIONS—PART III ಕವಾದ ಲಜ್ಜೆಯಿಂದಲೂ ದುಃಖದಿ೦ದಲೂ ಒಂದು ಗಳಿಗೆ ಮೈಮರೆತು ತಿರಿಗಿ ಧೈರ್ಯವನ್ನು ಹೊಂದಿ ಕೋಪಾವೇಶದಿಂದ ಕೆಂಪಾದ ಕಣ್ಣುಗಳುಳ್ಳವಳಾಗಿ ತುಟಿ ಗಳನ್ನಲ್ಲಾಡಿಸುತ್ತಾ ಆ ರಾಮನನ್ನು ವಕ್ರದೃಷ್ಟಿಗಳಿಂದ ಬಿರಬಿರನೇ ನೋಡುತ್ತಾ ಕೋಪದಿಂದ ಹುಟ್ಟಿರುವ ತೇಜೋವಿಶೇಷವನ್ನು ತನ್ನ ಧೈರ್ಯದಿಂದ ತಡೆದು ಸ್ವಲ್ಪ ಹೊತ್ತು ಆಲೋಚಿಸಿ ತಿರಿಗಿ ರಾಯನನ್ನು ನೋಡಿ-ಎಲೈ ರಾಯನೇ ! ನೀನು ತಿಳಿ ದರೂ ತಿಳಿಯದವನ ಹಾಗೆ ಯಾಕೆ ಹೀಗೆ ಮಾತಾಡುತ್ತಿದ್ದೀ ? ಇದಕ್ಕೆ ಸಾಕ್ಷಿಯಾದ ನಿನ್ನ ಮನಸ್ಸನ್ನು ಯಾಕೆ ವಂಚಿಸುತ್ತೀ? ಸಕಲ ಧರ್ಮಗಳನ್ನೂ ತಿಳಿದಿರುವಂಥಾ ನೀನು ಏತಕ್ಕೆ ಮೊದಲು ಹೇಳಿ ಈಗ ಹುಸಿಯುತ್ತೀ ? ಪತಿವ್ರತೆಯಾದ ನನ್ನನ್ನು ಕಾಮುಕಿ ಯಾಗಿ ತನಗೆ ತಾನೇ ಬಯಸಿ ಬಂದಳು ಎಂದು ತಿಳುದು ಕೊಳ್ಳಬೇಡ, ಬಹುಮಾನ ಪೂರ್ವಕವಾಗಿ ರಕ್ಷಿಸತಕ್ಕಂಥಾ ನನ್ನ ನ್ನು ಬಹುಮಾನಪಡಿಸದೆ ಉಪೇಕ್ಷೆ ಯನ್ನು ಮಾಡಲಾಗದು. ನೀನು ತುಚ್ಛ ಮನುಷ್ಯನ ಹಾಗೆ ಈ ತುಂಬಿದ ಸಭೆಯಲ್ಲಿ ಇಂಧಾ ನೀಚ ಮಾತುಗಳನ್ನು ಆಡುವುದು ಉಚಿತವಲ್ಲ, ವಿವೇಕಿಗಳಾದವರು ಕೋಪಬಂದರೂ ತಮ್ಮ ಹೆಂಡತಿಯರನ್ನು ಧಿಕ್ಕರಿಸಬಾರದು. ತಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತಬ್ಬಿ ಕೊಂಡು ಅತ್ಯಂತ ಸಂತೋಷಪಡಬೇಕು. ಎಂಥಾವರಾಗಲಿ ಮಹಾ ಬ್ರಹ್ಮ ಜ್ಞಾ ನಿಗಳಾದವರೂ ಸ್ತ್ರೀಯರಲ್ಲಿಯೇ ಹುಟ್ಟಬೇಕು. ಆದುದರಿಂದ ಸ್ತ್ರೀಯರು ಪ್ರಸಿದ್ದ ರಾಗಿ ರುವರು. ಲೋಕದಲ್ಲಿ ಮಗನಾಗಿರುವವನು ಧೂಳಿಗಳಲ್ಲಿ ಓಡ್ಯಾಡಿ ಮುದ್ದು ಮುದ್ದಾ ಗಿ ಬಂದು ತಂದೆಯ ಶರೀರವನ್ನು ತಬ್ಬಿಕೊಂಡರೆ ಅದರಿಂದುಂಟಾಗುವ ಸುಖಕ್ಕೆ ಸ್ವರ್ಗಲೋಕದ ಸುಖವಾದರೂ ಸಮಾನವಾಗಲಾರದು. ಹಾಗೆ ಇರುವಲ್ಲಿ ನಿನ್ನಂಥಾ ಮಹಾ ಪುರುಷನು ತಂದೆ ಎಂದು ನೆರೆನಂಬಿ ತನಗೆ ತಾನೇ ಬಂದ ದಿವ್ಯಕುಮಾರನನ್ನು ಆದರಿಸದೆ ಇರಬಹುದೇ ? ಇರುವೆ ಮೊದಲಾದ ತಿರಗ್ಲಾ ತಿಜಂತುಗಳೂ ಕೂಡ ತಮ್ಮ ತಮ್ಮ ಮೊಟ್ಟೆಗಳನ್ನು ಬಿಡದೆ ರಕ್ಷಿಸುತ್ತವೆ. ಕಾಗೆಗಳು ಕೋಗಿಲೆಯ ಮೊಟ್ಟೆಗಳನ್ನು ತಮ್ಮ ಮೊಟ್ಟೆಗಳೆಂದು ಪ್ರೀತಿಯಿಂದ ಕಾಪಾಡುತ್ತವೆ. ಹೀಗಿರುವಲ್ಲಿ ನಿನ್ನ ಧಾ ಪುರುಷನು ಹೊಟ್ಟೆಯಲ್ಲಿ ಹುಟ್ಟಿದ ವಂಶಾಲಂಕಾರವಾಗಿರುವ ಪುತ್ರರತ್ನ ವನ್ನು ಉಪೇಕ್ಷೆ ಮಾಡಬಹುದೇ ? ಇದಲ್ಲದೆ ನೀನು ಮದುವೆಯಾದ ನನ್ನಲ್ಲಿ ಏನು ಅಪರಾಧ ವನ್ನು ಕಂಡು ಬಿಡುತ್ತಿದ್ದೀ ? ಚಿಕ್ಕವಳಾಗಿರುವಾಗ ತಾಯಿತಂದೆಗಳನ್ನು ತೊರೆದು ಬಂದೆನು. ಈಗ ನೀನು ನನ್ನನ್ನು ತೊರೆದರೆ ನನಗೆ ಗತಿ ಯಾರು ? ಒಂದು ಪಕ್ಷದಲ್ಲಿ ನಾನಾದರೂ ನನ್ನ ತಂದೆಯ ಆಶ್ರಮಕ್ಕೆ ಹೋದೇನು, ಈ ಬಾಲಕನಾದ ಮಗನನ್ನು ಬಿಡುವುದು ಹೇಗೆ ? ಎಂದು ನುಡಿಯಲು ದಷ್ಯಂತನು ಆ ವಾಕ್ಯವನ್ನು ಕೇಳಿ ಹೀಗಂ ದನು-ಕೇಳ್ಳೆ ಶಕುಂತಳೆಯೇ ! ನಿನ್ನನ್ನೂ ನಿನ್ನ ಮಗನನ್ನೂ ನಾನು ಗುರು ತರಿಯೆನು. ಸಟೆ ಮಾತುಗಳನ್ನಾಡುವ ಸ್ತ್ರೀಯರನ್ನು ಯಾರು ನಂಬುವರು ? ಇಂಧ ಸುಳ್ಳು ಮಾತು ಗಳನ್ನು ನಾಚಿಕೆಯಿಲ್ಲದೆ ಈ ರಾಜಸಭೆಯಲ್ಲಿ ಏನೆಂದು ಆಡಿದೆ ? ಎಲಾ ದುಷ್ಟ ಯೇ ! ಇಂಧ ಅಸತ್ಯವಾದ ಮಾತುಗಳನ್ನು ಈ ಸಭೆಯಲ್ಲಿರುವ ಜನರೂ ನಾನೂ ಕೇಳ ಲಾರೆವು, ಎಲ್ಲಿಗಾದರೂ ಹೋಗು. ಸುಮ್ಮನೆ ಹೋಗುವುದಕ್ಕೆ ಮನಸ್ಸು ಇಲ್ಲದಿದ್ದರೆ