ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 13 ದಿಂದ ಸ್ವರ್ಗವನ್ನು ಬಿಟ್ಟು ಭೂಲೋಕಕ್ಕೆ ಬಂದ ದೇವಕನೈಕೆಯಾಗಿರಬೇಕೆಂದು ಎಣಿಸಿ ಹಾಗೆ ಒಬ್ಬರಿಗೊಬ್ಬರು ಹೇಳಿಕೊಂಡರು, ಮತ್ತು ಆ ಕುಮಾರನನ್ನು ಕಂಡು ಸಿಂಹದ ಸೊಂಟವೂ ಕೋರೆಯ ಹಲ್ಲುಗಳೂ ಮುಡುಹುಗಳೂ ಎದೆಯ ಬಲವೂ ಗಮನವೂ ಉಳ್ಳ ಸ್ವಭಾವ ರಕ್ತವಾದ ಚೆಂದುಟಿಯು ದುಂದುಭಿಧ್ವನಿಯಂತೆ ಧ್ವನಿಯ ಇವೇ ಮೊದಲಾದ ರಾಜಲಕ್ಷಣಗಳುಳ್ಳ ಈ ಕುಮಾರಕನಲ್ಲಿ ರಾಜಲಕ್ಷ್ಮಿಯು ತೋರುತ್ತಿದೆ. ಈ ಬಾಲಕನು ರೂಪ ಆಕಾರ ಶರೀರಕಾಂತಿ ವಿಶೇಷಗಳಿಂದ ನಮ್ಮ ದುಷ್ಯಂತರಾಜನನ್ನು ಹೋಲುತ್ತಿದ್ದಾನೆ. ಈತನು ಯಾರ ಕುಮಾರನೋ ? ಎಂದು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದರು. ಹೀಗೆ ಶಕುಂತಳೆಯು ಪ್ರೇಮದಿಂದ ನುಡಿಯುವ ಪಟ್ಟಣದ ಜನರ ಪ್ರಿಯ ವಾಕ್ಕುಗಳನ್ನು ಕೇಳುತ್ತಾ ಪುತ್ರಸಮೇತಳಾಗಿ ಅರಮನೆಯ ಬಾಗಿಲೆಡೆಗೆ ಹೋಗಿ ಕಾರ್ಯ ಗೌರವದಿಂದ ಮನಸ್ಸಿನಲ್ಲಿ ಚಿಂತೆ ಹೆಚ್ಚಲು ನಾಚಿಕೆಯಿಂದ ಮುಖವನ್ನು ಬೊಗ್ಗಿಸಿಕೊಂಡು ತಾನು ದಯೆಯಿಲ್ಲದ ಅರಸಿನ ಬಳಿಗೆ ಹೋಗಿ ನಿರ್ನಿಮಿತ್ತವಾಗಿ ಏನು ಮಾತಾಡಬೇಕೆಂದು ಚಿಂತಿಸುತ್ತಾ ಹಜಾರದಲ್ಲಿ ನಿಂತು ತಾನು ಬಂದಿರುವ ಸಮಾಚಾರವನ್ನು ದ್ವಾರಪಾಲಕರಿಂದ ಅರಸಿಗೆ ಅರಿಕೆ ಮಾಡಿಸಿ ಆತನ ಅಪ್ಪಣೆ ಯಿಂದ ಸೂರ್ಯನಿಗೆ ಸಮಾನವಾದ ಕಾಂತಿಯುಳ್ಳ ಕುಮಾರನೊಡನೆ ಅರಸನ ಸನ್ನಿ ಧಿಗೆ ಹೋಗಿ ಎರಡನೆಯ ದೇವೇಂದ್ರನೋಪಾದಿಯಲ್ಲಿ ಸಿಂಹಾಸನದ ಮೇಲೆ ಕುಳಿತಿ ರುವ ರಾಯನನ್ನು ಕಂಡು ಇಷ್ಟು ಕಾಲಕ್ಕೆ ಈ ರಾಯನ ದರ್ಶನವಾಯಿತು ಎಂದು ಸಂತೋಷ ಪಡುತ್ತಾ ತನ್ನ ಮಗನನ್ನು ಕುರಿತು-ಎಲೈ ! ದೃಢವ್ರತನಾದ ನಿನ್ನ ತಂದೆಗೆ ನಮಸ್ಕರಿಸು ಎಂದು ಕಟ್ಟು ಮಾಡಿ ನಾಚಿಕೆಯಿಂದ ತಲೆಯನ್ನು ಬೊಗ್ಗಿಸಿ ಕೊಂಡು ಒಂದು ಕಂಬದ ಮರೆಯಲ್ಲಿ ನಿಂತುಕೊಂಡಳು. ಆ ಬಾಲಕನು ತನ್ನ ತಂದೆ ಯಾದ ಮಹಾರಾಜನಿಗೆ ನಮಸ್ಕಾರವನ್ನು ಮಾಡಿ ಕೈಕಟ್ಟಿ ಕೊಂಡು ನಿಂತಿರಲು ದುಷ್ಯಂತರಾಜನು ಶಕುಂತಳೆಯನ್ನು ನೋಡಿ-ಮಗನೊಡನೆ ನೀನು ಇಲ್ಲಿಗೆ ಬಂದ ಕಾರ್ಯವೇನು ? ಹೇಳಿದರೆ ಆ ಕಾರ್ಯವನ್ನು ನಾನು ಮಾಡಿಕೊಟ್ಟೆನು ಎನಲು ಶಕುಂ ತಳೆಯು--ಎಲೈ, ಮಹಾರಾಜನೇ ! ಪೂರ್ವದಲ್ಲಿ ನೀನು ಬೇಟೆಯ ವಿನೋದದಿಂದ ವನದಲ್ಲಿ ತಿರುಗುತ್ತಾ ಕಣ್ಯಾಶ್ರಮಕ್ಕೆ ಬಂದ ಸಮಯದಲ್ಲಿ ನನ್ನಲ್ಲಿಟ್ಟ ಅನುಗ್ರಹದಿಂದ ಮದುವೆ ಮಾಡಿ ಕೊಳ್ಳುವಾಗ ಏನು ಸಂಕೇತವನ್ನು ಮಾಡಿದ್ದೆಯೋ ಆ ಪ್ರತಿಜ್ಞೆಯನ್ನು ಸ್ಕರಿಸಿ ಆ ಪ್ರಕಾರ ನಡಿಸು. ಇಗೋ ! ಈತನು ನಿನ್ನಿಂದ ನನ್ನಲ್ಲಿ ಹುಟ್ಟಿದ ಮಗನು, ಈತ ನಿಗೆ ಯುವರಾಜ ಪಟ್ಟವನ್ನು ಕಟ್ಟಬೇಕೆನಲು ದುಷ್ಯಂತನು ಆ ಮಾತನ್ನು ಕೇಳಿ ಒಳಗೆ ಸಂತೋಷಪಟ್ಟರೂ ಕಾರಣಾಂತರದಿಂದ ಅರಿಯದವನಂತೆ ಶಕುಂತಳೆಯನ್ನು ನೋಡಿ--- ನಾನು ನಿನ್ನನ್ನು ಎಂದೂ ನೋಡಿದವನೂ ಅಲ್ಲ, ಮದುವೆಯಾದವನೂ ಅಲ್ಲ. ಹೀಗೆ ಧರ್ಮವನ್ನು ತಪ್ಪಿ ಪರಿಗ್ರಹಿಸುವ ಸ್ವಭಾವವೂ ನನ್ನಲ್ಲಿಲ್ಲ, ಇಂಥಾ ವ್ಯರ್ಧವಾದ ಮಾತುಗಳನ್ನು ನುಡಿಯಬೇಡ, ಸುಮ್ಮನೆ ಇರಬೇಕಾದರೆ ಇರು. ಅಲ್ಲದೆ ಹೋಗಬೇ ಕಾದರೆ ಹೋಗು ಎನಲು ಶಕುಂತಳೆಯು ಆ ರಾಯನ ಮಾತುಗಳನ್ನು ಕೇಳಿ ಆಧಿ