ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 KANARESE SELECTIONS-PART III ಇತ್ತಲಾ ಮುನೀಂದ್ರರು ಶಕುಂತಳೆಯನ್ನು ನೋಡಿ ಒಳ್ಳೆಯ ಶಕುನಗಳು ಆಗುತ್ತವೆ. ಈ ಹೊತ್ತು ನೀನು ಮಹಾರಾಜನಿಗೆ ಪಟ್ಟದ ರಾಣಿಯಾಗುತ್ತೀ, ನಿನ್ನ ಮಗನಿಗೆ ಯುವರಾಜಪಟ್ಟಾಭಿಷೇಕವಾಗುತ್ತದೆ ಎಂದು ಹೇಳುತ್ತಾ ಅವಳನ್ನು ಕರ ಕೊಂಡು ನಾನಾ ಪ್ರಕಾರವಾದ ಧ್ವನಿಗಳ೦ದ ಒಪ್ಪುತ್ತಿರುವ ಆ ಪಟ್ಟಣದ ರಾಜ ವೀಧಿಯಲ್ಲಿ ಬರುತ್ತಿರುವಾಗ ಆ ಕುಮಾರನ ರೂಪರೇಖಾತಿಶಯಗಳನ್ನು ಕಂಡ ಪರ ಜನರು ಆಶ್ಚರ್ಯಪಟ್ಟು ಒಬ್ಬರೊಬ್ಬರನ್ನು ಕರೆಯುತ್ತಾ ಎರಡನೆಯ ಮಹಾಲಕ್ಷ್ಮಿ ಯಂತೆಯ ಜಯಂತನೊಡನೆ ಬರುವ ಶಚೀದೇವಿಯಂತೆಯೂ ಮುಂದೆ ಬರುವ ಈ ಅಂಗನಾಮಣಿಯು ಯಾರೋ ತಿಳಿಯದು ಎಂದು ಮಹಾ ಋಷಿಗಳ ಸಮಿಾಪಕ್ಕೆ ಬಂದು--ಎಲೈ, ಮಹಾ ಋಷಿಗಳಿರಾ ! ನಿಮಗೆ ನಮಸ್ಕಾರ ಮಾಡುತ್ತೇವೆ. ಇಂಥಾ ಪರಮಪವಿತ್ರರಾದ ನಿಮ್ಮನ್ನು ಕಂಡು ದರಿಂದ ನಮ್ಮ ಜನ್ಮಗಳು ಸಫಲವಾ ದವು ಎಂದು ಸ್ತುತಿಸಿದರು, ಅವರಲ್ಲಿ ಕೆಲವರು ಆ ಋಷಿಗಳ ಸಂಗಡಲೇ ಹೋಗಿ ಕುಮಾರಸ್ವಾಮಿಯ ಹಾಗೆ ಇರುವ ಆ ಕುಮಾರನನ್ನು ಕಂಡು ಸಂತೋಷಪಟ್ಟರು. ಆ ಸರ್ವದಮನನು ಎಂದೂ ಕಾಣದಿರುವ ಆ ಪಟ್ಟಣದ ಸೌಭಾಗ್ರಾತಿಶಯವನ್ನು ನೋಡಿ ತಾನು ದೇವೇಂದ್ರನ ಪಟ್ಟಣಕ್ಕೆ ಬಂದೆನೋ ಎಂದು ಸಂತೋಷಪಟ್ಟನು. ಮತ್ತು ಆ ಪಟ್ಟಣದಲ್ಲಿ ರುದ ಕೆಲವರು ಮಢರು ಕೃಷ್ಣಾಜಿನಗಳನ್ನು ಧರಿಸಿ ತಪ ಸ್ಸಿನಿಂದ ಕೃಶವಾದ ಶರೀರವುಳ್ಳವರಾಗಿ ಎದ್ದಿರುವ ನರಗಳೊಡನೆ ಕೂಡಿ ಹೊಂಬ ಇವುಳ್ಳ ನೇತ್ರಗಳನ್ನೂ ಜಡೆಗಳನ್ನೂ ಉದ್ದವಾದ ಹಲ್ಲುಗಳನ್ನೂ ಬೆನ್ನು ಹತ್ತಿರುವ ಹೊಟ್ಟೆಗಳನ್ನೂ ಬಿಟ್ಟ ಮಂಡೆಗಳನ್ನೂ ಎತ್ತಿದ ಕೈ ಗಳನ್ನೂ ಧರಿಸಿ ವಿಕಾರವಾದ ವೇಷಗಳೊಡನೆ ಕೂಡಿ ಇರುವ ಆ ಮುನೀಶ್ವರರನ್ನು ಕಂಡು--ಇದೇನು ಇವರು ಹೀಗಿರುವರು ! ಎಂದು ಹಾಸ್ಯ ಮಾಡಿದರು ಅಂಥಾ ದುರ್ಜನರ ಮಾತುಗಳನ್ನು * ಕೇಳಿ ಮುನಿಜನಗಳು-ಸಕಲವನ್ನು ಬಿಟ್ಟ ನಾವು ಏತಕ್ಕೆ ಪಟ್ಟಣಕ್ಕೆ ಬರಬೇಕು ? ಎಂದು ಹೇಳಿ ಅರಮನೆಯನ್ನು ಪ್ರವೇಶಿಸಿದ ಹಿಂದಿರುಗಿ ಗಂಗಾಯಮುನಾ ಸಂಗ ಮಸ್ಥಳಕ್ಕೆ ಬಂದರು ಆ ಮೇಲೆ ಶಕುಂತಳೆಯು ಮಗನೊಡನೆ ಪಟ್ಟಣದ ಬೀದಿಯಲ್ಲಿ ಹೋಗುತ್ತಿ ರುವಾಗ ಕೆಲವು ಜನಗಳು ಅವರನ್ನು ಕ೦ಡು-ಈ ಸ್ತ್ರೀರತ್ನ ವು ಯಾರೋ ತಿಳಿಯ ಕೂಡದು, ಹಂಸೆಯ ಹಾಗೆ ನಡೆಯ ಕೋಗಿಲೆಯ ಹಾಗೆ ಧ್ವನಿಯ ಚಂದ್ರನ ಹಾಗೆ ಮುಖವೂ ಮೊಲ್ಲೆ ಯ ಮೊಗ್ಗಿಗೆ ಸಮಾನವಾದ ನಗೆಯ ಕಾಂತಿಯ ತಾವ ರೆಯ ಹೂವಿನ ಒಳಗಣ ಎಸಳುಗಳ ಹಾಗೆ ಮೃದುವಾಗಿರುವ ಚರ್ಮವೂ ಕಮಲದ ಇದ ಹಾಗೆ ಇರುವ ನೇತ್ರಗಳೂ ಕುಂದಣದ ಹಾಗಿರುವ ಶರೀರದ ಬಣ್ಣವೂ ಹಿಡಿ ಯಲ್ಲಿ ಅಡಕವಾಗುವ ನಡುವೂ ವಕ್ರವಾಗಿಯೂ ಕಪ್ಪಾಗಿಯೂ ಹಿಮ್ಮಡಿಯಲ್ಲಿ ಬೀಳುವ ಕುರುಳುಗಳೂ ಚಿಗುರಿನ ಹಾಗೆ ಮೃದುವಾದ ಪಾದಗಳೂ ಲೋಕೋತ್ತರ ವಾದ ಸಕಲ ಶರೀರಲಕ್ಷಣಗಳೂ ಉಳ್ಳವಳಾಗಿ ಕೈಯಲ್ಲಿ ಕಮಲಮಾತ್ರವಿಲ್ಲದೆ 'ಇರುವ ಮಹಾಲಕ್ಷ್ಮಿಯ ಹಾಗೆ ತೋರುವಂಧ ಈಕೆಯು ಏನೋ ಒಂದು ಕಾರಣ