ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 133 ರವಸ್ಸಿನ ಅರಮನೆಯ ಪರ್ಯ೦ತರಕ್ಕೂ ಹೋಗಿ ಅಲ್ಲಿ ಸ್ನಾನವನ್ನು ಮಾಡಿ ಮಂಗಳಗಳ ನ್ಯಾ ಚರಿಸಿ ಕಂದಮೂಲಫಲಗಳನ್ನು ಭಕ್ಷಿಸಿ ಅಲ್ಲಿಂದ ಹೊರಟು ಬನ್ನಿರಿ, ಚುರುಕಾಗಿ ಪಯಣವನ್ನು ನಡೆಯಬೇಡಿರಿ, ಮಾರ್ಗದಲ್ಲಿ ಶ್ರಮ ತಟ್ಟಿತು ಎಂದು ನುಡಿಯಲು ಆ ಋಷಿಗಳು-ಹಾಗೇ ಆಗಲಿ ಎಂದು ಶಕುಂತಳೆಯನ್ನು ಮಗನು ಸಹಿತವಾಗಿ ಕರ ಕೊಂಡು ದುಷ್ಯಂತನ ಪಟ್ಟಣವನ್ನು ಕುರಿತು ನಡೆಯುವ ಸಮಯದಲ್ಲಿ ವನಗಳನ್ನೂ ನದಿಗಳನ್ನೂ ಪರ್ವತಗಳನ್ನೂ ತೊರೆಗಳನ್ನೂ ಗಿರಿಗಳನ್ನೂ ಗುಹೆಗಳನ್ನೂ ಪುಣ್ಯಾಶ್ರಮ ಗಳನ್ನೂ ನೋಡುತ್ತಾ ಅಲ್ಲಲ್ಲಿ ನಿಂತು ಶ್ರಮವನ್ನು ಪರಿಹರಿಸಿಕೊಂಡು ಮೆಲ್ಲ ಮೆಲ್ಲನೆ ಒಂದು ದಿವಸ ಮಧ್ಯಾಹ್ನದ ಸಮಯದಲ್ಲಿ ಪ್ರತಿಷ್ಟಾ ನಗರವನ್ನು ಸೇರಿ ಆ ಪಟ್ಟಣದ ಸಮೀಪದಲ್ಲಿರುವ ಉದ್ಯಾನವನಗಳನ್ನೂ ಪದ್ಮ ಶೋಭಿತಗಳಾದ ತಟಾಕಗಳನ್ನೂ ನೋ ಡುತ್ತಾ ಪೂರ್ವದಲ್ಲಿ ದೇವೇಂದ್ರನು ಪುರೂರವ ಮಹಾರಾಜನಿಗೋಸ್ಕರ ನಿರ್ಮಿಸಿ ಕೊಟ್ಟಿರುವುದಾದುದರಿಂದ ಸಕಲ ಸೌಭಾಗ್ಯದಿಂದ ಕೂಡಿದುದಾಗಿ ಅತ್ಯುನ್ನತವಾದ ಆಲಂಗಗಳೂ ಯಾವಾಗಲೂ ಆಳವು ಕಾಣಿಸದೆ ಇರುವ ಅಗಳುಗಳೂ ವಿಚಿತ್ರ ವಾದ ಕೊತ್ತಲಗಳೂ ಪಿರಂಗಿಗಳೂ ಜಂಜಾಲುಗಳೂ ಮಕರಡಿಬ್ಬಿ ಮೊದಲಾದ ಯಂತ್ರವಿಶೇ ಷಗಳೂ ಉಳ್ಳ ಕೋಟೆಗಳೂ ಉಪ್ಪರಿಗೆಗಳೂ ಸೆಜ್ಜೆಯ ಮನೆಗಳೂ ಸಣ್ಣ ವೀಧಿಗಳ ಜಗುಲಿಗಳೂ ಹಜಾರಗಳೂ ಮಂಟಪಗಳೂ ಅರವಟ್ಟಿಗೆಗಳೂ ಸಕಲ ಜನ ಮನೋ ಹರವಾಗಿ ಅತಿವಿಶಾಲವಾದ ರಾಜಮಾರ್ಗಗಳೂ ಕೈಲಾಸಶಿಖರಗಳೋಪಾದಿಯಲ್ಲಿ ಅತಿ ಶುಭ್ರವಾಗಿ ಅತ್ಯುನ್ನತವಾದ ಊರುಬಾಗಿಲುಗಳೂ ವ್ಯಾಘ್ರ ಮುಖಗಳೂ ಮೇಲು ಮದ್ದೆಗಳೂ ಹೆಬ್ಬಾಗಿಲುಗಳೂ ಉಳುದಾಗಿ ಸ್ವರ್ಗದಂತಿರುವ ಪಟ್ಟಣವನ್ನು ಪ್ರವೇ ಶಿಸಿ ತಮ್ಮ ತಮ್ಮ ಧರ್ಮಗಳನ್ನೂ ತಪ್ಪದೆ ಅಗ್ನಿಹೋತ್ರಗಳನ್ನೂ ಯಾಗಗಳನ್ನೂ ಮಾ ಡುತ್ತಾ ಧನಧಾನ್ಯಸಂಪನ್ನ ರೂ ರತ್ನಾ ಲಂಕಾರಭೂಷಿತರೂ ದಾನಶೀಲರೂ ದಯಾಸ ರರೂ ಆಗಿ ಕಾರ್ಯಕ್ಕೆ ಹೋಗದೆ ಪಾಪಗಳಿಗೆ ಭಯಪಟ್ಟು ಪುಣ್ಯಲೋಕಗಳು ಬೇಕೆಂಬ ಮನಸ್ಸಿನಿಂದ ಸದಾಚಾರಸಂಪನ್ನರಾಗಿರುವ ನಾನಾ ಜನಗಳನ್ನು ಕಾಣುತ್ತಾ ಸಂತೋಷಪಡುತ್ತಾ ಬರುತ್ತಿದ್ದರು. ಆ ಸಮಯದಲ್ಲಿ ದುಷ್ಯಂತ ಮಹಾರಾಜನು ಅಮರಾವತಿಯಂತಿರುವ ಪ್ರತಿ ಪ್ಲಾನಗರದ ಮಧ್ಯ ಪ್ರದೇಶದಲ್ಲಿ ದಿವ್ಯರತ್ನಮಯವಾದ ದೇವೇಂದ್ರನ ಮನೆಯಹಾಗೆ ಒಪ್ಪತ್ತಿರುವ ಅರಮನೆಯಲ್ಲಿ ಮಣಿಗಣಖಚಿತವಾದ ಒಂದು ಓಲಗದ ಹಜಾರದಲ್ಲಿ ರುವ ಉನ್ನತವಾದ ಸಿಂಹಾಸನದಲ್ಲಿ ಕುಳಿತು ಕೊಂಡು ಸರ್ವಾಲಂಕಾರಭೂಷಿತನಾಗಿ ಬ್ರಾಹ್ಮಣರು ಮೊದಲಾದ ಸಕಲ ವರ್ಣದವರೂ ಮಂತ್ರಿ ಜನಗಳೂ ಮಿಕ್ಕಾದವರೂ ಓಲಗಿಸುತ್ತಿರಲು ಸೂತಮಾಗಧರು ಜಯ ಜಯಧ್ವನಿಗಳಿಂದ ಹೊಗಳುತ್ತಿರಲು ಕಾರ್ಯಾರ್ಥಿಗಳಾಗಿ ಬಂದ ದೇಶದೇಶದನಿಯೋಗಿಗಳ ಕಾರ್ಯಗಳನ್ನು ವಿಚಾರಿ ಸುತ್ತಾ ಒಡೋಲಗದಲ್ಲಿ ಇದ್ದು ಬೇರೆಬೇರೆಯಾಗಿ ಅವರವರು ತಮಗೆ ಅಪ್ಪಣೆ ಯನ್ನು ತೆಗೆದು ಕೊಂಡು ಮನೆಗಳಿಗೆ ಹೋಗಲು ಮಿತಜನಗಳೊಡನೆ ಇಪ್ಪಾಲಾ ಪಗಳನ್ನು ಮಾಡುತ್ತಿದ್ದನು.