132 KANARESE SELECTIONS-PART III KANARESE SELECTIONS-PART III ದಲೂ ಬಿಳುಪೇರಿದ ಶರೀರವುಳ್ಳವಳಾಗಿ ಹಣೆಯಲ್ಲಿ ಜೋಲುತ್ತಿರುವ ಮುಂಗುರುಳು ಗಳುಳ್ಳವಳಾಗಿ ದಿನದಿನಕ್ಕೆ ಕೃಶಳಾಗಿ ಮಲಿನವಾದ ವಸ್ತ್ರಗಳನ್ನು ಧರಿಸಿ ಮುಖ ಕಾ೦ತಿ ತಪ್ಪಿ ದೈನ್ಯ ಹೆಚ್ಚಿ ಚಿಂತಿಸುತ್ತಿರಲು ಆ ಸರ್ವದಮನನು ಹನ್ನೆರಡು ವರು ಷದ ಪ್ರಾಯದವನಾಗಿ ಮಾನುಷ ಚರಿತ್ರೆಯನ್ನು ಅತಿಕ್ರಮಿಸಿ ಯುವರಾಜಪಟ್ಟಕ್ಕೆ ಯೋಗ್ಯನಾಗಿರುವುದನ್ನು ಕಂಡು ಕಣ್ವಮುನೀಶ್ವರನು ಶಕುಂತಳೆಯನ್ನು ನೋಡಿ ಎಲ್, ಶಕುಂತಳೆಯೇ ! ನಿನ್ನ ಗಂಡನಾದ ದುಷ್ಯಂತರಾಜನ ಸವಿಾಪಕ್ಕೆ ಹೋಗಿ ಆತನನ್ನು ಸೇವಿಸಿಕೊಂಡಿರುವುದೇ ನಿನಗೆ ಉಚಿತವು. ಆತನು ಇಷ್ಟು ಕಾಲದ ತನಕ ನನ್ನನ್ನು ಕರಿಸಲಿಲ್ಲವೆಂದು ಮನಸ್ಸಿನಲ್ಲಿ ಎಣಿಸಬೇಡ. ಆತನು ನಿನ್ನಿಂದ ಸಂತೋಷ ಪಟ್ಟು ನಿನ್ನ ಮಗನಿಗೆ ಯುವರಾಜಾಧಿಕಾರವನ್ನು ಕೊಡುತ್ತಾನೆ. ಈ ಮಗನನ್ನು ಕರಕೊಂಡು ಗಂಡನ ಸವಿಾಪಕ್ಕೆ ಹೋಗು ಎಂದು ಹೇಳಿ ತನ್ನ ಶಿಷ್ಯರನ್ನು ಕರೆದು ಸರ್ವಲಕ್ಷಣಸಂಪನ್ನೆ ಯಾದ ಈ ಶಕುಂತಳೆಯನ್ನ ಮಗನೊಡನೆ ಆ ರಾಯನ ಪಟ್ಟಣಕ್ಕೆ ಕರಕೊಂಡು ಹೋಗಿ ಬಿಟ್ಟುಬಿಡಿರಿ, ಸ್ತ್ರೀಯರು ಬಹುಕಾಲ ತಂದೆಯ ಮನೆಯಲ್ಲಿ ಇದ್ದರೆ ಸಚ್ಚರಿತ್ರೆ ಧರ್ಮಗಳು ತಪ್ಪುವದರಿಂದ ತಡಮಾಡದೆ ಕರಕೊಂಡು ಹೋಗಿರಿ ಎನಲು ಆಗೆ ಶಕುಂತಳೆಯು ತಂದೆಯಾದ ಕಣ್ಯಮುನೀಶ್ವರನಿಗೆ ನಮಸ್ಕಾರವನ್ನು ಮಾಡಿ ಕೈ ಮುಗಿದು- ಎಲೈ ಮಹಾನುಭಾವನೇ ! ನಾನು ತಂದೆ ಎಂಬ ಸಲಿಗೆ ಯಿಂದ ಈ ವರೆಗೂ ಕಲಿತೂ ಕಲಿಯದೆ ಮಾಡಿದ ಕಾರ್ಯಗಳಿಂದಲೂ ಅರಿತೂ ಅರಿ ಯದೆ ಆಡಿದ ಮಾತುಗಳಿಂದಲೂ ಉಂಟಾದ ಅಪರಾಧವನ್ನು ಪುತ್ರವಾತ್ಸಲ್ಯದಿಂದ ನೀನು ಕ್ಷಮಿಸಬೇಕೆನಲು ಆತನು ಆ ಮಗಳಲ್ಲಿರುವ ಕೃಪಾವಶೇಷದಿಂದ ಬದಲು ಮಾತನಾಡುವುದಕ್ಕೆ ತೀರದೆ ತಲೆಯನ್ನು ಬೊಗ್ಗಿಸಿಕೊಂಡು ಲೌಕಿಕ ಮನುಷ್ಯನ ಹಾಗೆ ಕಣ್ಣಿನಲ್ಲಿ ನೀರು ತುಂಬಿ ಕೆಲವು ಹೊತ್ತಿನ ಮೇಲೆ ಧೈರ್ಯವನ್ನು ತಂದು ಕೊಂಡು ಉದಕಪಾನಗಳಿಂದ ದಿನಗಳನ್ನು ತಳ್ಳುತ್ತಿರುವವರೂ ವಾಯುಭಕ್ಷಣೆ ಯಿಂದ ಕಾಲಕ್ಷೇಪವನ್ನು ಮಾಡುವಂಧಾವರೂ ಹಣ್ಣೆಲೆಗಳನ್ನು ಭಕ್ಷಿಸುವಂಥಾ ವರೂ ಕಂದಮೂಲಾದಿಗಳಿಂದ ತೃಪ್ತಿ ಪಡುವಂಥಾವರೂ ನಾರು ಸೀರೆಗಳನ್ನು ಉಟ್ಟು ಕೃಷ್ಣಾ ಬೆನವನ್ನು ಉತ್ತರೀಯವಾಗಿ ಮಾಡಿಕೊಂಡಿರುವಂಥಾವರೂ ತಸ ಸ್ಸಿನಿಂದ ಕೃಶವಾಗಿನರಗಳು ಹೊರಟು ಇರುವಂಧಾವರೂ ವ್ರತನಿಷ್ಠರಾಗಿರು ವಂಥಾವರೂ ಜಟಾಧಾರಿಗಳಾಗಿರುವಂಥಾವರೂ ಜುಟ್ಟಿಲ್ಲದೆ ಇರುವಂಧಾವರ ಇವರೇ ಮೊದಲಾದ ಮಹಾ ಮುನೀಶ್ವರರನ್ನು ಕರೆದು--ಎಲೈ ಮಹಾನುಭಾ ವರುಗಳಿರಾ ! ನಮ್ಮ ಶಕುಂತಳೆಯು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಯಾವಾ ಗಲೂ ನಾನೇ ಸಂರಕ್ಷಿಸಿದುದರಿಂದ ಇವಳು ಮತ್ತೇನನ್ನೂ ಅರಿತವಳಲ್ಲದೆ ಇರುವಳು ಆದುದರಿಂದ ಮಾರ್ಗದಲ್ಲಿ ಶ್ರಮವು ತೋರದೆ ಇರುವಹಾಗೆ ಇಲ್ಲಿಗೆ ಎರಡು ಗಾವುದ ದಾರಿಯಿಂದ ಆಚೆಗೆ ಇರುವ ಪ್ರತಿಷ್ಠಾನಗರಕ್ಕೆ ಚಿಕ್ಕ ಚಿಕ್ಕ ಪಯಣಗಳಿಂದ ಕರ ಕೊಂಡು ಹೋಗಬೇಕು, ಸರ್ವಸಂಪತ್ತುಗಳಿಂದಲೂ ತುಂಬಿರುವ ಗಂಗಾ ಯಮುನಾ ಸಂಗಮದಲ್ಲಿ ತೋರುವ ಪ್ರತಿಷ್ಠ ಪಟ್ಟಣದಲ್ಲಿ ಸರ್ವದಮನನಿಗೆ ಮುತ್ತಪ್ಪನಾದ ಪುರೂ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೪
ಗೋಚರ