ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 131 ನೀನು ಈ ವನದಲ್ಲೇ ಇರು ಸತ್ಯವಾಗಿ ಹೇಳುತ್ತೇನೆ, ಸಂಶಯ ಪಡಬೇಡ ಎನಲು ಶಕುಂ ತಳೆಯು ಆತನನ್ನು ಪ್ರೇಮದಿಂದ ತಬ್ಬಿಕೊಂಡು ಆತನಿಗೆ ಪ್ರದಕ್ಷಿಣ ನಮಸ್ಕಾರಗ ಳನ್ನು ಮಾಡಿ ಮುಗುಳುನಗೆಯಿಂದ ಮುಖವು ಪ್ರಕಾಶಿಸುವ ಹಾಗೆ ಎದುರಾಗಿ ನಿಂತು ಮುಖವನ್ನು ನೋಡಿ ಪಾದಗಳಿಗೆ ಅಡ್ಡಬಿದ್ದು ಎದ್ದು ಕಣ್ಣೀರು ತುಂಬಿ ನಿಲ್ಲಲು ಆ ದುಷ್ಯಂತರಾಜನು ಆಕೆಯನ್ನು ತಬ್ಬಿಕೊಂಡು ಗಲ್ಲವನ್ನು ಹಿಡಿದು-ಯಾತಕ್ಕೆ ಮನಸ್ಸಿನಲ್ಲಿ ಇಷ್ಟು ಚಿಂತಿಸಬೇಕು ? ನನ್ನ ಪುಣ್ಯಸಾಕ್ಷಿಯಾಗಿ ತಿರಿಗಿ ಬಂದು ನಿನ್ನನ್ನು ಕರಕೊಂಡು ಹೋಗುತ್ತೇನೆ ಎಂದು ಸಂತೈಸಿ ಅವಳನ್ನು ಅಲ್ಲೇ ಇರಿಸಿ ಉಗ್ರತಪಸ್ವಿ ಯಾದ ಕಣ್ಯ ಮಹಾಮುನೀಶ್ವರನು ಈ ವೃತ್ತಾಂತವನ್ನು ಕೇಳಿ ಏನು ಮಾಡುವನೋ ಎಂದು ಚಿಂತಿಸುತ್ತಾ ಪಟ್ಟಣಕ್ಕೆ ಹೊರಟು ಹೋದನು. ಬಳಿಕ ಶಕುಂತಳೆಯ-ದುಷ್ಯಂತ ಮಹಾರಾಜನು ತಾನು ಹೇಳಿದ ಪ್ರಕಾ ರವೇ ಚತುರಂಗಬಲಸಮೇತನಾಗಿ ಬ್ರಾಹ್ಮಣರನ್ನೂ ಜನರನ್ನೂ ಕೂಡಿಕೊಂಡು ಈಹೊತ್ತು ನಾಳೆ ನಾಳಿದ್ದು ಯಾವಾಗಲಾದರೂ ಅವಶ್ಯವಾಗಿ ಬರುವನು ಎಂದು ಎದುರಾಗಿ ದಾರಿಯನ್ನು ನೋಡುತ್ತಾ ದಿನ ವರುಷ ಮಾಸ ಋತು ಅಯನಗಳನ್ನು ಕಳೆದು ಬೇಸರಪಟ್ಟು ಸ್ನಾನ ಭೋಜನ ನಿದ್ರೆಗಳನ್ನು ಬಿಟ್ಟು ಮೂರು ವರುಷಗಳ ಮೇಲೆ ದಿವ್ಯ ತೇಜೋವಿರಾಜಮಾನನಾದ ರೂಪಲಾವಣ್ಯಗಳುಳ್ಳ ಮಗನನ್ನು ಪಡೆ ದಳು. ಆ ಕುಮಾರನು ಹುಟ್ಟಿದ ಸಮಯದಲ್ಲಿ ಅಂತರಿಕ್ಷದಿಂದ ಪುಷ್ಪವೃಷ್ಟಿ ಯು ಸುರಿ ಯಿತು. ಅನೇಕ ಪ್ರಕಾರವಾದ ದೇವದುಂದುಭಿಗಳು ಮೊಳಗಿದವು. ಸಕಲಲೋಕ ಮನೋಹರವಾಗಿ ಗಂಧರ್ವರು ಗಾನವನ್ನು ಮಾಡಿದರು, ಕಣ್ವ ಋಷೇಶ್ವರನು ಅತಿ ಸಂತೋಷಪಟ್ಟು ಅಲ್ಲಿ ಇರುವ ಮಹರ್ಷಿಗಳನ್ನು ಕರಿಸಿ ಆ ಕುಮಾರಕನಿಗೆ ಜಾತಕರ್ಮ ಮೊದಲಾದ ಸಂಸ್ಕಾರಗಳನ್ನು ಶಾಸ್ಕೋಕಪ್ರಕಾರವಾಗಿ ನೆರವೇರಿಸಿದನು ಆ ಕುಮಾ ರನು ದೇವಕುಮಾರ ಸಮಾನನಾಗಿ ಆ ಆಶ್ರಮದಲ್ಲಿ ದಿನದಿನವೂ ಬೆಳೆದು ಸವಿಾಪದಲ್ಲಿ ಜನರನ್ನು ಪೀಡಿಸುತ್ತಿರುವ ಸಿಂಹ ಹುಲಿ ಕರಡಿ ಕಾಡುಹಂದಿ ಕಾಡೋಣ ಮೊದಲಾದ ಕ್ರೂರ ಜಂತುಗಳನ್ನು ತನ್ನ ಭುಜಬಲದಿಂದ ಹಿಡಿದು ಕಟ್ಟಿಹಾಕಿ ಅವುಗಳ ಮೇಲೆ ಹತ್ತಿ ಓಡಾಡುತ್ತಾ ಆಶ್ರಮಕ್ಕೆ ಉಪದ್ರವನ್ನು ಮಾಡುತ್ತಿರುವ ಪಿಶಾಚ ಸಮೂಹಗ ಇನ್ನೂ ರಾಕ್ಷಸರನ್ನೂ ತನ್ನ ಮುಟ್ಟಿ ಯ ಪೆಟ್ಟಿನಿಂದ ಹೊಡೆದು ಕೆಡಹುತ್ತಾ ಆಶ್ರಮ ವನ್ನು ನಿಷ್ಕಂಟಕವಾಗಿ ಮಾಡಿದುದರಿಂದ ಕಣ್ಮನೇ ಮೊದಲಾದ ಋಷಿಗಳು ಆತನಿಗೆ ಸರ್ವದಮನನೆಂದು ಹೆಸರನ್ನಿಟ್ಟರು. ಆ ಬಳಿಕ ದುಷ್ಯಂತನು ತಾನು ಮಾಡಿದ ಕಾರ್ಯಕ್ಕೆ ಕಮುನೀಶ್ವರನು ಕೋಪಿಸಿಕೊಂಡು ಶಪಿಸುವನೆಂದು ಎಣಿಸಿ ಶಕುಂತಳೆಯಲ್ಲಿ ಅನುರಾಗವಿದ್ದರೂ ತನ್ನ ಪಟ್ಟಣಕ್ಕೆ ಕರೆತರುವುದಕ್ಕೆ ಭಯ ಪಟ್ಟು ಕೊಂಡಿದ್ದನು, ಆ ಬಳಿಕ ಕೆಲವು ಕಾಲ ವಾಗಲು, ಬಹು ಕಾರ್ಯಾಸಕ್ತನಾದುದರಿಂದ ಆ ವೃತ್ತಾಂತವನ್ನೆ ಮರೆತು ರಾಜ್ಯ ವನ್ನಾಳುತ್ತಿದ್ದನು. ಇತ್ತಲಾಗಿ ಶಕುಂತಳೆಯು ತನ್ನ ಗಂಡನಾದ ದುಷ್ಯಂತರಾಜನು ಮಗನು ಸಹಿತವಾಗಿ ತನ್ನನ್ನು ಕರಕೊಂಡು ಹೋಗದೆ ಇರುವುದರಿಂದಲೂ ವಿರಹವೇದನೆಯಿಂ