ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 KANARESE SELECTIONS-PART III , ಕನಕೆಯೇ ! ನೀನು ಕ್ಷತ್ರಿಯ ಕನೈಯಾಗಿರುವುದು ನಿಶ್ಚಯವಾಯಿತು. ಇನ್ನು ನನಗೆ ಹೆಂಡತಿಯಾಗಿ ನನ್ನ ಮನೋರಧವನ್ನು ಸಲ್ಲಿಸಬೇಕೆನಲು ಶಕುಂತಳೆಯುಎಲೈ, ರಾಯನೇ ! ನನ್ನ ತಂದೆಯು ವನದಿಂದ ಬರುವವರೆಗೂ ನೀನಿಲ್ಲಿದ್ದರೆ ಆತನೇ ನನ್ನನ್ನು ನಿನಗೆ ಮದುವೆಮಾಡಿ ಕೊಡುತ್ತಾನೆ ಕನ್ಯ ಕೆಗೆ ತಂದೆಯೇ ಗುರುವಾದುದ ರಿಂದ ಆತನು ಅವಳನ್ನು ಯಾರಿಗೆ ಕೊಡುತ್ತಾನೋ ಅವನೇ ಅವಳಿಗೆ ಗಂಡನು. ನೀನು ಧರ್ಮಜ್ಞನು, ಸ್ತ್ರೀಯರಿಗೆ ಬಾಲ್ಯದಲ್ಲಿ ತಂದೆಯ ಯೌವನದಲ್ಲಿ ಗಂಡನೂ ಮುಪ್ಪಿ ನಲ್ಲಿ ಮಗನೂ ರಕ್ಷಕರಾದುದರಿಂದ ಅವರಿಗೆ ಯಾವಾಗಲೂ ಸ್ವಾತಂತ್ರ್ಯವಿಲ್ಲ. ಹೀಗಿ ರುವಲ್ಲಿ ತಂದೆಯ ಅನುಮತಿ ಇಲ್ಲದೆ ನಿನ್ನ ನ್ನು ಧರ್ಮ ವಿರುದ್ಧವಾಗಿ ಹೇಗೆ ಮದುವೆ ಯಾಗಲಿ ? ಎಂದು ಹೇಳಿದಳು ಆ ಶಕುಂತಲೆಯನ್ನು ಕುರಿತು ರಾಯನು--ಎಲೈ. ಶಕುಂತಳೆಯೇ ! ಈ ಕಾರ್ಯಕ್ಕೆ ನಿನ್ನ ತಂದೆಯು ಕೋಪಿಸನು, ತನ್ನ ಶರೀರಕ್ಕೆ ತಾನೇ ಬಾಧ್ಯಳಾದುದರಿಂದ ತನ್ನನ್ನು ತಾನೇ ದಾನಮಾಡುವುದು ಧರ್ಮವಿಹಿತವು. ಬ್ರಾಹ್ಮ ದೈವ ಅರ್ಷ ಪ್ರಾಜಾಪತ್ಯ ಆಸುರ ಗಂಧರ್ವ ರಾಕ್ಷಸ ಪೈಶಾಚಗಳೆಂದು ವಿವಾಹಗಳು ಎಂಟು ತೆರನಾಗಿರುವವು. ಈ ವಿವಾಹಗಳಲ್ಲಿ ಮೊದಲು ಹೇಳಿದ ನಾಲ್ಕು ಬ್ರಾಹ್ಮಣರಿಗೆ ಪ್ರಶಸ್ತವಾಗಿವೆ ಕ್ಷತ್ರಿಯರಿಗೆ ಮೊದಲು ಹೇಳಿದ ಆರೂ ವೈಶ್ಯ ಶೂದ್ರರಿಗೆ ಆಸುರವೂ ಯುಕ್ತವು, ಬ್ರಾಹ್ಮಣರಿಗೆ ಉಚಿತವಾದ ಬ್ರಾಹ್ಮ ದೈವ ಆರ್ಷ ಪ್ರಾಜಾಪತ್ಯಗಳೆಂಬ ನಾಲ್ಕು ವಿವಾಹಗಳೊಳಗೆ ಯಾವುದಾದರೂ ಒಂದು ಗಾಂಧರ್ವ ರಾಕಸ ವಿವಾಹಗಳೆರಡು ಅ೦ತು ಈ ಆರು ವಿವಾಹಗಳು ಕ್ಷತ್ರಿ ಯರಿಗೆ ಯೋಗ್ಯವಾಗಿರುವುವು, ಒಂದು ವೇಳೆ ಕ್ಷತ್ರಿಯನು ರಾಕ್ಷಸ ವಿವಾಹವನ್ನೂ ಮಾಡಿಕೊಳ್ಳಬಹುದೆಂದು ಸ್ವಾಯಂಭುವ ಎಂಬ ಮನುವು ಹೇಳಿದ್ದಾನೆ ಆದುದರಿಂದ ನಿನ್ನಲ್ಲೇ ತಗುಲಿರುವ ಮನಸ್ಸುಳ್ಳ ನನ್ನನ್ನು ಗಾಂಧರ್ವ ವಿವಾಹದಿಂದ ಮದುವೆ ಮಾಡಿಕೊ ಎನಲು ಆ ಶಕುಂತಳೆಯು– ಎಲೈ, ರಾಯನೇ ! ತಂದೆಯ ಅಪ್ಪಣೆ ಇಲ್ಲದೆ ಮದುವೆಯಾಗುವುದು ಧರ್ಮ ವಿರುದ್ಧವಲ್ಲವೆಂದು ನಿನಗೆ ತೋರಿದರೆ ನಾನೊಂದು ಸಂಕೇತವನ್ನು ಮಾಡುತ್ತೇನೆ ಏನಂದರೆ, ನಿನ್ನ ರಾಜ್ಯಾಧಿಕಾರವನ್ನು ನನ್ನ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ನೀನು ಕೊಡಬೇಕು. ಇದು ನಿನಗೆ ಸಮ್ಮತ ವಾದರೆ ನೀನು ಹೇಳಿದಹಾಗಾಗಬಹುದು ಎನಲು ರಾಯನು--ಹಾಗೇ ಆಗಲೆಂದು ಪ್ರತಿಜ್ಞೆಯನ್ನು ಮಾಡಿಕೊಟ್ಟು ಅವಳು ಕೋರಿದ ಮೇರೆಗೆ ತನ್ನ ಪುರೋಹಿತನನ್ನು ಕರಿಸಿ ಸಾಂಗವಾಗಿ ಗಾಂಧರ್ವ ವಿವಾಹದಿಂದ ಆ ಶಕುಂತಳೆಯನ್ನು ವರಿಸಿ ಅವಳೊ ಡೇನೆ ಅಭೀಷ್ಟ ಭೋಗಗಳನ್ನು ಪಡೆದು ತಿರಿಗಿ ತನ್ನ ಪಟ್ಟಣಕ್ಕೆ ಹೋಗಬೇಕೆಂದು ಆಲೋ ಚಿಸಿ ಆ ಶಕುಂತಳೆಯನ್ನು ಕುರಿತು-ಎಲೆ, ಪ್ರಿಯಳೇ ! ನಾನು ಪಟ್ಟಣಕ್ಕೆ ಹೋಗಿ ಆನೆ ಕುದುರೆ ರಥ ಪದಾತಿಗಳನ್ನೂ ನನ್ನ ಬಿರುದಾವಳಿಯನ್ನೂ ಓಲಗ ತಮಟೆ ಭೇರಿ ಮೃದಂಗ ಕಹಳೆ ಇವೇ ಮೊದಲಾದ ವಾದ್ಯಗಳನ್ನೂ ಗಾಯಕ ನರ್ತಕಿಯರನ್ನೂ ದಾಸ ದಾಸೀ ಜನರನ್ನೂ ಆಂದೋಳಿಕೆಗಳನ್ನು ಇಲ್ಲಿಗೆ ತೆಗೆಯಿಸಿಕೊಂಡು ಬಂದು ಸಂಭ್ರಮದೊಡನೆ ನಿನ್ನನ್ನು ಕರೆದು ಕೊಂಡು ಹೋಗುತ್ತೇನೆ. ಆ ಪರ್ಯ೦ತರವೂ