ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 129 ಪ್ರಕಾರವಾದರೆ ಅಂಥವರಿಗೆ ಆತ್ಮಹತ್ಯಾದೋಷವು ಸಂಘಟಿಸುತ್ತದೆ. ಆದುದರಿಂದ ನನ್ನ ಸ್ಥಿತಿಯನ್ನು ಯಥಾರ್ಧವಾಗಿ ಹೇಳುತ್ತೇನೆ ಒಂದು ದಿವಸ ಒಬ್ಬ ಮುನೀಶ್ವರನು ಬಂದು ಕಬ್ಬನಿಂದ ಪೂಜಿತನಾಗಿ ಆತ ನನ್ನು ಕುರಿತು ನೀನು ಕೇಳಿದ ರೀತಿಯಲ್ಲಿ ಪ್ರಶ್ನೆ ಯನ್ನು ಮಾಡಲು ' ನನ್ನ ತಂದೆಯು ನನ್ನ ಕಿವಿಗೆ ಬೀಳುವಹಾಗೆ ಆತನನ್ನು ಕುರಿತು ಇಂತೆಂದನು--ಎಲೈ ಭಾರ್ಗವ ಮುನಿಯೇ ! ನನಗೆ ಪರಮಮಿತ್ರನಾದ ವಿಶ್ವಾಮಿತ್ರನು ಘೋರವಾದ ತಪಸ್ಸನ್ನು ಮಾಡುತ್ತಿರಲು ಆ ತಪಸ್ಸಿಗೆ ಇಂದ್ರನು ಭಯ ಪಟ್ಟು ಆತನ ತಪೋಬಲವನ್ನು ಕೆಡಿ ಸಬೇಕೆಂದು ಮೇನಕೆ ಎಂಬ ಅಪ್ಪರಸ್ತ್ರೀಯನ್ನು ಕರೆದು--ನೀನು ಸಕಲರೂಪಸೌಂ ದರ್ಯಯುಕ್ತಳಾದುದರಿಂದ ನನ್ನ ಅಪ್ಪಣೆಯ ಮೇರೆಗೆ ವಿಶ್ವಾಮಿತ್ರನ ತಪಸ್ಸನ್ನೂ ಬ್ರಹ್ಮಚಯ್ಯಾವ್ರತವನ್ನೂ ಕೆಡಿಸಿ ನನಗೆ ಹಿತವನ್ನು ೦ಟುಮಾಡಬೇಕೆನಲು ಆ ಮೇನ ಕೆಯು ಇಂದ್ರನನ್ನು ನೋಡಿ-ಎಲೈ ಇಂದ್ರನೇ ಆ ವಿಶ್ವಾಮಿತ್ರನ ಕೋಪಕ್ಕೆ ನೀವೇ ಭಯಪಡುವಾಗ ಅಂಧಾ ಜಿತೇಂದ್ರಿಯನ ಎದುರಿಗೆ ನಿಲ್ಲುವುದಕ್ಕೆ ನಾನೆಷ್ಟು ಮಾತ್ರ ದ ವಳು ! ಆತನು ಸಾಮಾನ್ಯ ಪುರುಷನಲ್ಲ, ಆತನು ಬಹ್ಮ ಸೃಷ್ಟಿಗೆ ಬದಲಾಗಿ ತನ್ನ ಮನಸ್ಸಿಗೆ ಬಂದುದನ್ನೆಲ್ಲಾ ಸೃಷ್ಟಿಸಬಲ್ಲನು, ಇಂಧಾ ಅದ್ಭುತ ಮಹಿಮೆಯುಳ್ಳ ಆತನ ಎದುರಿಗೆ ನಿಂತು ಹೇಗೆ ಜೀವಿಸಲಿ ? ಆದರೂ ನಿನ್ನ ಮಾತು ಮೀಾರಕೂಡದು, ಆದಕಾ ರಣ ನಾನು ಹೋಗಿ ಸೌಖ್ಯದಿಂದ ಹಿಂತಿರಿಗಿ ಬರುವ ಹಾಗೆ ನನ್ನ ಸಹಾಯಕ್ಕೆ ಮನ ಧನನ್ನೂ ಮಂದಮಾರುತನನ್ನೂ ಕಳುಹಿಸಬೇಕೆನಲು ಇಂದ್ರನು ಆ ಮಾತಿಗೆ ಒಪ್ಪಿ ಅವರನ್ನು ಸಂಗಡ ಕಳುಹಿಸಲು ; ಆ ಮೇನಕೆಯು ಅವರಿಬ್ಬರ ಸಹಾಯದಿಂದ ವಿಶ್ವಾಮಿತ್ರನ ಆಶ್ರಮದ ಬಳಿಗೆ ಬಂದು ತಪಸ್ಸಿನಿಂದ ಕೃಶನಾಗಿರುವ ಆತನನ್ನು ಕಂಡು ನಮಸ್ಕರಿಸಿ ನಾನಾ ವಿಧ ಶೃಂಗಾರಚೇಷ್ಟೆಗಳನ್ನು ತೋರಿಸುತ್ತಾ ಉಪಚರಿಸುತ್ತಿರಲು ಆ ವಿಶ್ವಾಮಿತ್ರನು ಇವಳ ರೂಪಲಾವಣ್ಯಗಳನ್ನು ನೋಡಿ ಮೋಹಿತನಾದನು. ಹೀಗೆ ಮೇನಕೆಯು ಆತನಿಂದ ಗರ್ಭವನ್ನು ಧರಿಸಿ ಈ ಶಕುಂತಳೆಯನ್ನು ಹೆತ್ತು ತನ್ನ ಒಡೆಯನ ಕೆಲಸವು ಕೈಸೇರಿತೆಂದು ತಿಳಿದು ಆ ಶಿಶುವನ್ನು ಹಿಮವತ್ಪರ್ವತದ ಸವಿಾಪ ದಲ್ಲಿ ಹರಿಯುವ ಈ ಮಾಲಿನೀನದಿಯ ತೀರದಲ್ಲಿರಿಸಿ ಶುಭವಾಗಲಿ ! ಎಂದು ಹರಸಿ ಅಮರಾವತಿ ಪಟ್ಟಣಕ್ಕೆ ಹೊರಟುಹೋದಳು. ನಾನು ಒಂದಾನೊಂದು ದಿವಸ ಸ್ವಾನಾರ್ಧ ವಾಗಿ ಆ ಮಾಲಿಸೀ ನದಿಗೆ ಹೋಗಿ ಅಲ್ಲಿ ಅಳುತ್ತಿರುವ ಶಿಶುವನ್ನು ನೋಡಿ ನನ್ನ ದಿವ್ಯ ದೃಷ್ಟಿ ಯಿಂದ ನಡೆದ ವೃತ್ತಾಂತವನ್ನು ತಿಳಿದು ಶಿಶುವನ್ನು ನನ್ನಾ ಶ್ರಮಕ್ಕೆ ಎತ್ತಿ ಕೊಂಡು ಬಂದು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿನಂತೆಯೇ ಸಾಕುತ್ತಾ ಮೊದಲು ಕಾಡಿನಲ್ಲಿ ಶಕುಂತ ಪಕ್ಷಿಗಳು ಆ ಶಿಶುವನ್ನು ಪೋಷಿಸಿದ ಕಾರಣ ಇವಳಿಗೆ ಶಕುಂತಳೆ ಎಂದು ಹೆಸರಿಟ್ಟೆನು ಎಂದು ಹೇಳಲು ಆ ಋಷಿಯು ಕೇಳಿ ಕಣ್ಮನ ಅಪ್ಪಣೆಯನ್ನು ಹೊಂದಿ ತನ್ನಾಶ್ರಮಕ್ಕೆ ಹೊರಟು ಹೋದನು. ಎಲೈ, ರಾಯನೇ ! ಇದೀಗ ನನ್ನ ಜನ್ಮದ ರೀತಿಯು ಎಂದು ಹೇಳಿದ ಶಕುಂ ತಳೆಯ ಮಾತನ್ನು ಕೇಳಿ ದುಷ್ಯಂತ ಮಹಾರಾಯನು ಬಹಳ ಸಂತುಷ್ಟನಾಗಿ-ಎಲೈ