ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

128 KANARESE SELECTIONS-PART III ನಾದ ದುಷ್ಯಂತ ರಾಜನು ಎನಲು ಆ ಶಕುಂತಳೆಯು-ಸಕಲರಾಜಪೂಜಿತನಾದ ನಿನ್ನಂಥಾ ಅರಸಿಗೆ ನಾವು ಉಪಚರಿಸತಕ್ಕದ್ದೇನಿದೆ ? ನಾವು ಕೊಡುವ ಕಂದಮೂಲ ಫಲಗಳನ್ನು ಪರಿಗ್ರಹಿಸಿ ನಮ್ಮಿಂದ ಆಗತಕ್ಕೆ ಕಾರ್ಯವನ್ನು ನಿರೂಪಿಸಬೇಕೆನಲು ; ದುಷ್ಯಂತನು-ಎಲ್‌, ಮಂಜುಭಾಷಿಣಿಯೇ ! ಮಹಾನುಭಾವರಾದ ಕಮುನೀ ಶ್ರರರನ್ನು ಸೇವಿಸುವುದಕ್ಕೆ ನಾನು ಇಲ್ಲಿಗೆ ಬಂದೆನು, ಆ ಮಹಾತ್ಮರಲ್ಲಿ ದ್ದಾರೆ ? ಎನಲು ಆ ಕನ್ಯಕೆಯು-ಕಣ್ಣೂರು ಕಂದ ಮಲ ಫಲಗಳನ್ನು ತರುವುದಕ್ಕೆ ಆಶ್ರ ಮದಿಂದ ಹೊರಟು ವನಕ್ಕೆ ಹೋಗಿದ್ದಾರೆ. ಒಂದು ಮುಹೂರ್ತ ಮಾತ್ರ ಇಲ್ಲಿ ಇದ್ದರೆ ಅವರ ದರ್ಶನವನ್ನು ಮಾಡಿಕೊಂಡು ಹೋಗಬಹುದೆಂದು ಹೇಳಿದಳು. - ದುಷ್ಯಂತನು ಆಶ್ರಮದಲ್ಲಿ ಆ ಮಹಾ ಮುನೀಶ್ವರನು ಇಲ್ಲದೆ ಇರು ವುದ ರಿಂದ ಶಕುಂತಳೆಯು ಉಪಚರಿಸುವ ಮಾತುಗಳಿಂದ ಸಂತೋಷಪಟ್ಟು ರೂಪಯೌ ವನಸಂಪನ್ನೆ ಯ ವಿನಯಾನ್ವಿತೆಯ ಆದ ಅವಳನ್ನು ನೋಡಿ--ನೀನು ಯಾರು ? ಯಾರ ಮಗಳು ? ನೀನು ಈ ತಪೋವನಕ್ಕಾಗಿ ಬಂದಿರುವುದಕ್ಕೆ ಕಾರಣವೇನು ? ನಿನ್ನನ್ನು ನೋಡಿದ ಮಾತ್ರದಿಂದಲೇ ನನ್ನ ಮನಸ್ಸು ಮನ್ಮಧಬಾಣದಿಂದ ಪೀಡಿತವಾ ಗಿದೆ, ನಾನು ಒಂದು ರಹಸ್ಯವನ್ನು ಕೇಳುತ್ತೇನೆ.” ಮರೆಮಾಜದೆ ಹೇಳಬೇಕು ನಾನು ರಾಜರ್ಷಿಯಾದ ಪರುವಂಶದಲ್ಲಿ ಹುಟ್ಟಿ ದವನು, ನನ್ನ ಮನಸ್ಸು ರಾಜಕನ್ಯ ಕೆಯಲ್ಲಿ ತಗಲುವುದೇ ಹೊರತಾಗಿ ಮತ್ತೊಬ್ಬ ಕನ್ಯಕೆಯಲ್ಲಿ ತಗಲುವುದಿಲ್ಲ, ಆದರೆ ನಿನ್ನಲ್ಲಿ ತಗುಲಿರುವುದರಿಂದ ನೀನು' ನಿಶ್ಚಯವಾಗಿಯ ಕ್ಷತ್ರಿಯ ಕನ್ಯಕೆಯೆಂದು ತೋರುತ್ತೀ. ಇದಲ್ಲದೆ ನಿನ್ನನ್ನು ಮದುವೆಮಾಡಿಕೊಳ್ಳುವುದಕ್ಕೆ ನನ್ನ ಮನಸ್ಸು ಬಯಸುತ್ತದೆ. ನೀನು ನನಗೆ ಮದುವೆ ಆಗಬೇಕು, ಹಾಗೆ ಮದುವೆಯಾದರೆ ಚತು ಸ್ವಮುದ್ರದಿಂದ ಸುತ್ತಲ್ಪಟ್ಟ ಭೂಮಂಡಲವನ್ನೂ ನಿನ್ನ ವಶವಾಗುತ್ತದೆ ನಿನ್ನ ಮನ ಸ್ಸಿನಲ್ಲಿ ಮತ್ತೊಂದನ್ನು ಎಣಿಸದೆ ಅವಶ್ಯವಾಗಿ ನನ್ನನ್ನು ಮದುವೆಯಾಗಬೇಕೆನಲು ; ಆ ಕನ್ಯಾರತ್ವವು ಮಧುರಭಾಷೆಗಳಿಂದ ಆತನನ್ನು ಕುರಿತು ಇಂತೆಂದಿತು-ಕೇಳ್ಳೆ ರಾಯನೇ ! ನೀನು ಸಕಲಧರ್ಮಗಳನ್ನು ತಿಳಿದಿರುವಂಧವನು, ನಾನು ಕಣ್ಣಮು ನೀಶ್ವರನ ಮಗಳಾದುದರಿಂದ ನನ್ನ ತಂದೆಯು ಇರುವಾಗಲೇ ನನ್ನ ಸ್ವಾತಂತ್ರ್ಯ ದಿಂದ ಹೀಗೆ ಮಾತಾಡಬಾರದಲ್ಲ ! ನನ್ನ ತಂದೆಯನ್ನು ಕೇಳಿ ಅವರ ಅಪ್ಪಣೆ ಯನ್ನು ಪಡೆದ ಮೇಲೆ ಮದುವೆಯಾಗುವುದೇ ಹೊರತಾಗಿ ಹೀಗೆ ಕಾಮಾತುರತ್ನ ದಿಂದ ಅತಿಕ್ರಮಿಸುವುದು ಉಚಿತವಲ್ಲ ಎನಲು ದುಷ್ಯಂತನು--ಎಲೈ, ಶಕುಂತ ಳೆಯೇ ! ನನ್ನ ಮನಸ್ಸಿನಲ್ಲಿ ಒಂದು ಸಂಶಯ ಉಂಟು, ಏನಂದರೆ ಲೋಕಪೂಜಿತ ನಾಗಿ ಮಹಾನುಭಾವನಾದ ಕಣ್ಯ ಮಹಾ ಮುನೀಶ್ವರನು ಜಿತೇಂದ್ರಿಯನಾದುದ ರಿಂದ ಆತನ ಮನೋಧರ್ಮವು ಚಲಿಸಿದರೂ ದೃಢವ್ರತನಾದ ಆತನು ಚಲಿಸನು, ಆತ ನಿಗೆ ನೀನು ಯಾವ ರೀತಿಯಿಂದ ಮಗಳಾದೆ ? ನನಗೆ ತಿಳುಹಿಸಬೇಕೆನಲು ಶಕುಂತ ಳೆಯು ಇಂತೆಂದಳು-ಎಲೈ, ರಾಯನೇ ! ಕೇಳು ; ಲೋಕದಲ್ಲಿ ಯಾರಾದರೂ ತಮ್ಮ ರೀತಿ ಒಂದು ಪ್ರಕಾರವಾಗಿರುವಲ್ಲಿ ಅದನ್ನು ಹೇಳಿಕೊಳ್ಳುವುದು ಬೇರೊಂದು