ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

127 ಕಥಾಸಂಗ್ರಹ-೭ನೆಯ ಭಾಗ ಪರಿವಾರವನ್ನೆಲ್ಲಾ ಆ ಆಶ್ರಮದ ಹೊರಗಡೆಯಲ್ಲಿಯೇ ನಿಲ್ಲಿಸಿಬಿಟ್ಟು ಛತ್ರ ಚಾಮ ರಾದಿ ರಾಜಚಿಹ್ನೆಗಳನ್ನೆಲ್ಲಾ ಬಿಟ್ಟು ಬಿಟ್ಟು ಮಂತ್ರಿಗಳನ್ನೂ ಸೇನಾಪತಿಯನ್ನೂ ಕರೆದು--ಅಯ್ಯಾ ! ನಾವು ತಪೋಧನರಾದ ಮುನೀಶ್ವರರ ಆಶ್ರಮಕ್ಕೆ ಹೋಗಿ ಅವರ ದರ್ಶನವನ್ನು ಮಾಡಿಕೊಂಡು ತಿರಿಗಿ ಬರುವ ಪರ್ಯ೦ತರವೂ ಸಕಲಸೇನೆಯನ್ನೂ ಇಲ್ಲೇ ಇರಿಸಿಕೊಂಡು ಇರಬೇಕೆಂದು ಹೇಳಿ ಸತ್ಯಲೋಕಕ್ಕೆ ಸಮಾನವಾದ ಆ ಆಶ್ರ ಮವನ್ನು ಪ್ರವೇಶಿಸಿ ಅದರ ಮಹತ್ವವನ್ನು ನೋಡುತ್ತಿರಲಾಗಿ ಆ ಆಶ್ರಮದಲ್ಲಿ ಒಂದುಕಡೆ ವೇದವೇದಾಂಗಪಾರಂಗತರಾಗಿ ನ್ಯಾಯತತ್ರಾರ್ಧ ವಿಜ್ಞಾನಸಂಪನ್ನರಾದ ಕೆಲವು ಬ್ರಾಹ್ಮಣಶ್ರೇಷ್ಠರು ಪದಕ್ರಮ ಸಮೇತವಾಗಿ ಪಠಿಸುವ ವೇದಘೋಷವು ಆ ರಾಯನ ಕಿವಿಗಳಿಗೆ ಇಂಪಾಗಿತ್ತು, ಕೆಲವು ಕಡೆಯಲ್ಲಿ ಯಜುರ್ವೇದಪಠನವೂ ಕೆಲವು ಕಡೆಯಲ್ಲಿ ಸಾಮವೇದಗಾನವೂ ಇನ್ನೂ ಕೆಲವು ಸ್ಥಳದಲ್ಲಿ ಅಧರ್ವಣವೇದಪಾಠವೂ ಮತ್ತು ಕೆಲವು ಬಳಿಯಲ್ಲಿ ಶಬ್ದ ಶಾಸ್ಕೂಪನ್ಯಾಸವನ್ನು ಮಾಡುವ ರೀತಿಯ ಮತ್ತೊಂದು ಕಡೆಯಲ್ಲಿ ಯಾಗಪ್ರಯೋಗವನ್ನು ತಿಳಿಹಿಸುವಂಧ ಅಂದವೂ ಇವೇ ಮೊದಲಾದವುಗಳಿಂದ ಪಾಪರಹಿತವಾಗಿಯ ನೇತ್ರಾನಂದಕರಗಳಾಗಿಯೂ ಇರುವ ಪವಿತ್ರ ಸ್ಥಳಗಳನ್ನು ನೋಡುತ್ತಾ ವಿಶದವಾಗಿಯ ವಿಜನವಾಗಿಯೂ ಪವಿತ್ರವಾ ಗಿಯ ಇರುವ ಕಣ್ಣೂರ ಪರ್ಣಶಾಲೆಯನ್ನು ಹೊಕ್ಕು ಒಳಗೆ ಹೋಗಿ ನೋಡಿ ಅಲ್ಲಿ ಒಬ್ಬರನ್ನೂ ಕಾಣದೆ -ಈ ಆಶ್ರಮದಲ್ಲಿರುವವರು ಯಾರು ? ಎಂದು ವನದಲ್ಲಿ ಪ್ರತಿ ಧ್ವನಿಯು ಹುಟ್ಟುವ ಹಾಗೆ ಗಟ್ಟಿಯಾಗಿ ಕೂಗಿ ಎಚ್ಚರಿಸಲು ಆ ಧ್ವನಿಯನ್ನು ಕೇಳಿ ಕಾರ್ಮುಗಿಲ ದೆಸೆಯಿಂದ ಹೊರಟು ಬರುವ ಬಳ್ಳಿ ಮಿಂಚಿನೋಪಾದಿಯಲ್ಲಿ ಹೊಳೆ ಯುತ್ತಿರುವಂಥಾ ಪ್ರತ್ಯಕ್ಷವಾಗಿ ಬಂದ ಮಹಾಲಕ್ಷ್ಮಿಯೋಪಾದಿಯಲ್ಲಿ ರೂಪಲಾವ "ಸಂಪನ್ನೆ ಯಾಗಿರುವಂಧಾ ಒಬ್ಬ ಕನ್ನಿಕೆಯು ಆ ಆಶ್ರಮದ ಒಳಗಣಿಂದ ಹೊರಟು ಬಂದು ಅಭ್ಯಾಗತನಾದ ಆ ಮಹಾರಾಜನನ್ನು ಕಂಡು ಆಶ್ಚರ್ಯಪಡುತ್ತಾ ತಾವ ರೆಯ ಎಸಳುಗಳೋಪಾದಿಯಲ್ಲಿ ನೀಟವಾದ ನೇತ್ರ ಯುಗ್ಯವನ್ನೂ ವಿಶಾಲವಾದ ವಕ್ಷಸ್ಥಳವನ್ನೂ ಸಿಂಹಸ್ಕಂಧ ಸಮಾನವಾದ ಭುಜಮಲವನ್ನೂ ಅಜಾನುದೀರ್ಘಗ ಳಾದ ಬಾಹುಗಳನ್ನೂ ಇವೇ ಮೊದಲಾದ ರಾಜಲಕ್ಷಣಗಳನ್ನು ನೋಡಿ ಮೃದು ಮಧುರ ಭಾಷೆಗಳಿಂದ ಕುಶಲ ಪ್ರಶ್ನೆಯನ್ನು ಮಾಡಿ ಸಮುಚಿತವಾದ ಪೀಠದಲ್ಲಿ ಕುಳ್ಳಿರಿಸಿ ಅರ್ಘಪಾದ್ಯಾಚಮನಗಳನ್ನು ಕೊಟ್ಟು ಸನ್ಮಾನದಿಂದ ಸಂತುಷ್ಟನಾದ ಆ ರಾಯನ ಎದುರಿಗೆ ನಾಚಿಕೆಯಿಂದ ಸ್ವಲ್ಪವಾಗಿ ಮುಖವನ್ನು ಬಾಗಿಸಿ ನಿಂತು ಕೊಂಡು ತನ್ನ ಮುಖದ ಮುಗಳುನಗೆಯ ಸೊಬಗಿನಿಂದ ದಿಕ್ಕುಗಳನ್ನು ಬೆಳಗಿಸುತ್ತಾ-ಎಲೆ, ಮಹಾನುಭಾವನೇ ! ನೀನು ಯಾರು ? ಯಾವ ನಿಮಿತ್ತದಿಂದ ಈ ಆಶ್ರಮಕ್ಕೆ ಬಂದೆ ? ನಾವು ಮಾಡತಕ್ಕಂಧ ಕಾರ್ಯವೇನು ? ಇದಷ್ಟನ್ನೂ ತಿಳುಹಿಸಬೇಕೆನಲು ಆ ರಾಜನು ಸಕಲ ಶುಭಲಕ್ಷಣಗಳಿಂದ ಕೂಡಿ ಸದಾಚಾರಸಂಪನ್ನೆ ಯಾಗಿ ಮಹಾಲಕ್ಷ್ಮಿ ಯೋಪಾದಿಯಲ್ಲಿ ಒಪ್ಪುತ್ತಾ ಮಂಜುಭಾಷಿಣಿಯಾದ ಆ ಕನ್ಯಕೆಯನ್ನು ಕುರಿತು ಇಂತಂದನು.- ಎಲ್‌, ರಾಜೀವಲೋಚನೆಯೇ ! ನಾನು ಮಹಾತ್ಮನಾದ ಇಲಲನ ಮಗ