ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

126 KANARESE SELECTIONS-PART III ವನ್ನು ದಾಟಿ ಒಂದು ಮೃಗವನ್ನು ಹುಡುಕಿಕೊಂಡು ಒಬ್ಬನೇ ಹೋಗುತ್ತಾ ದಾರಿ ಯಲ್ಲಿ ಒಂದು ಚೌಳುಭೂಮಿಯನ್ನು ಕಂಡು ಅದನ್ನು ಅತಿಕ್ರಮಿಸಿ ಆ ಬಳಿಕ ಉತ್ತ ಮರಾದ ತಾಪಸರಿಗೆ ವಾಸಸ್ಥಾನವಾಗಿಯ ಮನಸ್ಸಿಗೆ ಸಂತೋಷಕರವಾಗಿಯ ಸಕಲಜನಮನೋಹರವಾಗಿಯ ಮಂದಮಾರುತಸಮೇತವಾಗಿಯ ಪುಪ್ಪಿಸಿ ಫಲಿಸಿ ಜಗ್ಗುತ್ತಿರುವ ವೃಕ್ಷಗಳಿಂದ ಕೂಡಿರುವುದಾಗಿಯ ಮೃದುವೂ ಹಸರೂ ಆದ ಹುಲ್ಲುಗಳಿಂದ ರಮಣೀಯವಾಗಿರುವ ಪ್ರದೇಶಗಳುಳ್ಳುದಾಗಿಯ ಕಿವಿಗಳಿಗೆ ಇಂಪಾಗುವ ಹಾಗೆ ಧ್ವನಿ ಮಾಡುವ ಗಿಣಿ ಗೊರವಂಕ ಪಾರಿವಾಳ ನವಿಲು ಮೊದ ಲಾದ ಹಕ್ಕಿಗಳಿಂದ ಕೂಡಿಕೊಂಡಿರುವುದಾಗಿಯೂ ತಂಪಾದ ನೆರಳುಳ್ಳ ಮಹಾ ವೃಕ್ಷಗಳಿಂದ ತುಂಬಿರುವುದಾಗಿಯೂ ತುಂಬಿಗಳ ಝೇಂಕಾರದಿಂದ ಮನೋಹರವಾ ಗಿಯೂ ಇರುವ ಒಂದು ವನವನ್ನು ಕಂಡು ಸಂತೋಷ ಪಡುತ್ತಾ ಅದರೊಳಗೆ ಹೊಕ್ಕು ನೋಡುವಲ್ಲಿ ಅಲ್ಲಿರುವ ಸಮಸ್ತ ವೃಕ್ಷಗಳೂ ಮಂದಮಾರುತದಿಂದ ಆತನ ಮೇಲೆ ಪುಷ್ಪಗಳನ್ನು ಉದುರಿಸುತ್ತಾ ಹೂವು ಹೀಚು ಕಾಯಿ ಹಣ್ಣು ಇವುಗಳ ಭಾಗದಿಂದ ಬೊಗ್ಗಿ ಬಳುಕುತ್ತಾ ಕೆಲವು ಕೊನೆಗಳಿಂದ ಆಕಾಶವನ್ನು ಮುಟ್ಟುತ್ತಾ ತಮ್ಮ ಮೇಲೆ ಧ್ವನಿಗೈಯುತ್ತಾ ವಾಸವನ್ನು ಮಾಡುತ್ತಿರುವ ಶುಕಶಾರಿಕಾ ನಿಕರಗಳ ಸಲ್ಲಾ ಪಗಳೆಂಬ ಮೃದುಭಾಷಿತಗಳಿಂದ ತಮ್ಮ ಬಳಿಗೆ ಬಂದ ಪಥಿಕರ ಯೋಗಕ್ಷೇಮವನ್ನು ವಿಚಾರಿಸುತ್ತಿವೆಯೋ ಎಂಬ ಹಾಗೆ ಇದ್ದುವು, ಮತ್ತು ಬಿಳಿಯ ಹೂವುಗಳಿಂದ ತುಂಬಿ ರುವ ಬಳ್ಳಿಗಳು ಆ ಮರಗಳ ಸುತ್ತಲೂ ಸುತ್ತಿಕೊಂಡು ಹಬ್ಬಿ ಇರುವುದರಿಂದ ಅವು ಗಳು ಬಿಳಿಯ ವಸ್ತ್ರಗಳನ್ನು ಉಟ್ಟು ಕೊಂಡಿರುವ ಹಾಗೆ ಕಾಣಿಸುತ್ತಾ ಇದ್ದುವು. - ಇಂಥಾ ವನದಲ್ಲಿ ಅನೇಕವಾದ ಮೃಗಗಣದಿಂದ ಕೂಡಿಕೊಂಡು ಬಹು ವಿಧ ವಿಹಗಕೋಲಾಹಲಭರಿತವಾಗಿಯೂ ಪ್ರಜ್ವಲಿಸುತ್ತಿರುವ ಯಜೇಶ್ವರನುಳ್ಳುದಾ ಗಿಯ ವಾಲಖಿಲ್ಯರೇ ಮೊದಲಾದ ಮಹರ್ಷಿಗಳ ವಾಸಕ್ಕೆ ಯೋಗ್ಯವಾಗಿಯ ಅಗ್ನಿಹೋತ್ರ ಗೃಹಗಳಿಂದಲೂ ಪುಷ್ಟಶಯ್ಯಗಳಿಂದಲೂ ಮನೋಹರವಾಗಿಯ ಇರುವ ಒಂದು ದಿವ್ಯವಾದ ಋಷ್ಯಾಶ್ರಮಸಮಿಾಪದಲ್ಲಿ ಹಂಸ ಚಕ್ರವಾಕ ಮೊದ ಲಾದ ನಾನಾವಿಧ ಜಲಪಕ್ಷಿಗಳಿಂದ ಕೂಡಿ ಸಕಲ ಮೃಗಗಳ ಸಂಚಾರಕ್ಕೆ ಯೋಗ್ಯ ಗಳಾದ ತಡಿಗಳುಳ್ಳುದಾಗಿಯೂ ದೇವಲೋಕಕ್ಕೆ ಸಮಾನವಾದ ಪುಣ್ಯಾಶ್ರಮಕ್ಕೆ ಭೂಷಣವಾಗಿಯೂ ಸಕಲ ಪ್ರಾಣಿಸಮಹಕ್ಕೆ ತಾಯಿಯೋಪಾದಿಯಲ್ಲಿ ಇರುವು ದಾಗಿಯ ಚಕ್ರವಾಕಪಕ್ಷಿ ಗಳು ಸಂಚರಿಸುತ್ತಿರುವ ಪುಳಿನ ರಾಶಿಗಳಿಂದ ಶೋಭಿತ ವಾಗಿಯ ಶುಭ್ರಮಾದ ನೊರೆಯಿಂದ ಕೂಡಿದುದಾಗಿಯೂ ಸ್ನಾನಗೈದು ವೇದ ವನ್ನು ಪಠಿಸುತ್ತಿರುವ ದೃತವ್ರತರಾದ ಮುನಿಕುಮಾರರ ಸಮಹದಿಂದ ರಂಜಿತವಾ ಗಿಯ ಇರುವ ನಿರ್ಮಲಜಲಯುಕ್ತ ಮಾದ ಮಾಲಿನಿ ಎಂಬ ಪುಣ್ಯನದಿಯನ್ನು ಕಂಡು ಅದರ ತೀರದಲ್ಲಿ ಸಕಲ ಮುನಿಜನಸೇವ್ಯವಾಗಿರುವ ಕಣ್ಯಾಶ್ರಮದ ಸಮಿಾ ಪದಲ್ಲಿರುವ ಪ್ರದೇಶಗಳಲ್ಲೆಲ್ಲಾ ಸಂಚರಿಸಿ ಆ ರಾಯನು ಆ ಆಶ್ರಮವನ್ನು ಪ್ರವೇ ಶಿಸಿ ಆ ಕಣ್ವಮಹರ್ಷಿಯನ್ನು ಸೇವಿಸುವುದಕ್ಕೋಸ್ಕರ ಇಚ್ಛೆಸಿ ರಥಸಾರಥ್ಯಾದಿ