ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 125 ಆ ಬಳಿಕ ದುಷ್ಯಂತರಾಜನು ಬ್ರಾಹ್ಮಣರಿಂದ ಸ್ತುತಿಸಲ್ಪಟ್ಟ ವನಾಗಿ ಪಟ್ಟಣ ವನ್ನು ಬಿಟ್ಟು ಹೋಗುತ್ತಾ ಕೆಲವು ಪ್ರದೇಶಗಳನ್ನು ಕಳೆದು ಸ್ವಲ್ಪ ದೂರದಲ್ಲಿ ಆಲ ಬೇಲ ಕೆಮ್ಮತ್ತಿ ಕಗ್ಗಲಿ ಅತ್ರಿ ಅರಟಾಳ ಅರಳಿ ಅಮಟೆ ಕಕ್ಕೆ ಎಕ್ಕ ಬೆಲ್ಲ ವ ಮಾವು ಸೀಮಾವು ಮೊದಲಾದ ಮರಗಳಿಂದ ಶೋಭಿತವಾಗಿ ಕಲ್ಲುಗಳಿಂದಲೂ ವಿಷಮಸ್ಥಳ ಗಳಿಂದಲೂ ನಿರ್ಝರಪ್ರದೇಶಗಳಿಂದಲೂ ಹುಲಿ ಕರಡಿ ಕಾಡೋಣ ಕಡವೆ ಮೊದ ಲಾದ ದುಷ್ಟ ಮೃಗಗಳಿಂದ ಕೂಡಿರುವ ಒಂದು ಮಹಾರಣ್ಯವನ್ನು ನೋಡಿ ಚತುರಂಗ ಬಲಸಮೇತನಾಗಿ ಆ ವನವನ್ನು ಹೊಕ್ಕು ಅನೇಕವಾದ ದುಷ್ಟಮೃಗಗಳನ್ನು ಕೆಣಕಿ ಬೇಟೆಯಾಡುತ್ತಾ ಬಾಣಗಳಿಂದ ಶಾರ್ದೂಲಗಳನ್ನು ಮಥಿಸಿ ತನ್ನ ಸಮೀಪಕ್ಕೆ ಬರುತ್ತಿರುವ ದುಷ್ಟಮೃಗಗಳನ್ನು ಕತ್ತಿಯಿಂದ ಕಡಿದು ಕೆಡಹುತ್ತಾ ಕೈಗೆ ಸಿಕ್ಕದೆ ಓಡಿಹೋಗುತ್ತಿರುವ ಮೃಗಗಳನ್ನು ಅಟ್ಟಿ ಕೊಂಡು ಹೋಗಿ ಕೊಲ್ಲುತ್ತಾ ಮೃಗಗಳ ಮರ್ಮಗಳನ್ನು ತಿಳಿದು ಅವುಗಳನ್ನು ಭೇದಿಸುತ್ತಾ ತೊಡವು ಕಬ್ಬಿಣದ ದೊಣ್ಣೆ ಪಟ್ಟಾ ಕತ್ತಿ ಒನಕೆ ಭರ್ಜಿ ಮೊದಲಾದ ನಾನಾಯುಧಗಳನ್ನು ತೆಗೆದು ಕೊಂಡು ಮದದಾನೆಗಳನ್ನು ಕೊಟ್ಟು ತಾ ಮಹಾರಣ್ಯದಲ್ಲಿ ಸಂಚರಿಸಿದನು. ಈ ಪ್ರಕಾರ ರಾಯನು ಕೆಣಕಿದ ಕಾರಣ ಗುಂಪಿನಿಂದ ಬೆದರಿಹೋಗಿ ಹಿಂಡಿನಲ್ಲಿ ನಿಲ್ಲದೆ ಮಹಾ ಭಯದಿಂದ ಹಂಬಲಿಸುತ್ತಾ ಹಸಿವು ಬಾಯಾರಿಕೆಗಳಿಂದ ಮೈಮರೆತು ನೀರಿ ಲ್ಲದೆ ಇರುವ ತೊರೆಗಳನ್ನು ಕಂಡು ಮರ್ಥೆಯಿಂದ ಅವುಗಳಲ್ಲಿ ಬೀಳುವುದರಿo ದಲೂ ಬೆನ್ನಟ್ಟಿ ಬರುವ ರಾಜಭಟರ ಕೈಗೆ ಸಿಕ್ಕಿ ಅವರಿಂದ ಕೊಲ್ಲಲ್ಪಡುವುದರಿಂ ದಲೂ ಅಡವಿಯಲ್ಲಿರುವ ಬೇಡರು ಸೋಲಿಗರು ಮುಂತಾದವರಿಂದ ಭಕ್ಷಣಾರ್ಥ ವಾಗಿ ಹಿಡಿದು ಬೆಂಕಿಯಿಂದ ಸುಡಲ್ಪಡುವುದರಿಂದಲೂ ಹೀಗೆ ಇನ್ನೂ ನಾನಾ ಪ್ರಕಾರ ದಿಂದ ಕಾಡಿನ ಮೃಗಗಳೆಲ್ಲಾ ನಾಶವಾಗುತ್ತಾ ಬಂದವು ಮತ್ತು ಆನೆಯ ಗುಂಪು ಗಳು ಭಟರ ಶಸ್ತ್ರಗಳ ಪೆಟ್ಟಿಗೆ ಬಹಳ ಕ೦ಗೆಟ್ಟು, ಸೊಂಡಿಲುಗಳನ್ನು ಸುತ್ತಿಕೊಂಡು ಲದ್ದಿಯನ್ನು ಹಾಕುತ್ತಾ ಉಚ್ಛೆಯನ್ನು ಹೊಯ್ದು ಕೊಳ್ಳುತ್ತಾ ಗಾಯಗಳಿಂದ ನೆತ್ತರು ಸುರಿಯುತ್ತಿರುವಲ್ಲಿ ತತ್ತರದಿಂದ ಮನದಲ್ಲಿರುವ ಹುಲ್ಲೆ ಮೊದಲಾದ ಮೃಗ ಗಳನ್ನು ತುಳಿಯುತ್ತಾ ಘೀಳಿಡುತ್ತಾ ದಿಕ್ಕು ದಿಕ್ಕಿಗೆ ಓಡಿದುವು ಆ ಬಳಿಕ ದುಷ್ಯಂತ ರಾಜನ ಸೈನ್ಯವೆಂಬ ಮೇಘದಿಂದ ಬಿಡಲ್ಪಟ್ಟ ನಾನಾ ಪ್ರಕಾರಗಳಾದ ಬಾಣವರ್ಷ ಗಳಿಂದ ಮುಚ್ಚಲ್ಪಟ್ಟ ಕಾಡೋಣಗಳು ಸಕಲದಿಕ್ಕುಗಳಲ್ಲಿ ತಿರುಗುತ್ತಿರಲು ಆ ವನವು ವರ್ಷಾಕಾಲದೋಪಾದಿಯಲ್ಲಿ ಒಪ್ಪುತ್ತಿದ್ದಿತು. ಆ ಬಳಿಕ ದುಷ್ಯಂತರಾಜನು ದುಷ್ಟಮೃಗಗಳನ್ನು ಬೇಟೆಯಾಡುತ್ತಾ ಚತುರಂಗಬಲಸಮೇತನಾಗಿ ವನದದೆಸೆಯಿಂದ ಹೊರಟು ಪಟ್ಟಣಕ್ಕೆ .ಎರಡು ಗಾವುದ ದೂರದಲ್ಲಿ ಸಿದ್ಧ ಚಾರಣರಿಂದ ಸೇವಿತವಾಗಿರುವ ಒಂದು ವನವನ್ನು ಹೊಕ್ಕು ಅಲ್ಲಿರುವ ನಾನಾ ಮೃಗಗಳನ್ನು ಬೇಟೆಯಾಡುವುದಕ್ಕೋಸ್ಕರ ಜೊತೆಯಲ್ಲಿ ಕುದುರೆಯ ರಾವುತರನ್ನೂ ಕೆಲವು ಪಾಯದಳವನ್ನೂ ಕರೆದುಕೊಂಡು ಬಹಳ ದೂರ ಹೋಗಿ ಶ್ರಮದಿಂದ ಕಂಗೆಟ್ಟು ಹಸಿವು ಬಾಯಾರಿಕೆಗಳಿಂದ ಪೀಡಿತನಾಗಿ ಆ ವನ