ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

124 KANAKESE SELECTIONS-PART III 3, THE STORY OF DUSHYANTA, - ೩, ದುಷ್ಯಂತೋಪಾಖ್ಯಾನ. ಸೌರವವಂಶೋದ್ದಾರಕನಾದ ದುಷ್ಯಂತಮಹಾರಾಜನು ಅಸಮಾನಶೌರ್ಯ ವುಳ್ಳವನಾಗಿ ಚತುಸ್ಸಮುದ್ರಮುದ್ರಿತವಾದ ಭೂಮಂಡಲವನ್ನು ತನ್ನ ಸ್ವಾಧೀನವನ್ನು ಮಾಡಿಕೊಂಡು ನಾಲ್ಕನೆಯ ಭಾಗವನ್ನು ತಾನು ಅನುಭವಿಸುತ್ತಾ ಸಮುದ್ರತೀರದ ದೇಶಗಳು * ಮೈಚ ದೇಶಗಳು ಇವೇ ಮೊದಲಾದ ಸಮಸ್ತದೇಶಗಳನ್ನೂ ಎಚ್ಚರ ವಾಗಿ ಪಾಲಿಸುತ್ತಾ ಇರುವಾಗ ಸಮಸ್ತ ಜನರೂ ವರ್ಣಸಂಕರಾದಿ ಪಾಪಕೃತ್ಯಗ ಳನ್ನು ಮಾಡದೆ ಧರ್ಮದಲ್ಲಿಯೇ ನಿರತರಾಗಿದ್ದರು ಮತ್ತು ಆತನ ದೇಶದಲ್ಲಿ ಚೋರವ್ಯಾಘಾದಿಗಳ ಭಯವೂ ಹಸಿವು ಬಾಯಾರಿಕೆ ಮೊದಲಾದ ಉಪದ್ರವಗಳೂ ಇರಲಿಲ್ಲ ವು, ಪರ್ಜನ್ಯನು ತಿಂಗಳಿಗೆ ಮರು ಸಾರಿ ವರ್ತಿಸುವುದರಿಂದ ಆತನ ದೇಶದಲ್ಲಿ ಸಕಲವಾದ ಸಸ್ಯಗಳು ಬೆಳೆದು ಧಾನ್ಯಗಳೆಲ್ಲಾ ಅಗ್ಗವಾಗಿ ಇದ್ದುವು ಆ ರಾಜಕುಮಾರನು ಯೌವನದಲ್ಲಿ ಗರುಡೀಸಾಧಕವನ್ನು ಮಾಡಿ ಮಂದರಪರ್ವತವ ಸ್ನಾ ದರೂ ಎತ್ತು ವಷ್ಟು ಭುಜಬಲವನ್ನು ಸಂಪಾದಿಸಿ ಧನುರ್ಯುದ್ದ ದಲ್ಲಿಯ ಗದಾಯುದ್ಧದಲ್ಲಿ ಯ” ಮುಷ್ಟಿಯುದ್ದದಲ್ಲಿ ಯ ಇನ್ನು ನಾನಾ ವಿಧಗಳಾದ ಆಯುಧಯುದ್ದಗಳಲ್ಲಿಯೂ ಸಮರ್ಥವಾಗಿ ಆನೆ ಕುದುರೆ ರಥ ಇವುಗಳನ್ನೇರುವುದ ರಲ್ಲಿ ಚತುರನಾಗಿ ಬಲದಲ್ಲಿ ವಿಷ್ಣುವಿಗೂ ಪ್ರತಾಪದಲ್ಲಿ ಸೂರ್ಯನಿಗೂ ಗಾಂಭೀ ರ್ಯದಲ್ಲಿ ಸಮುದ್ರನಿಗೂ ಕ್ಷಮೆಯಲ್ಲಿ ಭೂಮಿಗೂ ಸಮಾನನಾಗಿ ಯಶೋವಂತ ನಾಗಿರುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದು ದಿವಸ ಆ ದುಷ್ಯಂತ ಮಹಾರಾಜನು ವನದಲ್ಲಿ ರುವ ನಾನಾ ಮೃಗಗಳನ್ನು ಬೇಟೆಯಾಡಬೇಕೆಂದೆಣಿಸಿ ಸುವರ್ಣಮಯರಧಾರೂಢ ನಾಗಿ ಶತಚ್ಛ ಕತ್ತಿ ಪಟ್ಟಾಕತ್ತಿ ತೊಡಪು ಜಮದಾಡೆ ಬಾಕು ಸುರಗಿ ಕಬ್ಬಿಣದ ಕೋಲು ಭಿಂಡಿವಾಳ ಭರಜಿ ಭಲ್ಲೆ ಈಟಿ ಸಿಂಗಾಡಿ ಮೊದಲಾದ ಆಯುಧಗಳನ್ನು ಹಿಡಿದು ಉಕ್ಕಿನ ಕವಚಗಳನ್ನು ತೊಟ್ಟು ತೇರುಗಳನ್ನೂ ಆನೆಗಳನ್ನೂ ಕುದುರೆಗ ಳನ್ನೂ ಏರಿದ ರಾಹುತರೂ ಕಾಲಾಳುಗಳೂ ಉಭಯಪಾರ್ಶದಲ್ಲಿ ನಡೆದು ಬರುತ್ತಾ ಇರಲು ಭಟರ ಸಿಂಹನಾದಗಳಿಂದಲೂ ಭುಜಗಳ ಚಪ್ಪಾಳೆಗಳಿಂದಲೂ ರಧಚಕ್ರ ಧ್ವನಿಗಳಿಂದಲೂ ಮದದಾನೆಗಳ ಬೃಂಹಿತಗಳಿಂದಲೂ ಕುದುರೆಗಳ ಹೇಷಾರವಗಳಿ೦ ದಲೂ ಭೇರೀ ಮೃದಂಗ ದುಂದುಭಿ ಕಹಳಾದಿ ವಾದ್ಯ ಧ್ವನಿಗಳಿಂದಲೂ ಸರ್ವದಿಕ್ಕುಗ ಇಲ್ಲಿ ಯ ಒಂದೇ ಪ್ರಕಾರ ಭೋರೆಂದು ಮೊರೆಯುತ್ತಿರಲು ಆತನು ಹೊರಟು ಬೀದಿಯಲ್ಲಿ ಬರುತ್ತಿದ್ದನು ಆ ರಾಯನನ್ನು ನೋಡಬೇಕೆಂದು ಸಂತೋಷದಿಂದ ಆ ಪಟ್ಟಣದಲ್ಲಿ ಇರುವ ಸ್ತ್ರೀಯರು ಅತ್ಯುನ್ನತಗಳಾದ ಉಪ್ಪರಿಗೆಗಳನ್ನು ಏರಿ ಅಂದ ದಿಂದ ಒಪ್ಪಿ ದೇವೇಂದ್ರನಿಗೆ ಸಮಾನನಾಗಿರುವ ರಾಯನನ್ನು ಕಂಡು--ಈತನ ಪರಾ ಕ್ರಮವು ಲೋಕಾದ್ಭುತವಾದುದು ಎಂದು ಸ್ತುತಿಸಿ ಆತನಲ್ಲಿ ಪ್ರೇಮಾತಿಶಯದಿಂದ ಪುಷ್ಪವರ್ಷಗಳನ್ನು ಕರೆಯುತ್ತಿದ್ದರು,