ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 123 ವಿವರಿಸುತ್ತೇನೆ, ಕೇಳು ; ಪರ್ವತಗಳೂ ವನಗಳೂ ಧನಗಳೂ ನಿಧಿಗಳೂ ಸಮುದ್ರ ಗಳೂ ಉಳ್ಳ ಈ ಮಹೀಮಂಡಲವನ್ನೂ ನಿನ್ನೊಡನೆ ಕೂಡಿದ ಸ್ಥಾವರ ಜಂಗಮಾತ್ಮ ಕವಾದ ಸಮಸ್ತಲೋಕಗಳನ್ನೂ ಒಂದೇ ರೆಕ್ಕೆಯಲ್ಲಿ ಆಯಾಸವಿಲ್ಲದೆ ವಹಿಸುವೆನು. ಇದೀಗ ನನ್ನ ಬಲವೆಂದು ತಿಳಿಸಲು ದೇವೇಂದ್ರನು ಆತನನ್ನು ಕಂಡು--ನೀನು ಅಷ್ಟು ಬಲವುಳ್ಳವನೇ ಸರಿ, ಅದಕ್ಕೆ ಸಂಶಯವಿಲ್ಲ. ಈ ಹೊತ್ತು ಮೊದಲ್ಗೊಂಡು ನನ್ನಲ್ಲಿ ಶಾಶ್ವತವಾದ ಸ್ನೇಹವನ್ನು ಪರಿಪಾಲಿಸು. ಈ ಅಮೃತವನ್ನು ತೆಗೆದು ಕೊಂಡು ಹೋಗಿ ಮತ್ತೊಬ್ಬರಿಗೆ ಕೊಟ್ಟರೆ ಅವರು ನಮ್ಮ ಕೂಡ ಪ್ರತಿಭಟಿಸಿ ನಮ್ಮನ್ನು ಬಾಧಿಸುವರು. ಇದರಿಂದ ನಿನಗೆ ಪ್ರಯೋಜನವೇನು ? ಆದುದರಿಂದ ಈ ಅಮೃತವನ್ನು ಮರಳಿ ನನಗೆ ಕೊಡಬೇಕೆನಲು ಆ ಗರುಡನು ಒಂದು ನಿಮಿತ್ತದಿಂದ ಈ ಅಮೃತವನ್ನು ತೆಗೆದು ಕೊಂಡು ಹೋಗುವುದೇ ಹೊರತಾಗಿ ಒಬ್ಬರಿಗೆ ಪಾನವನ್ನು ಮಾಡಿಸಬೇಕೆಂದು ನನಗೆ ಇಚ್ಚೆ ಇಲ್ಲ. ಇದನ್ನು ಒಂದು ಪ್ರದೇಶದಲ್ಲಿ ಇರಿಸಿದ ಮೇಲೆ ನೀನು ಎತ್ತಿ ಕೊಂಡು ಹೋಗುವುದು ನನಗೆ ಸಮ್ಮತವೇ ಎಂದು ಹೇಳಿದುದಕ್ಕೆ ದೇವೇಂದ್ರನು ಸಂತೋಷಪಟ್ಟು ನೀನು ಅಮ್ಮತವನ್ನು ಕೆಳಗೆ ಇರಿಸಿದಲ್ಲಿ ನಾನು ಅದನ್ನು ಎತ್ತಿ ಕೊಂಡು ಹೋಗುವೆನು ಎಂದು ನುಡಿದು ಗರುಡನ ಸಂಗಡವೇ ಬರುತ್ತಿದ್ದನು. ಗರುಡನು ಅತಿತರೆಯಿಂದ ತನ್ನ ತಾಯಿಯ ಸನ್ನಿಧಿಗೆ ಬಂದು--ಅಮಾ ! ಅಮೃತ ವನ್ನು ತಂದೆನು. ಇನ್ನೇನು ಮಾಡಬೇಕೆನಲು ಅವಳು ಪರಮಸಂತೋಷಯುಕ್ತಳಾಗಿ ಇದನ್ನು ಆ ಸರ್ಪಗಳಿಗೆ ಒಪ್ಪಿಸೆಂದಳು, ಅವನು ಸರ್ಪಗಳ ಬಳಿಗೆ ಬಂದುಎಲೆ, ಸರ್ಪಗಳಿರಾ ! ಅಮೃತವನ್ನು ತಂದಿದ್ದೇನೆ. ಅದನ್ನು ದರ್ಭೆಯ ಮೇಲಿರಿಸು ತೇನೆ. ನೀವು ಸ್ನಾನವನ್ನು ಮಾಡಿ ಅದನ್ನು ಭಕ್ಷಿಸಬಹುದೆನಲು ಆ ಸರ್ಪಗಳು ಅತಿಸಂತೋಷದಿಂದ ಎಲೆ, ಗರುಡನೇ ! ನಿನ್ನ ತಾಯಿಯ ದಾಸ್ಯವು ಇಂದಿಗೆ ತೀರಿತು, ಸ್ವಸ್ಥನಾಗಿ ಹೋಗೆಂದು ಹೇಳಿ ಸ್ನಾನಕ್ಕೆ ಹೋದುವು. ಆ ಸಮಯ ವನ್ನು ನಿರೀಕ್ಷಿಸಿಕೊಂಡಿದ್ದ ಇ೦ದ್ರನು ಆ ಅಮೃತಕಲಶವನ್ನು ತೆಗೆದುಕೊಂಡು ಅಮರಾವತಿಗೆ ಹೋದನು, ಇತ್ತಲಾ ಸರ್ಪಗಳು ಸ್ಥಾನವನ್ನು ಮಾಡಿ ಬಂದು ಅಮೃತಕಲಶವನ್ನು ಕಾಣದೆ ಗರುಡನು ಮೋಸಮಾಡಿದನೆಂದು ಖೇದಗೊಂಡು ಆ ಕಲಶವನ್ನು ಇಟ್ಟಿದ್ದ ದರ್ಭೆಗಳನ್ನು ನೆಕ್ಕಲು ಆ ದರ್ಭೆಗಳ ಅಂಚುಗಳು ಅವು ಗಳ ನಾಲಿಗೆಗಳನ್ನು ಇಬ್ಬಾಗಮಾಡಿದುವು. ಅಂದಿನಿಂದ ಸರ್ಪಗಳಿಗೆ ದ್ವಿಜಿಹ್ವಗ ಳೆಂದು ಹೆಸರಾಯಿತು. ಅನಂತರದಲ್ಲಿ ಗರುಡನು ಪಕ್ಷಿರಾಜನಾಗಿ ಸರ್ಪಗಳನ್ನು ಭಕ್ಷಿಸುತ್ತಾ ಆ ಪವಿತ್ರವಾದ ಅರಣ್ಯದಲ್ಲಿ ಮಾತೃಶುಶ್ರ ಷೆಯನ್ನು ಮಾಡಿಕೊಂಡಿ ರುತ್ತಿದ್ದನು.