ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 KANARESE SELECTIONS-PART III ಗುವ ರೀತಿಗೆ ದೇವತೆಗಳಿಂದ ನಿರ್ಮಿಸಲ್ಪಟ್ಟು ತೀಕ್ಷವಾದ ಅಚ್ಚುಗಳಿಂದಲೂ ಅಗ್ನಿ ಸೂರ್ಯಕಾಂತಿಯಿಂದಲೂ ಕೂಡಿಕೊಂಡು ಯಾವಾಗಲೂ ಸುತ್ತುತ್ತಾ ಇರುವ ಶಸ್ಯಯಂತ್ರವನ್ನು ನೋಡಿ ಅದರಲ್ಲಿ ಹೋಗುವದಕ್ಕೆ ಅವಕಾಶವನ್ನು ಕಾಣದೆ ಆ ಯಂತ್ರದ ಸುತ್ತಲೂ ತಿರಿಗಿ ಅದರ ಅಚ್ಚಿನ ಸಂದಿನಲ್ಲಿ ಸ್ವಲ್ಪ ಸ್ಥಳವನ್ನು ಕಂಡು ಸೂಕ್ಷ್ಮರೂಪವನ್ನು ವಹಿಸಿ ನಿಮಿಷ ಮಾತ್ರದಲ್ಲಿ ಅದರೊಳಗೆ ಹೊಕ್ಕು ಆ ಚಕ್ರದ ಕೆಳಗೆ ಬಳ್ಳಿ ಮಿಂಚುಗಳಂದದಿಂದ ನಾಲಿಗೆಗಳನ್ನು ನೀಡುತ್ತಾ ಗಗನವನ್ನು ಸೋಕುವ ಉರಿಗಳೊಡನೆ ಕೂಡಿರುವ ಕಾಡ್ಡಿ ಚಿನೋಪಾದಿಯಲ್ಲಿ ಮಹಾ ಶರೀರ ಯುಕ್ತಗಳಾಗಿ ಕಣ್ಣುಗಳಿಂದ ವಿಷವನ್ನು ಕಾರುವಂಥಾ ಎವೆ ಇಲ್ಲದೆ ಇರುವ ದೃಷ್ಟಿಗಳುಳ್ಳಂಥಾ ಯಾವಾಗಲೂ ಕೋಪದಿಂದಲೇ ಕೂಡಿ ನೋಡಿದ ಮಾತ್ರದಿಂದಲೇ ವಸ್ತುಗಳನ್ನು ದಹಿಸುವಂಥಾ ಎರಡು ಸರ್ಪಗಳನ್ನು ಕಂಡು ತನ್ನ ಗರಿಗಳ ಗಾಳಿ ಗಳಿಂದ ಹುಟ್ಟಿದ ಧೂಳಿಗಳಿಂದ ಆ ಕೂರಸರ್ಪಗಳ ಕಣ್ಣುಗಳನ್ನು ಮುಚ್ಚಿ ಅವುಗಳನ್ನು ಕಾಣದಂತೆ ಆ ಸರ್ಪಗಳನ್ನು ಹಿಡಿದು ತುಮುರುತುಮುರಾಗಿ ಮಾಡಿ ಆ ಅಮೃತ ಕಲಶವನ್ನು ತೆಗೆದು ಕೊಂಡು ತಾನು ಅಮೃತಪಾನವನ್ನು ಅಪೇಕ್ಷಿಸದೆ ಹೊರಗೆ ಬಂದು ತನ್ನ ಎರಡು ಗರಿಗಳಿಂದ ಸೂರನ ತೇಜಸ್ಸನ್ನು ಮುಚ್ಚುತ್ತಾ ಬರುವೆ ಸಮಯದಲ್ಲಿ ಮಹಾ ವಿಷ್ಣುವು ಆತನ ಸಾಹಸಕ್ಕೆ ಸಂತೋಷಪಟ್ಟು ಆತನಿಗೆ ಪ್ರಸ ನೈನಾಗಿ--ಎಲೈ, ಪಕ್ಷಿರಾಜನೇ ! ನಾನು ನಿನ್ನ ಪರಾಕ್ರಮಕ್ಕೆ ಮೆಚ್ಚಿದೆನು, ನಿನಗಿ ಷ್ಟವಾದ ವರವನ್ನು ಬೇಡೆನಲು-ಎಲೈ, ಎಷ್ಟು ವೇ ! ನನಗೆ ಅಮೃತಪಾನವಿಲ್ಲದಿದ್ದರೂ ಜರಾಮರಣಗಳಿಲ್ಲದಂತೆ ದಯಮಾಡಬೇಕೆನಲು ವಿಷ್ಣು ವು-ಹಾಗೇ ಆಗಲೆಂದು ವರವನು ಕೊಟ್ಟುಆತನನ್ನು ತನಗೆ ವಾಹನವಾಗಿಯೂ ಧ್ವಜವಾಗಿಯೂ ಇರಬೇ ಕೆಂದು ಪ್ರಾರ್ಥಿಸಿದನು. ಗರುಡನು ಅದಕ್ಕೆ ಒಪ್ಪಿಕೊಂಡು ಗಗನ ಮಾರ್ಗದಲ್ಲಿ ಬರುತ್ತಿರಲು ಅಮ್ಮತವನ್ನು ತೆಗೆದು ಕೊಂಡು ಹೋದನೆಂಬ ಕೋಪದಿಂದ ಇಂದ್ರನು ಆ ಗರುಡನನ್ನು ಬೆನ್ನಟ್ಟಿ ಕೊಂಡು ಬಂದು ಅವನನ್ನು ತನ್ನ ವಜ್ರಾಯುಧದಿಂದ ಬಲವಾಗಿ ತಿವಿದನು. ಅವನು ಇಂದ್ರನನ್ನು ಕುರಿತು ನಗುತ್ತಾ--ಎಲೈ, ಇಂದ್ರನೇ ! ನಿನ್ನ ವಜ್ರಾಯುಧವು ನನಗೆ ಒಂದಿಷ್ಟಾದರೂ ನೋಯಿಸದೇ ಹೋಯಿತು. ಆದರೆ ಈ ಆಯುಧೋತ್ಪತ್ತಿ ಕಾರಣನಾದ ದಧೀಚಿಯನ್ನೂ ನಿನ್ನನ್ನೂ ಈ ಆಯುಧವನ್ನೂ ಸಕಲರೂ ಬಹುಮಾನಪಡಿಸುವ ಹಾಗೆ ನನ್ನ ಈ ಪಕ್ಷದಲ್ಲಿರುವ ಒಂದು ಗರಿಯನ್ನು ಸಡಲಿಸಿ ಬಿಡುತ್ತೇನೆ ಎಂದು ಒಂದು ಗರಿಯನ್ನು ಉದುರಿಸಿದನು. ಇಂದ್ರನು ಆತನ ಅದ್ಭುತಪರಾಕ್ರಮವನ್ನೂ ಸಾಹಸವನ್ನೂ ಕಂಡು ಆತನನ್ನು ಕರೆದು-ನಿನ್ನ ಬಲ ವೆಷ್ಟು ಎಂದು ತಿಳಿಯಬೇಕು, ನಿನ್ನ ಕೂಡ ಸರ್ವಥಾ ಸ್ನೇಹವನ್ನು ಬಯಸಿದ್ದೇನೆ ಎನ್ನಲು ಗರುಡನು-ಎಲೆ, ದೇವೇಂದ್ರನೇ ! ನೀನು ಹೇಳಿದ ಪ್ರಕಾರಕ್ಕೆ ನನ್ನ ಸ್ನೇಹವು ನಿನಗೆ ಆಗತಕ್ಕುದೇ ಸರಿ. ನನ್ನ ಮಹಾ ಬಲವನ್ನು ತಿಳಿಯಬೇಕೆಂದು ಕೇಳಿದಿಯಲ್ಲ ? ಲೋಕದಲ್ಲಿ ಯಾರೂ ಆತ್ಮ ಸ್ತುತಿಯನ್ನು ಮಾಡಬಾರದು ಎಂದು ದೊಡ್ಡವರು ಹೇಳುವರು. ಆದರೂ ನೀನು ಮಿತ್ರಭಾವದಿಂದ ನನ್ನನ್ನು ಕೇಳಿದಕಾರಣ