ಕಥಾಸಂಗ್ರಹ-೩ನೆಯ ಭಾಗ 121 ಲಾಗಿದ್ದ ಭೌಮನು ಮುಹೂರ್ತಮಾತ್ರ ಕಾದಿ ಆ ಪಕ್ಷಿ ರಾಜನ ಗರಿಗಳಿಂದಲೂ ಕೊಕ್ಕಿನಿಂದಲೂ ಗಾಯವಡೆದು ಓಡಿಹೋದನು. ಗರುಡನು ತನ್ನ ಗರಿಗಳ ವೇಗ ದಿಂದ ಗಾಳಿಯನ್ನು ಕಲ್ಪಿಸಲು ಆ ಗಾಳಿಯಿಂದುಂಟಾದ ಧೂಳಿಯು ದೇವತಾಸೈನ್ಯ ಗಳ ಮೇಲೆ ಕವಿಯುತ್ತಾ ಅವರ ಕಣ್ಣುಗಳಿಗೆಲ್ಲಾ ತುಂಬಿಕೊಂಡು ದುಂದ ಅವರು ಕುರುಡರಾಗಿ ಇವನನ್ನು ನೋಡುವುದಕ್ಕಾಗದೆ ಸುಮ್ಮನೆ ತಿರುಗುತ್ತಿದ್ದರು. ಗರುಡನು ಆ ಸೈನ್ಯವನ್ನೆಲ್ಲಾ ಗರಿಗಳಿಂದಲೂ ಕೊಕ್ಕಿನಿಂದಲೂ ಹೊಡೆದು ಚುಚ್ಚುತ್ತಾ ನೆಲಕ್ಕೆ ಕೆಡಹಲು ದೇವೇಂದ್ರನು ಆ ಧೂಳಿಯನ್ನು ಹೋಗಲಾಡಿಸುವುದಕ್ಕೆ ವಾಯುದೇವ ನನ್ನು ಕಳುಹಿಸಿದನು. ಆ ವಾಯುವು ಆ ಧೂಳಿಯನ್ನು ಪರಿಹರಿಸಿ ದಿಕ್ಕುಗಳನ್ನು ಬೆಳಗಿಸಲು ದೇವತೆಗಳು ಒಮ್ಮಡಿಯಾಗಿ ಕಾಣಿಸಿಕೊಂಡು ತಮ್ಮ ತಮ್ಮ ಆಯುಧ ಗಳಿಂದ ಗರುಡನನ್ನು ತಿವಿದರು, ಗರುಡನು ಕೋಪಿಸಿಕೊಂಡು ಸಿಂಹನಾದವನ್ನು ಮಾಡಿ ನಾಲ್ಕು ದಿಕ್ಕುಗಳಲ್ಲಿಯೂ ಕಾಣಿಸಿಕೊಂಡು ನಾನಾಪ್ರಕಾರವಾಗಿ ಆಯುಧ ಗಳಿಂದ ತಿವಿಯುವ ದೇವತೆಗಳಿಗೆ ಭಯ ಹುಟ್ಟುವ ಹಾಗೆ ಆಕಾಶಕ್ಕೆ ಹಾರಿದನು. ಆ ದೇವತೆಗಳು ಕಬ್ಬಿಣದ ಕೋಲುಗಳನ್ನೂ ಶೂಲಗಳನ್ನೂ ದೊಣ್ಣೆಗಳನ್ನೂ ಪಟ್ಟಾ ಕತ್ತಿಗಳನ್ನೂ ಚೂರಿಗಳನ್ನೂ ಸಾಣೆಯ ಕತ್ತಿಗಳನ್ನೂ ಇನ್ನು ನಾನಾ ವಿಧಗಳಾದ ಆಯುಧಗಳನ್ನೂ ಆ ಗರುಡನ ಮೇಲೆ ಪ್ರಯೋಗಿಸಿದರೂ ಅವುಗಳನ್ನು ಲಕ್ಷಿಸದೆ ನಿಮಿಷಮಾತ್ರದಲ್ಲಿ ಆ ಗರುಡನು ತನ್ನ ಗರಿಗಳಿಂದಲೂ ಉಗುರುಗಳಿಂದಲೂ ದೇವತೆ ಗಳನ್ನು ಪ್ರಹರಿಸಲು ಅವನ ಉಗುರುಗಳ ಪೆಟ್ಟನ್ನು ತಡೆಯಲಾರದೆ ಆ ದೇವತೆಗಳೆ ಆರೂ ದಿಕ್ಕು ದಿಕ್ಕಿಗೆ ಓಡಿಹೋದರು. ಈ ಪ್ರಕಾರವಾಗಿ ಸಕಲದೇವತಾಸಮೂಹಗಳು ಅನೇಕಮುಖವಾಗಿ ತಮ್ಮೊ ಡನೆ ಕಾಳಗ ಮಾಡುತ್ತಿರುವ ಗರುಡನ ಪರಾಕ್ರಮಕ್ಕೆ ಎದುರಾಗಿ ನಿಲ್ಲಲಾರದೆ ತಿರುತಿರಿಗಿ ನೋಡುತ್ತಾ ಭಯದಿಂದ ಪಲಾಯನವನ್ನು ಮಾಡಿದರು. ಆ ಮೇಲೆ ಅಶ್ವಕಂದನನು ರೇಣುಕನು ಕ್ರರರನು ತಪನನು ಉಲೂಕನು ಚೈವಮಾನನು ನಿಮಿ ಷನು ಪ್ರರು ಜನು ಪ್ರತಿಹನು ಎಂಬ ದೇವತೆಗಳೊಡನೆ ತಾಕಿ ಯುದ್ಧಕ್ಕೆ ತೊಡಗಿ ಕೊಕ್ಕಿನಿಂದ ತಿವಿದು ರೆಕ್ಕೆಗಳಿಂದ ಬಡಿದು ಹದವಾದ ಉಗುರುಗಳಿಂದ ಸೀಳೆ ಧುಮಿಕಿ ಕಕ್ಕಸಗಾರನಾಗಿ ಪ್ರಳಯಕಾಲದ ರುದ್ರನೋಪಾದಿಯಲ್ಲಿ ರೌದ್ರರೂಪಿನಿಂದ ಇರಲು ಮಹಾ ಬಲಪರಾಕ್ರಮಸಂಪನ್ನನಾಗಿರುವ ಆ ಗರುಡನೆದುರಿಗೆ ಅಮರಶ್ರೇ ಷೇರು ರಕ್ತವನ್ನು ವರ್ತಿಸುವ ಮಹಾ ಮೇಘಗಳ ರೀತಿಗೆ ನಿಂತಿದ್ದರು. ಗರುಡನು ಅವರನ್ನು ನಿಃಶೇಷವಾಗಿ ಕೊಂದು ಅಮೃತವಿದ್ದ ತಾವಿಗೆ ಹೋಗುವ ಸಮಯ ದಲ್ಲಿ ಅಮೃತಸ್ಥಾನವನ್ನು ಸುತ್ತಿಕೊಂಡು ಜ್ವಾಲೆಗಳಿಂದ ದಹಿಸುತ್ತಿರುವ ಅಗ್ನಿ ಸ್ವರೂಪವಾದ ಸುತ್ತಣ ಕೋಟೆಯನ್ನು ಕಂಡು ಎಂಟು ಸಾವಿರದ ನೂರು ಮುಖಗ ಇನ್ನು ಧರಿಸಿ ಅತಿವೇಗದಿಂದ ಹೋಗಿ ಸಕಲ ನದೀಜಲಗಳನ್ನೆಲ್ಲಾ ಕುಡಿದು ಬಂದು ಅದರಿಂದ ಅಗ್ನಿ ಜ್ವಾಲೆಯನ್ನು ತಡೆದು ಅಮೃತಸ್ಥಾನವನ್ನು ಹೊಕ್ಕು ಅದರ ಸವಿಾಪದಲ್ಲಿ ಅಮೃತವನ್ನು ಅಪಹರಿಸಿಕೊಂಡು ಹೋಗುವವರಿಗೆ ನಿಮ್ಮ ವಾ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೩
ಗೋಚರ