ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

120 KANARESE SELECTIONS-PART III ದ ಕ ಅವರೆಲ್ಲರನ್ನೂ ಭಕ್ತಿ ಸಿದರೂ ತೃಪ್ತಿಯಾಗದೆ ಸಮುದ್ರದಲ್ಲಿರುವ ಬಹುವಿಧ ಮತ್ತ್ವ ಗಳನ್ನೂ ಭಕ್ಷಿಸಿದನು. ಆ ಸಮಯದಲ್ಲಿ ಗರುಡನ ಕೊರಳಲ್ಲಿ ಅಗ್ನಿ ಜ್ವಾಲೆಯ ಹಾಗೆ ಉರಿಯುತ್ತಾ ನುಂಗಕೂಡದೆ ಇರುವ ಒಬ್ಬ ಬ್ರಾಹ್ಮಣನು ಅಡ್ಡಲಾಗಲು ಆ ಬ್ರಾಹ್ಮಣನನ್ನು ಬಿಟ್ಟು ಬಿಟ್ಟು ಆ ಕಿರಾತರನ್ನೆಲ್ಲಾ ತಿಂದರೂ ಹಸಿವು ಅಡಗದೆ ಹೋದುದರಿಂದ ತನ್ನ ತಂದೆಯಾದ ಕಶ್ಯಪನೆಡೆಗೆ ಹೋಗಿ--ಅಪ್ಪಾ ! ನಾನು ತಾಯಿಯ ದಾಸ್ಯವನ್ನು ಪರಿ ಹರಿಸುವ ನಿಮಿತ್ತವಾಗಿ ಅಮೃತವನ್ನು ತರುವುದಕ್ಕೆ ಹೋಗುತ್ತಿದ್ದೇನೆ, ನನಗೆ ಯಾವ ಆಹಾರದಿಂದಲೂ ತೃಪ್ತಿಯಾಗಲಿಲ್ಲ, ನೀನಿನ್ನೊ ಂದು ಆಹಾರವನ್ನು ನೇಮಿಸೆಂದು ಬೇಡಿಕೊಳ್ಳಲು ಅವನು--ಎಲೈ, ಮಗನೇ ! ಪೂರ್ವದಲ್ಲಿ ಸುಪ್ರತೀಕ ವಿಭಾವಸು ಗಳೆಂಬ ಇಬ್ಬರು ಅಣ್ಣ ತಮ್ಮಂದಿರು ಪಿತ್ರಾರ್ಜಿತ ಧನವಿಭಾಗದ ನಿಮಿತ್ತದಿಂದ ಪರ ಸ್ಪರ ಶಾಪಗ್ರಸ್ತರಾಗಿ ಆನೆ ಆಮೆಗಳ ರೂಪದಿಂದ ಒಂದು ನದಿಯಲ್ಲಿ ಜಗಳವಾಡುತ್ತಿ ದ್ದಾರೆ, ನೀನು ಅವುಗಳನ್ನು ಭಕ್ಷಿಸು, ಹೋಗೆಂದು ಕಳುಹಿಸಲು ಗರುಡನು ಅದೇ ಮೇರೆಗೆ ಅವುಗಳನ್ನು ಭಕ್ಷಿಸಿ ತೃಪ್ತನಾಗಿ ಅಮೃತವನ್ನು ತರುವುದಕ್ಕೋಸ್ಕರ ಅಂತರಿ ಕ್ಷಕ್ಕೆ ಹಾರಿದನು. ಆಗ ದೇವಲೋಕದಲ್ಲಿ ಅಶುಭಸೂಚಕಗಳಾದ ಉತ್ಪಾತಗಳು ಉಂಟಾದವು, ಹೇಗಂದರೆ--ಇ೦ದ್ರನ ವಜ್ರಾಯುಧವು ತನ್ನಷ್ಟಕ್ಕೆ ತಾನೇ ಉರಿ ಯಿತು, ಹೊಗೆಯಿಂದಲೂ ಉರಿಯಿಂದಲೂ ಕೂಡಿ ಒಂದು ಕೊಳ್ಳಿಯು ಇಂದ್ರನ ಮುಂದೆ ಬಿದ್ದಿತು. ಆಕಾಶವು ಮೇಘಗಳಿಲ್ಲದೆ ಗುಡುಗಿತು. ಮೇಘಗಳೆಲ್ಲಾ ರಕ್ತ ವನ್ನು ವರ್ಷಿಸಿದವು. ದೇವತೆಗಳು ಧರಿಸಿರುವ ಪುಷ್ಪಮಾಲೆಗಳು ಬಾಡಿದವು. ದೇವತೆ ಗಳ ಮುಖಕಾಂತಿಯು ತಗ್ಗಿ ತು. ಇವೇ ಮೊದಲಾದ ಉತ್ಪಾತಗಳನ್ನು ಕಂಡು ದೇವೇಂದ್ರನು ಭಯಪಟ್ಟು ಬೃಹಸ್ಪತ್ಯಾಚಾರನನ್ನು ಕರಿಸಿ--ಈ ಅಪಶಕುನವು ಯಾವ ನಿಮಿತ್ತದಿಂದ ಉಂಟಾಯಿತು ? ಹೇಳಿರೆಂದು ಕೇಳಲು ಆ ಗುರುವು-ಎಲೆ, ಇಂದ್ರನೇ ! ನೀನು ಪೂರ್ವದಲ್ಲಿ ವಾಲಖಿಲ್ಯರನ್ನು ಪರಿಹಾಸ್ಯ ಮಾಡಿದುದರಿಂದ ಅವರ ತಪಃಪ್ರಭಾವದಿಂದ ಹುಟ್ಟಿದ ಗರುಡನೆಂಬುವನು ಅಮ್ಮತವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಬರುತ್ತಿದ್ದಾನೆ ಇದು ನಿಶ್ಚಯವೆಂದು ಹೇಳಿದನು, ಇಂದ್ರನು ಆ ಅಮೃತಕಲಶಕ್ಕೆ ಕಾವಲಾಗಿರುವ ದೇವತೆಗಳನ್ನು ಕರಿಸಿ ಈ ವೃತ್ತಾಂತವನ್ನು ತಿಳಿಸಿ-ನೀವು ನಿಮ್ಮ ಆಯುಧಗಳನ್ನು ಹಿಡಿದು ಮೋಸಬಾರದ ರೀತಿಗೆ ಸನ್ನದ್ಧರಾಗಿ ರಬೇಕು ಎಂದು ಕಟ್ಟು ಮಾಡಲು ಅವರು ಅದೇ ಪ್ರಕಾರ ಎಚ್ಚರದಿಂದ ಕಾದು ಕೊಂಡಿದ್ದರು. ಇತರ ದೇವತೆಗಳು ಕನಕವೈಡೂರ್ಯ ವಿಚಿತ್ರಗಳಾದ ತಮ್ಮ ತಮ್ಮ ಕವಚಗಳನ್ನು ತೊಟ್ಟು ಕೆಲವರು ಶಸ್ತ್ರಗಳನ್ನೂ ಕೆಲವರು ಚಕ್ರಗಳನ್ನೂ ಕೆಲವರು ದೊಣ್ಣೆಗಳನ್ನೂ ಕೆಲವರು ಶೂಲಗಳನ್ನೂ ಕೆಲವರು ಕೊಡಲಿಗಳನ್ನೂ ಇನ್ನು ಕೆಲವರು ಈಟಿಗಳನ್ನೂ ಹಿಡಿದು ಯುದ್ಧ ಸನ್ನದ್ಧರಾಗಿ ನಿಂತು ಕೊಂಡರು. ಇತ್ತಲಾ ಗರುಡನು ದೇವಲೋಕವನ್ನು ಪ್ರವೇಶಿಸಿದ ಮಾತ್ರದಿಂದ ಆತನನ್ನು ಕಂಡು ದೇವತಾಸೈನ್ಯವೆಲ್ಲವೂ ತಲ್ಲಣಿಸುತ್ತಾ ಇರಲು - ಆ ಅಮೃತಕಲಶಕ್ಕೆ ಕಾವ