ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-4ನೆಯ ಭಾಗ 119 ರಮಣಕದ್ವೀಪವನ್ನು ಕಂಡು ಅಲ್ಲಿ ಇಳಿದು ತಮ್ಮ ಮನಸ್ಸು ಬಂದ ಕಡೆಯಲ್ಲೆಲ್ಲಾ ಸಂಚರಿಸಿ ತಿರಿಗಿ ಆ ಸರ್ಪಗಳು ಗರುಡನನ್ನು ಕುರಿತು-ಎಲೈ ! ಈ ದ್ವೀಪವಲ್ಲದೆ ಇನ್ನೂ ಅನೇಕ ಸ್ಥಳಗಳಿವೆ, ಅವುಗಳನ್ನೆಲ್ಲಾ ತೋರಿಸು ಎಂದು ಹೇಳಿದವು. ಗರುಡನು ಆ ಮಾತನ್ನು ಕೇಳಿ ಚಿಂತಾಕ್ರಾಂತನಾಗಿ ತನ್ನ ತಾಯಿಯ ಮುಖವನ್ನು ನೋಡಿ ಎಲೈ, ತಾಯೇ ! ನಾವು ಇವರ ಇಚ್ಛಾನುಸಾರ ಸೇವೆಯನ್ನು ಮಾಡುವುದಕ್ಕೆ ಕಾರ ಣವೇನೆಂದು ಕೇಳಲು ಆ ವಿನತೆಯು ತನ್ನನ್ನು ಕದುವು ಮೋಸದಿಂದ ಜೂಜಿನಲ್ಲಿ ಗೆದ್ದುದನ್ನು ವಿಸ್ತಾರವಾಗಿ ತಿಳಿಸಿದಳು. ಅದನ್ನು ಕೇಳಿ ಗರುಡನು ಮನಸ್ಸಿನಲ್ಲಿ ಬಹಳ ವ್ಯಸನಪಟ್ಟು ಈ ದಾಸ್ಯವನ್ನು ತಪ್ಪಿಸುವದಕ್ಕೆ ಏನು ಉಪಾಯವನ್ನು ಮಾಡಬೇ ಕೆಂದು ಯೋಚಿಸುತ್ತಾ ಆ ಕದ್ರುವಿನ ಮಕ್ಕಳನ್ನು ಕರೆದು-ಎಲೈ, ಮಹಾತ್ಮರುಗ ಳಿರಾ ! ನಮ್ಮ ದಾಸ್ಯವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ನಾವು ನಿಮಗೆ ಏನು ತಂದು ಕೊಡಬೇಕು ? ಯಾವ ವೃತ್ತಾಂತವನ್ನು ತಿಳಿದು ಹೇಳಬೇಕು ? ಎಂಥಾ ಸಾಹಸ ಕಾರ್ಯವನ್ನು ಮಾಡಬೇಕು? ನಿಶ್ಚಯವಾಗಿ ಹೇಳಿರೆಂದು ಕೇಳಲು ಆ ಸರ್ಪಗಳೆಲ್ಲಾ ಒಟ್ಟುಗೂಡಿ ಆಲೋಚನೆಯನ್ನು ಮಾಡಿಕೊಂಡು--ಎಲೈ, ಗರುಡನೇ ! ನೀನು ಅಮ್ಮ ತವನ್ನು ತಂದು ಕೊಟ್ಟರೆ ನಿಮ್ಮ ದಾಸ್ಯವು ತಪ್ಪುವುದೆಂದು ಗರುಡನಿಗೆ ಹೇಳಿದುವು. ಅವನು ಅದಕ್ಕೆ ಒಪ್ಪಿಕೊಂಡು ತನ್ನ ತಾಯಿಯ ಸಂಗಡ-ಎಲೆ, ತಾಯೇ ! ನಾನು ಅವಶ್ಯಕವಾಗಿ ಈ ಸರ್ಪಗಳಿಗೋಸ್ಕರ ಅಮೃತವನ್ನು ತರುವುದಕ್ಕೆ ಹೋಗುತ್ತಲಿದ್ದೇನೆ. ನನಗೆ ಆಹಾರವನ್ನು ಕೊಡೆಂದು ಕೇಳಲು ಆಕೆಯು--ಎಲೈ, ಮಗನೇ ! ಸಮುದ್ರ ಮಧ್ಯದ ಒಂದು ದ್ವೀಪದಲ್ಲಿ ಬೇಡರ ಹಳ್ಳಿಗಳುಂಟು. ಅಲ್ಲಿ ಬೇಡರು ಹೆಚ್ಚಾ ಗಿದ್ದಾರೆ, ನೀನಲ್ಲಿಗೆ ಹೋಗಿ ಅವರನ್ನು ಭಕ್ಷಿಸು. ಅಲ್ಲಿ ಬ್ರಾಹ್ಮಣರು ಇದ್ದರೆ ಅವ ರನ್ನು ಬಿಟ್ಟು ಬಿಡು ಎಂದು ಹೇಳಿದಳು, ಗರುಡನು ಆ ವಾಕ್ಯವನ್ನು ಕೇಳಿ-ಅಷ್ಟು ಮಂದಿ ಬೇಡರಲ್ಲಿ ಬ್ರಾಹ್ಮಣನು ಸಿಕ್ಕುವುದನ್ನು ಹೇಗೆ ತಿಳಿಯಬೇಕೆಂದು ಕೇಳಲು ವಿನತೆಯು ಮಗನನ್ನು ನೋಡಿ--ನೀನು ಬೇಡರನ್ನು ಭಕ್ಷಿಸುವ ಸಮಯದಲ್ಲಿ ಕೊರ ಳಿಗೆ ಸಿಕ್ಕಿ ಅಗ್ನಿಯೋಪಾದಿಯಲ್ಲಿಯ ಗಾಣದೋಪಾದಿಯಲ್ಲಿಯ ಯಾವನು ಪೀಡಿಸುವನೋ ಅವನೇ ಬ್ರಾಹ್ಮಣನು ಎಂದು ಗುರುತನ್ನು ಹೇಳಿ ಆಶೀರ್ವಾದಗಳನ್ನು ಮಾಡಿ ಕಳುಹಿಸಿದಳು. ತಾಯಿಯ ಅಪ್ಪಣೆಯನ್ನು ಶಿರಸಾವಹಿಸಿ ಗರಿಗಳನ್ನು ಬಿಚ್ಚಿ ಗಗನಮಂಡಲಕ್ಕೆ ಹಾರಿ ಅಧಿಕವಾದ ಹಸಿವು ಬಾಯಾರಿಕೆಗಳಿಂದ ಕಂಗೆಟ್ಟು ಎರಡ ನೆಯ ಯಮನೋಪಾದಿಯಲ್ಲಿ ಆ ಬೇಡರ ಗ್ರಾಮವನ್ನು ಕುರಿತು ಹೋಗುವಾಗ ಗರಿ ಗಳ ಗಾಳಿಗೆ ಭೂಮಿಯಿಂದ ಎದ್ದ ದೂಳಿಯು ಆಕಾಶಮಂಡಲಕ್ಕೆ ಹಾರಲು ಸಮುದ್ರಮಧ್ಯದಲ್ಲಿ ಇರುವ ಜಲವೆಲ್ಲವೂ ಕಲಕಾಡಲು ಸಮೀಪದಲ್ಲಿರುವ ಪರ್ವತ ಗಳು ಅಲ್ಲಾಡಲು ಭಯಂಕರವಾದ ಬಾಹುಬಲದಿಂದ ವಿಜೃಂಭಿಸಿ ಬೇಡರನ್ನು ನುಂಗುವು ದಕ್ಕೋಸ್ಕರ ಬಾಯಿ ತೆರೆದ ಕ್ಷಣದಲ್ಲೇ ಬಿರುಗಾಳಿಯಿಂದ ಕದಲುತ್ತಿರುವ ವನದಲ್ಲಿ ಧೂಳಿಗಳ ಪೆಟ್ಟಿನಿಂದ ಕಂಗೆಟ್ಟು, ಬೆದರಿದ ಪಕ್ಷಿ ಸಮೂಹವು ಆಕಾಶವನ್ನು ಪ್ರವೇಶಿ ಸುವ ಹಾಗೆ ಆ ಬೇಡರು ಅತಿತ್ರೆಯಿಂದ ಆ ಗರುಡನ ಬಾಯಿಯನ್ನು ಪ್ರವೇಶಿಸಲು