KANARESE SELECTIONSPART III 118 KANARESE SELECTIONS-PART III ಗಿರುವ ಧ್ವನಿಯಿಂದ ಭಯಂಕರವಾಗಿಯ ತಿಮಿತಿಮಿಂಗಿಲಗಳು ಮೊದಲಾದ ಜಲ ಜಂತುಗಳಿಂದ ಕೂಡಿ ಅಖಿಲರತ್ನ ಗಳಿಗೂ ಆಕರವಾಗಿಯೂ ವರುಣನಿಗೆ ಅರಮನೆ ಯಾಗಿಯೂ ಸಕಲಲೋಕಭಯಂಕರವಾಗಿಯ ಅಮೃತಕ್ಕೆ ಉತ್ಪತ್ತಿ ಸ್ಥಾನವಾ ಗಿಯ ಅಪ್ರಮೇಯವಾಗಿಯ ಅನಂತವಾಗಿಯ ಗಾಳಿಯಿಂದ ತೆರಳಿ ಬರುವ ತೆರೆಗಳೆಂಬ ಹಸ್ತಗಳಿಂದ ನಟಿಸುವಂಥಾದುದಾಗಿಯ ಚಂದ್ರನ ವೃದ್ಧಿ ಕ್ಷಯಗಳಲ್ಲಿ ವೃದ್ಧಿ ಕ್ಷಯಗಳನ್ನು ಆಚರಿಸುತ್ತಾ ಆಕಾಶದೋಪಾದಿಯಲ್ಲಿ ಇರುವ ಸಮುದ್ರವನ್ನು ಕಂಡು ಅದನ್ನು ದಾಟಿ ಬಹು ದೂರವಾಗಿ ಹೋಗಿ ಒಂದು ಪ್ರದೇಶದಲ್ಲಿ ಆ ಕುದುರೆ ಯನ್ನು ಕಂಡರು, ಪರೀಕ್ಷಿಸುವಲ್ಲಿ ಅದರ ಬಾಲವು ಕಪ್ಪಾಗಿರುವುದರಿಂದ ಮನಸ್ಸಿನಲ್ಲಿ ಖೇದಯುಕ್ತಳಾಗಿರುವ ವಿನತೆಯನ್ನು ಕದ್ರಾದೇವಿಯು ತನ್ನ ದಾಸತ್ವಕ್ಕೆ ನೇಮಿಸಲು ಅದಕ್ಕೆ ಮನಸ್ಸು ಒಡಂಬಡದೆ ವಿನತೆಯು ಹಂಬಲಿಸುತ್ತಾ ಇದ್ದಳು. ಹೀಗಿರುತ್ತಿರುವಲ್ಲಿ ಆಕೆಯ ಗರ್ಭದಿಂದ ಜನಿಸಿದ ಮೊಟ್ಟೆ ಒಡೆದು ಹುಟ್ಟಿದ ಗರುಡನು ಮಹಾ ಬಲ ಸಂಪನ್ನನಾಗಿಯ ಸೂರ್ಯನನ್ನು ಅತಿಕ್ರಮಿಸಿರುವ ತೇಜೋವಿಶೇಷದಿಂದ ಯುಕ್ತ ನಾಗಿಯ ಶ್ವೇಚ್ಛಾ ವಿಹಾರಿಯಾಗಿಯ ಸಮುದ್ರತೀರದಲ್ಲಿದ್ದ ತನ್ನ ತಾಯಿಯ ಬಳಿಗೆ ಬಂದನು. ಅದುಮೊದಲ್ಗೊಂಡು ವಿನತೆಯು ಕದ್ರಾದೇವಿಯ ದಾಸ್ಯದಲ್ಲಿ ನಿಂತಳು. ಹೀಗಿರುವಲ್ಲಿ ಒಂದಾನೊಂದು ದಿವಸ ಆ ಕದ್ರುವು ತನ್ನ ಕುಮಾರರ ಎದು ರಿಗೆ ಆ ವಿನತಾದೇವಿಯನ್ನು ಕರೆದು- ಎಲೈ! ಸಕಲ ಸರ್ಪಗಳಿಗೆ ಆಶ್ರಯವಾಗಿ ಸಮು ದ್ರಮಧ್ಯದಲ್ಲಿರುವ ರಮಣ ದ್ವೀಪಕ್ಕೆ ನನ್ನನ್ನೂ ನನ್ನ ಕುಮಾರರನ್ನೂ ಕರೆದು ಕೊಂಡು ಹೋಗೆನಲು ಹಾಗೆಯೇ ಆಗಲೆಂದು ವಿನತಾ ದೇವಿಯು ಆ ಕದ್ರು ದೇವಿ ಯನ್ನು ತನ್ನ ಬೆನ್ನಿನ ಮೇಲೆ ಏರಿಸಿಕೊಂಡು ಆ ಸರ್ಪಗಳನ್ನು ಬೆನ್ನಿನ ಮೇಲೆ ಹೊತ್ತು ಕೊಂಡು ಬರುವಂತೆ ತನ್ನ ಮಗನಾದ ಗರುಡನಿಗೆ ಆಜ್ಞಾಪಿಸಿದಳು, ಅವನು ತನ್ನ ತಾಯಿಯ ಅಪ್ಪಣೆಯ ಪ್ರಕಾರ ಆ ಸರ್ಪಗಳನ್ನು ತನ್ನ ಬೆನ್ನಿನ ಮೇಲೆ ಏರಿಸಿಕೊಂಡು ಅಂತರಿಕ್ಷದಲ್ಲಿ ಸೂರ್ಯನಿಗೆದುರಾಗಿ ಹಾರಿದನು, ಅವರಿಬ್ಬರೂ ನಡೆಯುತ್ತಿರುವ ಸಮ ಯದಲ್ಲಿ ಸೂರ್ಯಕಿರಣಸಂತಾಪದಿಂದ ಸರ್ಪಗಳೆಲ್ಲಾ ಮರ್ಛಿತಗಳಾಗಿ ಕೆಳಗೆ ಬೀಳಲು ಆ ಕದ್ರವು ದೇವೇಂದ್ರನನ್ನು ನಾನಾ ಪ್ರಕಾರವಾದ ಸ್ತೋತ್ರಗಳಿಂದ ಸುತಿಸಿದಳು, ಇಂದ್ರನು ಸಂತುಷ್ಟನಾಗಿ ಮೇಘಗಳನ್ನೆಲ್ಲಾ ಕರೆದು-ನೀವು ಆಕಾ ಶವನ್ನೆಲ್ಲಾ ಆವರಿಸಿಕೊಂಡು ವರ್ಷಿಸಿರಿ ಎಂದು ಕಟ್ಟು ಮಾಡಲು ಅವುಗಳು ಆದೇ ಪ್ರಕಾರ ವರ್ಷಿಸಿದವು. ಆ ವರ್ಷದಿಂದ ತಂತ್ರ ಹೊಂದಿ ಸರ್ಪಗಳೆಲ್ಲಾ ಯಥಾಪ್ರಕಾರ ಮರ್ಫಿ ತಿಳಿದು ಎದ್ದು ತಿರಿಗಿ ಗರುಡನ ಮೇಲೆ ಏರಿಕೊಂಡು ಸಮುದ್ರಮಧ್ಯದಲ್ಲಿ ಹೋಗುತ್ತಾ ವಿಚಿತ್ರ ಫಲಪುಷ್ಪ ಭರಿತಗಳಾಗಿ ಪರಿಮಳಿಸುತ್ತಿರುವ ಹೊನ್ನೆ ಸುರ ಹೊನ್ನೆ ಮಾವು ಸೀಮಾವು ನಿಂಬೆ ದಾಳಿಂಬೆ ಹಲಸು ಕಿತ್ತಳೆ ನೇರಿಲು ಮೊದಲಾದ ವೃಕ್ಷ ಸಮಹದಿಂದಲೂ ಮಕರಂದಪಾನದಿಂದ ಮದಿಸಿ ಝೇಂಕರಿಸುತ್ತಲಿರುವ ತುಂಬಿಗಳ ತಂಡಗಳಿಂದಲೂ ಯುಕ್ತವಾದ ಉದ್ಯಾನವನಗಳಿಂದಲೂ ಕನಕರತ್ನ ಖಚಿ ತಗಳಾದ ಮನೆಗಳಿಂದಲೂ ಸ್ವಚೋದಕಗಳುಳ್ಳ ಸರಸ್ಸುಗಳಿಂದಲೂ ಶೋಭಿಸುವ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೩೦
ಗೋಚರ