ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ್ಯ 117 ವಿಷ್ಣುವಿನ ದಯೆಯಿಂದ ಅಮೃತಪಾನವನ್ನು ಮಾಡಿ ದಾನವರ ಮೇಲೆ ಜಯವನ್ನು ಹೊಂದಿ ಮಂದರ ಪರ್ವತವನ್ನು ಯಥಾಸ್ಥಾನದಲ್ಲಿ ನಿಲ್ಲಿಸಿ ಇ೦ದ್ರನ ಸನ್ನಿಧಿಗೆ ಬಂದು--ಈ ಅಮೃತವನ್ನೂ ನಮ್ಮನ್ನೂ ರಕ್ಷಿಸುವ ಭಾರ ನಿನ್ನದೇ ಎಂದು ಹೇಳಿ ಆ ಅಮೃತಕಲಶವನ್ನು ಇಂದ್ರನ ವಶಕ್ಕೆ ಒಪ್ಪಿಸಿಬಿಟ್ಟರು. 2. GARUDA CONQUERS THE GODS AND CARRIES OFF THE AMBROSIA. ೨. ಗರುಡನು ದೇವತೆಗಳನ್ನು ಜಯಿಸಿ ಅಮೃತಕಲಶವನ್ನು ತಂದದ್ದು. ಒಂದಾನೊಂದು ದಿವಸ ಕದ್ರುದೇವಿಯು ಸಕಲಶುಭಲಕ್ಷಿತವಾಗಿ ಅತ್ಯಂತ ವೇಗಯುಕ್ತವಾಗಿರುವ ಉಚೈಶ್ಯ ವಸ್ಸೆಂಬ ಒಂದು ಅಶ್ವರತ್ನವನ್ನು ಕಂಡು ವಿನತೆ ಯನ್ನು ಕರೆದು- ಈ ಕುದುರೆಯು ಯಾವ ವರ್ಣವುಳ್ಳುದಾಗಿದೆ ? ಬೇಗ ಹೇಳೆನಲು ಆ ವಿನತೆಯು-ಇದು ಬಿಳಿಯ ವರ್ಣವುಳ್ಳುದಾಗಿ ತೋರುತ್ತದೆ. ಆದರೆ ನಿನಗೆ ಹೇಗೆ ತೋರುತ್ತದೆ ? ಹೇಳೆಂದಳು, ಆ ಕದ್ರುದೇವಿಯು--ಈ ಕುದುರೆಯ ಬಾಲ ಕಪ್ಪಾಗಿ ತೋರುತ್ತಿದೆ ಈ ವಿಷಯ ದಲಿ ಸೋತವರು ಗೆದ್ದವರಿಗೆ ದಾಸವನ್ನು ಮಾಡತಕ್ಕವರು ಎಂದು ಜದವಿಸಿ ಇದನ್ನು ನಾಳೆ ಪರೀಕ್ಷೆ ಮಾಡೋಣ ಎಂದು ಹೇಳಿದಳು, ಆ ಮೇಲೆ ಅವರಿಬ್ಬರೂ ತಮ್ಮ ತಮ್ಮ ಮನೆಗಳಿಗೆ ಹೋದರು. ಆ ಕದ್ರುವು ತನ್ನ ಸಾವಿರ ಮಂದಿ ಮಕ್ಕಳಾದ ಸರ್ಪಗಳನ್ನು ಕರೆದು- ಎಲೈ, ಮಕ್ಕಳಿರಾ ! ನಾನು ವಿನತೆಯ ಕೂಡ ಸಂತಕಟ್ಟಿಕೊಂಡು ಇದ್ದೇನೆ. ಆದುದರಿಂದ ನಾನು ಈ ಅರ್ಧದಲ್ಲಿ ಸೋಲದಂತೆ ನೀವೆಲ್ಲ ರೂ ಕಪ್ಪು ಕೂದಲುಗಳ ಹಾಗೆ ಆ ಕುದುರೆಯ ಬಾಲದಲ್ಲಿ ಕಾಣಿಸಬೇಕೆಂದು ಪ್ರಾರ್ಥಿಸಲು ಆ ಕುಮಾರಕರು, ಆ ವಾಕ್ಯವನ್ನು ಕೇಳಿ ಪರಿಹಾಸ್ಯದಿಂದ ಆ ಅರ್ಥ ವನ್ನು ಅಂಗೀಕರಿಸದೆ ಹೋದರು ಆಗ ಕದ್ರು ದೇವಿಯು ಕೋಪಿಸಿಕೊಂಡು--ನನ್ನ ಮಾತನ್ನು ಮೀರಿದುದರಿಂದ ಜನಮೇಜಯರಾಯನ ಸರ್ಪಯಾಗದಲ್ಲಿ ಈ ಸರ್ಪಕುಲವ ಷ್ಟನ್ನೂ ಅಗ್ನಿ ಯು ದಹಿಸಲಿ ಎಂದು ಶಪಿಸಲು ತಾಯಿಯ ಶಾಪಕ್ಕೆ ತಲ್ಲಣಿಸಿ ಕರ್ಕೊಟಕನೆಂಬ ಸರ್ಪನು ಭಕ್ತಿ ವಿಶ್ವಾಸಗಳಿಂದ ತಾಯಿಯ ಅಡಿಗಳಿಗೆ ಎರಗಿ. ಎಲ್‌, ತಾಯೇ : ನೀನು ಹೇಳಿದ ಪ್ರಕಾರ ಕುದುರೆಯ ಬಾಲದಲ್ಲಿ ಸೇರಿ ಕಪ್ಪು ಕೂದಲುಗಳೋಪಾದಿಯಲ್ಲಿ ಕಾಣಿಸುತ್ತೇವೆ. ನಿನ್ನ ಮನಸ್ಸಿನಲ್ಲಿರುವ ಪರಿತಾಪವನ್ನು ಬಿಡೆಂದು ಪ್ರಾರ್ಥಿಸಿದನು. ಕದ್ರುದೇವಿಯು-ನೀವು ಹಾಗೆ ಮಾಡಿದರೆ ನಮಗೆ ಶ್ರೇಯಸ್ಸಾಗುತ್ತದೆ ಎಂದು ಹೇಳಿ ಸಂತೋಷಪಟ್ಟಳು. - ಆ ರಾತ್ರಿ ಕಳೆದು ಸೂದ್ಯೋದಯವಾಗಲು ಅಕ್ಕ ತಂಗಿಯರಾದ ಕಮ್ಮುವಿನತ ಯರು ಓರ್ವರೋರ್ವರಿಗೆ ಮತ್ಸರಿಸಿ ತಮ್ಮ ತಮ್ಮ ಪಂತವು ಗೆಲ್ಲಬೇಕೆಂದು ನಿಶ್ಚಯಿಸಿ ಉಜ್ಞೆಶ್ಯವಸ್ಸೆಂಬ ಕುದುರೆಯನ್ನು ಹುಡುಕುತ್ತಾ ಅದನ್ನು ಮೊದಲು ಕಂಡ ಸ್ಥಳಕ್ಕೆ ಬಂದು ಆ ಪ್ರದೇಶದಲ್ಲಿ ಮಹತ್ತಾದ ಜಲಗಳಿಗೆ ಆಧಾರವಾಗಿಯ ಹೆಚ್ಚಾ