116 KANARESE SELECTIONS-PART III ಗಳನ್ನು ಚೆಲ್ಲುತ್ತಾ ತಂಪಾದ ಕಿರುಣಗಳುಳ್ಳ ಚಂದ್ರನು ಹುಟ್ಟಿ ದನು. ಅನಂತರದಲ್ಲಿ ಧವಳಾಂಬವರವನ್ನು ಧರಿಸಿಕೊಂಡು ಮಹಾಲಕ್ಷ್ಮಿ ಹುಟ್ಟಿ ದಳು. ಆ ಮೇಲೆ ಮದ್ಯವೂ ಉಚೈಶ್ಯ ವಸ್ಸೆಂಬ ಕುದುರೆಯ ಕೌಸ್ತುಭವೆಂಬ ದಿವ್ಯ ರತ್ನವೂ ಹುಟ್ಟಿದುವು. ಆ ಕೌಸ್ತುಭಮಣಿಯು ನಾರಾಯಣನಿಗೆ ಪದಕವಾಯಿತು. ಆ ಮೇಲೆ ಪಾರಿಜಾತವೂ ಕಾಮಧೇನುವೂ ಕಲ್ಪವೃಕ್ಷಗಳೂ ನಾಲ್ಕು ಕೊಂಬುಗಳಿಂದ ಒಪ್ಪುತ್ತಿರುವ ಐರಾವತ ವೆಂಬ ಆನೆಯ ಜನಿಸಿದುವು. ಜೈಷ್ಣಾದೇವಿಯ ಚಂದ್ರನೂ ಲಕ್ಷ್ಮಿಯ ಸುರೆ ಯ ಉಚೈಶ್ಯ ವಸ್ಸೆಂಬ ಕುದುರೆಯ ಕಾಮಧೇನುವೂ ಕಲ್ಪವೃಕ್ಷವೂ ಐರಾವ ತವೂ ಇವೆಲ್ಲಾ ದೇವತೆಗಳ ಪಾಲಿಗೆ ಬಂದುವು. ಅನಂತರದಲ್ಲಿ ಧನ್ವಂತರಿ ಎಂಬ ಒಬ್ಬ ದಿವ್ಯ ಪುರು ಷನು ಅಮೃತಪೂರಿತವಾದ ಬೆಳ್ಳಿಯ ಕಲಶವನ್ನು ಕೈಯಲ್ಲಿ ಹಿಡಿದುಕೊಂಡು ಸಮುದ್ರಮಧ್ಯದಿಂದ ಹೊರಟು ಬರಲು ಆತನನ್ನು ಕಂಡು ಆಶ್ಚರ್ಯಪಟ್ಟು ದಾನವರು ಆ ಅಮೃತಕ್ಕೋಸ್ಕರ ದೇವ ತೆಗಳೊಡನೆ ಕಲಹವಾಡಿ ಆ ಅಮೃತವನ್ನು ತಾವು ತೆಗೆದು ಕೊಂಡು ಹೋದರು. ಆಗ ನಾರಾಯಣನು ಯೋಗಮಾಯಾಪ್ರಭಾವದಿಂದ ಮೋಹಿನಿಯ ರೂಪವನ್ನು ತಾಳಿ ಆ ದಾನವರಿಗೆ ಎದುರಾಗಿ ಬಂದು ನಿಲ್ಲಲು ಅವರು ಸುಂದರಾಕಾರಿಣಿಯಾದ ಈ ಮೋಹಿ ನಿಯನ್ನು ಕಂಡು ಮಢಹೃದಯರಾಗಿ ಆಕೆಯ ಮೇಲಣ ಮೋಹದಿಂದ ಪರವಶರಾಗಿ ಆ ಅಮೃತವನ್ನು ಮೋಹಿನಿಗೆ ಒಪ್ಪಿಸಿದರು. ಆ ಮೋಹಿನಿಯು ಅಮೃತಕಲಶವನ್ನು ಕೈಯಲ್ಲಿ ಧರಿಸಿ ದೇವತೆಗಳನ್ನೂ ದಾನವರನ್ನೂ ಪ್ರತ್ಯೇಕವಾಗಿ ತನ್ನ ಎರಡು ಪಾರ್ಶ್ವ ಗಳಲ್ಲಿಯ ಪಬಯಾಗಿ ಕುಳ್ಳಿರಿಸಿ ಪಕ್ಷ ಪಾತದಿಂದ ದೇವತೆಗಳಿಗೆ ಮೊದಲು ಅಮೃತ ವನ್ನು ಬಡಿಸಲು ಅದಕ್ಕೆ ದಾನವರು ಕೋಪಿಸಿಕೊಂಡು ನಾನಾಯುಧಗಳನ್ನು ತೆಗೆದು ಕೊಂಡು ದಿವ್ಯವಾದ ಕವಚಗಳನ್ನು ತೊಟ್ಟು ಆ ದೇವತೆಗಳ ಕೂಡ ಯುದ್ಧ ವನ್ನು ಮಾಡಲಾರಂಭಿಸಿದರು. ಆಗ ನಾರಾಯಣನು ಇಂದ್ರನಿಗೆ ಸಹಾಯವಾಗಿ ತಾನೇ ಕಾಣಿಸಿಕೊಂಡು ಅದ್ಭುತಪರಾಕ್ರಮದಿಂದ ಯುದ್ಧ ದಲ್ಲಿ ದಾನವ ಶ್ರೇಷ್ಠರನ್ನು ಪೆಟ್ಟಿನಿಂದ ಓಡಿಸಿ ಆ ಅಮೃತವನ್ನು ದೇವತೆಗಳಿಗೆ ಹಂಚುತ್ತಿರಲು ಅವರು ಪಬ್ ಯಾಗಿ ಕುಳಿತುಕೊಂಡು ಅಮೃತವನ್ನು ಪಾನಮಾಡುತ್ತಿರುವ ಸಮಯದಲ್ಲಿ ಸೈಂಹಿ ಕೇಯನೆಂಬ ದಾನವನು ದೇವತಾವೇಷದಿಂದ ಕೂಡಿ ದೇವತೆಗಳೊಡನೆ ಕುಳಿತು ಅಮ್ಮ ತಪಾನವನ್ನು ಮಾಡುವ ಸಮಯದಲ್ಲಿ ಆ ಅಮೃತವುಅವನ ಕೊರಳಿನಲ್ಲಿ ಇಳಿಯುವಷ್ಟ ರೊಳಗೆ ದೇವತೆಗಳಿಗೆ ಹಿತವನ್ನು ಬಯಸಿ ಚಂದ್ರಯ್ಯರಿಬ್ಬರೂ ಸರ್ವಜ ನಾದ ವಿಷ್ಣು ವಿಗೆ ಸನ್ನೆ ಯಿಂದ ತಿಳಿಸಲು ಆಗ ಚಕ್ರಾಯುಧನು ತನ್ನ ಕೈಯಲ್ಲಿರುವ ಚಕ್ರದಿಂದ ಆ ದನುಜನ ಕೊರಳನ್ನು ಕತ್ತರಿಸಿದನು. ಅವನ ತಲೆಯು ಪರ್ವತಶಿಖರದೋಪಾದಿ ಯಲ್ಲಿ ಭೂಮಿಯಲ್ಲಿ ಬೀಳಲು ಆದರೆ ಭಾರದಿಂದ ಭೂಮಿಯು ಗಡಗಡನೆ ನಡುಗಿತು. ಆ ಮೇಲೆ ಅಮೃತಪಾನಪ್ರಭಾವದಿಂದ ಅವನ ರುಂಡವು ರಾಹುವೂ ಮುಂಡವು ಕೇತು ವೂ ಆಗಿ ಪೂರ್ವದ್ವೇಷವನ್ನು ಮನಸ್ಸಿನಲ್ಲಿಟ್ಟು ಕೊಂಡು ಚಂದ್ರಸೂರ್ಯರನ್ನು ಈಗ .ಲೂ ಪರ್ವಕಾಲಗಳಲ್ಲಿ ಪೀಡಿಸುತ್ತಿರುವುದುಂಟು, ಈ ರೀತಿಯಲ್ಲಿ ದೇವತೆಗಳು ಮಹಾ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೮
ಗೋಚರ