ಕಹಾಸಂಗ್ರಹ-4ನೆಯ ಭಾಗ 115 ಸಕಲದೇವತೆಗಳಲ್ಲಿ ಶ್ರೇಷ್ಠ ನಾಗಿಯ ಇರುವ ಪರಮೇಶ್ವರನನ್ನು ಮನಸ್ಸಿನಲ್ಲಿ ಧ್ಯಾನಿ ಸಿದನು. ಆಗ ಭಕ್ತಾನುಗ್ರಹವು ಪರಮೇಶ್ವರನು ಪ್ರತ್ಯಕ್ಷನಾಗಿ ನಿಂತು ಬ್ರಹ್ಮನ ಮುಖವಚನದಿಂದ ವಿಷ ಹುಟ್ಟಿದ ರೀತಿಯನ್ನು ತಿಳಿದು ಲೋಕಹಿತಾರ್ಥವಾಗಿ ಆ ವಿಷವನ್ನು ಪಾನಮಾಡಿ ಕಂಠದಲ್ಲಿ ನಿಲ್ಲಿಸಿಕೊಂಡು ಲೋಕದಲ್ಲಿ ವಿಷಕಂಠನೆಂಬ ಹೆಸ ರನ್ನು ತಾಳಿದನು. ಹೀಗೆ ಆ ಪರಮೇಶ್ವರನು ವಿಷಬಾಧೆಯನ್ನು ಪರಿಹರಿಸಲು ದೇವತೆ ಗಳೆಲ್ಲ ಸಂತುಷ್ಟರಾಗಿ ಯಥಾಪ್ರಕಾರ ಸಮುದ್ರವನ್ನು ಮಧಿಸುವುದಕ್ಕೆ ತೊಡಗಿದರು. ಆ ಕಾಲದಲ್ಲಿ ಹೊಗೆಗಳಿಂದಲೂ ಉರಿಗಳಿಂದಲೂ ಕೂಡಿ ಮಹತ್ತಾದ ಗಾಳಿ ಬೀಸಿತು, ಆ ಹೊಗೆ ಉರಿಗಳು ಆಕಾಶದಲ್ಲಿ ಮಿಂಚುಗಳೊಡನೆ ಕೂಡಿದ ಮೇಘಗ ಳಾಗಿ ದೇವತೆಗಳ ಶ್ರಮವನ್ನು ಪರಿಹರಿಸುವ ಹಾಗೆ ಉದಕದ ಹನಿಗಳನ್ನು ವರ್ಷಿಸು ತಿದ್ದುವು. ಮತ್ತು ಆ ಮಂದರ ಪರ್ವತದಲ್ಲಿರುವ ಮರಗಳು ತಮ್ಮ ಪುಷ್ಪವರ್ಷಗ ಳಿಂದ ಸಕಲದೇವತೆಗಳ ಶ್ರಮವನ್ನು ಪರಿಹರಿಸುತ್ತಿದ್ದುವು. ಈ ಪ್ರಕಾರ ದೇವಾಸು ರರು ಪ್ರಯಾಸದಿಂದ ಮಥಿಸುತ್ತಿರುವಲ್ಲಿ ಸಮುದ್ರ ಮಧ್ಯದಿಂದ ಮೇಘಧ್ವನಿಯ ಹಾಗೆ ದೊಡ್ಡ ಧ್ವನಿ ಹುಟ್ಟಿ ತು, ಮತ್ತು ಸಮುದ್ರವನ್ನು ಪರ್ವತದಿಂದ ಕಡೆಯುವ ಕಾರಣ ನಾನಾ ಜಲಚರಗಳೂ ಅನೇಕ ಪರ್ವತಗಳೂ ತುಮುರುತುಮುರಾಗಿ ಹೋದುವು. ಮತ್ತು ಆ ಪರ್ವತದಲ್ಲಿರುವ ಮರಗಳು ಆ ವೇಗಕ್ಕೆ ಒಂದಕ್ಕೊಂದು ಬಡಿದಾಡಿ ಮುರಿದು ಪಕಿಸಮೇತಗಳಾಗಿ ಆ ಸಮುದ್ರದಲ್ಲಿ ಬಿದ್ದುವು. ಆ ಮರಗಳು ಒಂದ ಕ್ಕೊಂದು ಉಜ್ಜುವುದರಿಂದ ಎಲ್ಲಿ ನೋಡಿದರೂ ಕಾಡ್ಡಿಚ್ಚು ಹೆಚ್ಚಿ ಬಳ್ಳಿ ಮಿಂಚುಗಳು ಮೇಘಗಳನ್ನು ಆವರಿಸುವ ಹಾಗೆ ಆ ಮಹಾ ಪರ್ವತವನ್ನು ಸುತ್ತಿಕೊಂಡು ಅಲ್ಲಿರುವ ಸಿಂಹ ಶಾರ್ದೂಲಶರಭ ಗಂಡಭೇರುಂಡಾದಿ ಮೃಗಗಳನ್ನೂ ಪಕ್ಷಿಗಳನ್ನೂ ಸುಡುತ್ತಿ ರಲು ದೇವೇಂದ್ರನು ಅದನ್ನು ನೋಡಿ ಮೇಘವರ್ಷಗಳಿಂದ ಆ ಕಾಡ್ಡಿಚ್ಚನ್ನು ಕೆಡಿ ಸುತ್ತಿದ್ದನು, ಆ ಮಂದರಪರ್ವತದಲ್ಲಿರುವ ವೃಕ್ಷಗಳ ಬೇರುಗಳಿಂದ ನಾನಾ ಪ್ರಕಾರ ವಾದ ಮೂಲಿಕಾರಸಗಳು ನದಿಯ ರೂಪವಾಗಿ ಹರಿಯುತ್ತಿದ್ದುವು. ಆ ಅಮೃತ ಸಮಾನವಾದ ದಿವ್ಯರಸಸಂಪರ್ಕದಿಂದ ದೇವತೆಗಳಿಗೆ ಬಲ ಹೆಚ್ಚುತ್ತಾ ಬಂದಿತು. ಹೀಗೆ ಅತಿಪ್ರಯತ್ನದಿಂದ ದೇವದಾನವರು ಬಹುಕಾಲ ಮಥಿಸಿದರೂ ಅಮೃತವು ಹುಟ್ಟಲಿಲ್ಲ. ಆಗ ದೇವತೆಗಳು ಬ್ರಹ್ಮನ ಬಳಿಗೆ ಹೋಗಿ--ಎಲೈ, ಬ್ರಹ್ಮನೇ ! ನಾವು ಎಷ್ಟು ಕಷ್ಟ ಪಟ್ಟರೂ ಸಕಲಲೋಕರಕ್ಷಕನಾದ ಭಗವಂತನ ಅನುಗ್ರಹವಿಲ್ಲದೆ ಹೋದರೆ ಅಮ್ಮತವನ್ನು ಹೊಂದುವುದಕ್ಕಾಗುವುದಿಲ್ಲ ಎಂದು ಬಿನ್ನೈಸಿದರು. ಹಾಗೆ ಯೇ ಬ್ರಹ್ಮನು ಮಹಾವಿಷ್ಣುವಿಗೆ ಅರಿಕೆಮಾಡಿಕೊಳ್ಳಲು ಆ ವಿಷ್ಣು ವು-ನಾನು ದೇವದಾನವರಿಗೆ ಹೆಚ್ಚಾದ ಬಲವನ್ನು ಕೊಡುತ್ತೇನೆ. ಅವರು ಯಥಾಪ್ರಕಾರ ಮಥಿಸಲಿ ಎಂದು ಅಪ್ಪಣೆಯನ್ನು ಕೊಟ್ಟನು. ಆಗ ವಿಷ್ಣು ವಿನ ಅನುಗ್ರಹ ದಿಂದ ದೇವದಾನವರು ಮಹಾ ಬಲಶಾಲಿಗಳಾಗಿ ಎಲ್ಲರೂ ಒಟ್ಟಾಗಿ ಕೂಡಿ ಸಾವಿರ ವರುಷಗಳ ಪರಂತರವೂ ಮಧಿಸುತ್ತಿರಲು ಸರ್ವಾಭರಣಭೂಷಿತೆಯಾಗಿ ಕಪ್ಪುವರ್ಣವುಳ್ಳ ಜೈಪ್ಪಾ ದೇವಿಯು ಹುಟ್ಟಿದಳು, ಅನಂತರ ನೂರು ಸೂರ್ಯಕಾಂತಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೭
ಗೋಚರ