114 KANARESE SELECTIONS-PART III ಲಾದ ಮೃಗಗಳಿಂದ ಅತಿಭಯಂಕರವಾದಂಥಾ ಭೂಮಿಯೊಳಗೆ ಹನ್ನೊಂದು ಸಾವಿರ ಯೋಜನ ಇಳಿದಿರುವುದಾಗಿಯೂ ಭೂಮಿಯ ಮೇಲೆ ಹನ್ನೊಂದು ಸಾವಿರ ಯೋಜನ ಎತ್ತರವಾಗಿಯೂ ಇರುವಂಥಾ ಮಂದರಪರ್ವತದ ಸಮಿಾಪಕ್ಕೆ ಹೋಗಿ ಅದನ್ನು ಬಹು ಪ್ರಯತ್ನದಿಂದ ಎತ್ತಿದರೂ ಅಲ್ಲಾಡದೆ ಇದ್ದುದರಿಂದ ದೇವತೆಗಳು ತಿರಿಗಿ ಬ್ರಹ್ಮದೇವನೊಡನೆ ಕೂಡಿರುವ ವಿಷ್ಣುವಿನ ಬಳಿಗೆ ಬಂದು ನಮಸ್ಕರಿಸಿ ಮಂದರ ಪರ್ವತವನ್ನು ತರುವುದಕ್ಕೆ ಉಪಾಯವೇನೆಂದು ಕೇಳಿದರು. ಆಗ ಮಹಾ ವಿಷ್ಣುವು ಅನಂತನೆಂಬ ಮಹಾ ಸರ್ಪವನ್ನು ಕರೆದು--ನೀನು ಮ೦ದರಪರ್ವತವನ್ನು ಭೂಮಿ ಯಿಂದ ಕಿತ್ತು ಬಿಡೆಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಲು ಆತನು ಮಹಾ ಬಲ ಶಾಲಿಯಾದುದರಿಂದ ಆ ಪರ್ವತವನ್ನು ಕ್ಷಣಮಾತ್ರದಲ್ಲಿ ಕಿತ್ತು ಬಿಟ್ಟನು. ಆಗ ದೇವಾಸುರರು ಅನಂತನೊಡನೆ ಕೂಡಿ ಆ ಮಂದರಪರ್ವತವನ್ನು ತಂದು ಸಮುದ್ರದಲ್ಲಿ ಹಾಕಿ ಆ ಸಮುದ್ರವನ್ನು ಕುರಿತು-ಎಲೆ, ಸಮುದ್ರನೇ ! ನಾವು ನಿನ್ನ ಉದಕ ವನ್ನು ಮಧಿಸುತ್ತೇವೆ, ನೀನು ಸೈರಿಸಬೇಕೆಂದು ಪ್ರಾರ್ಧಿಸಲು ಆತನು-ಎಲೈ, ದೇವತೆಗಳೆರಾ ! ಆ ಅಮೃತದಲ್ಲಿ ನನಗೊಂದು ಭಾಗವನ್ನು ಕೊಟ್ಟರೆ ಈ ಆಯಾಸ ವನ್ನು ಸಹಿಸಿಕೊಳ್ಳುತ್ತೇನೆಂದು ಹೇಳಿದನು. ಅದಕ್ಕೆ ದೇವಾಸುರರು ಒಪ್ಪಿಕೊಂಡು ಸಮುದ್ರ ಮಧ್ಯದಲ್ಲಿರುವ ಮಹಾ ಕೂರ್ಮನನ್ನು ಕಂಡು ಎಲೆ, ಕೂರ್ಮನೇ ! ಈ ಸಮುದ್ರ ಮಧನಕ್ಕೋಸ್ಕರ ಅದರ ಮಧ್ಯದಲ್ಲಿ ಹಾಕಲ್ಪಡುವ ಮಂದರಪರ್ವತಕ್ಕೆ ಕೆಳಗಡೆಯಲ್ಲಿ ಆಧಾರವಾಗಿ ನೀನಿರಬೇಕೆಂದು ಪ್ರಾರ್ಥಿಸಲು ಆ ಕೂರ್ಮನು ಹಾಗೆಯೇ ಆಗಲೆಂದು ಸಮ್ಮತಿಸಿ ತನ್ನ ಬೆನ್ನಿನ ಚಿಪ್ಪಿನಿಂದ ಆ ಮಹಾ ಪರ್ವತವನ್ನು ಆನಲು ಇಂದ್ರನು ತನ್ನ ವಜ್ರಾಯುಧದಿಂದ ಆ ಪರ್ವತದ ಮೇಲಾಗವನ್ನು ಅಮುಕಿಕೊಂಡಿರಲು ಮ೦ದರಪರ್ವತವೆಂಬ ಕಡೆಗೋಲಿಗೆ ವಾಸುಕಿಯನ್ನು ಹಗ್ಗ ವಾಗಿ ಮಾಡಿ ಸುತ್ತಿ ಸಮುದ್ರಮಧನಕ್ಕೆ ಯತ್ನ ವನ್ನು ಮಾಡಿದರು. ದೈತ್ಯದಾನ ವರು ವಾಸುಕಿಯ ಮುಖಭಾಗವನ್ನೂ ದೇವತೆಗಳು ಬಾಲದ ಕಡೆಯನ್ನೂ ಹಿಡಿದು ಕೊಂಡು ಸರ್ವಶ್ರೇಷ್ಠ ನಾದ ಅನಂತನೊಡನೆ ಕೂಡಿಕೊಂಡಿರುವ ನಾರಾಯಣನ ಸಂಗಡ ನಿಂತು ಕಡೆಯುತ್ತಿರುವಲ್ಲಿ ಆ ವಾಸುಕಿಯ ಮುಖದಿಂದ ಹೊರಡುವ ವಿಷ ಜ್ವಾಲೆಗಳು ಸಮುದ್ರದ ನೀರಿನೊಡನೆ ಕೂಡಲು ಆ ಮಥನ ಸಮಯದಲ್ಲಿ ಹಾಲಾ ಹಲವೆಂಬ ಮಹಾ ವಿಷವು ವಾಸುಕಿಯ ವಿಷಜ್ವಾಲೆಗಳೊಡನೆ ಕೂಡಿ ಆ ಸಮುದ್ರ ದಲ್ಲಿ ಹುಟ್ಟಿ ದೇವದಾನವರನ್ನು ಏಕಕಾಲದಲ್ಲಿ ಕೊಲ್ಲುವುದಕ್ಕೆ ಉಪಕ್ರಮಿಸಿತು. ಅವರು ಆ ವಿಷಜ್ವಾಲೆಯನ್ನು ಸಹಿಸಲಾರದೆ ಬಲುಬೇಗನೆ ಬ್ರಹ್ಮದೇವನ ಸನ್ನಿಧಿಗೆ ಹೋಗಿ ಸ್ವಾಮಿ, ಬ್ರಹ್ಮನೇ ! ನಾವು ಅಮೃತವನ್ನು ಬಯಸಿ ಸಮುದ್ರವನ್ನು ಮಥಿಸುವ ಸಮಯದಲ್ಲಿ ಕಾಲಾಗ್ನಿಯೋಪಾದಿಯಲ್ಲಿರುವ ಹಾಲಾಹಲವೆಂಬ ಭಯಂ ಕರವಾದ ವಿಷವು ಹುಟ್ಟಿ ಲೋಕಗಳೆಲ್ಲವನ್ನೂ ದಹಿಸಿಬಿಡುತ್ತಾ ಇದೆ. ಇದಕ್ಕೆ ಈಗಲೇ ಪ್ರತಿಕ್ರಿಯೆಯನ್ನು ಮಾಡಬೇಕೆಂದು ಪ್ರಾರ್ಥಿಸಲು ಆಗ ಬ್ರಹ್ಮದೇವನು ಶೂಲಪಾಣಿಯಾಗಿಯ ತ್ರಿನೇತ್ರಧರನಾಗಿಯ ಸಕಲಲೋಕಾಧಿಪತಿಯಾಗಿಯ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೬
ಗೋಚರ