ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ನೆಯ ಭಾಗ ಮಹಾಭಾರತದಿಂದ ಸಂಗ್ರಹಿಸಿದ ಕಥೆಗಳು 1. THE CHURNING OF THE SEA OF MILK. ೧, ಸಮುದ್ರ ಮಥನವು. ಪೂರ್ವದಲ್ಲಿ ಒಂದಾನೊಂದು ಸಮಯದಲ್ಲಿ ವಿಷ್ಣು ಬ್ರಹ್ಂದ್ರಾದಿ ಸಮಸ್ತ ದೇವತೆಗಳೂ ಸೂರ್ಯನ ಕಾಂತಿಯನ್ನು ನಿರಾಕರಿಸುತ್ತಿರುವುದಾಗಿಯೂ ಚಿನ್ನದ ಶಿಖರಗಳಿಂದ ಕೂಡಿರುವುದಾಗಿಯ ಸರ್ವದೇವದಾನವಾದಿಗಳಿಂದ ಸೇವಿಸಲ್ಪಡುವು ದಾಗಿಯೂ ದುಷ್ಕರ್ಮಗಳನ್ನು ಮಾಡಿದ ಜನರಿಗೆ ದುರವಗಾಹವಾಗಿಯ ಅತಿ ಭಯಂಕರವಾದ ಸರ್ವಸಮಹದಿಂದ ಯುಕ್ತವಾಗಿಯ ಸಕಲಮಲಿಕೆಗಳಿಗೆ ಆಶ್ರಯವಾಗಿಯೂ ನಿರ್ಮಲವಾದ ಜಲದಿಂದ ಕೂಡಿಹರಿಯುವ ಅನೇಕ ಗಿರಿನದಿಗ ಳಿಂದ ಕೂಡಿರುವುದಾಗಿಯ ಫಲಪುಷ್ಪ ಶೋಭಿತಗಳಾದ ಅನೇಕ ವನಗಳಿಂದ ಸಂಯು ಕವಾಗಿಯ ಗಿಣಿ ಗೊರವಂಕ ಪಾರಿವಾಳ ನವಿಲು ಇವೇ ಮೊದಲಾದ ನಾನಾ ಪಕ್ಷಿ ಗಳ ಧ್ವನಿಗಳಿ೦ದ ಅತಿರಮಣೀಯವಾಗಿಯೇ ಇರುವ ಮಹಾಮೇರು ಪರ್ವ ತಕ್ಕೆ ಹೋಗಿ ಅಲ್ಲಿ ಒಂದು ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ರಾಕ್ಷಸಬಾ ಧಾನಿವೃತ್ತಿಗಾಗಿ ಅಮ್ಮತವನ್ನು ಹೊಂದುವುದಕ್ಕೋಸ್ಕರ ಆಲೋಚನೆಯನ್ನು ಮಾಡು ತಿರಲು ಆಗ ಭಕ್ತಜನ ಪರಿಪಾಲಕನಾದ ಮಹಾವಿಷ್ಣುವು ಬ್ರಹ್ಮ ದೇವನನ್ನು ಕುರಿತು ಎಲೈ, ಬ್ರಹ್ಮನೇ ! ಈ ದೇವತೆಗಳೂ ರಾಕ್ಷಸರೂ ಕ್ಷೀರಸಮುದ್ರಕ್ಕೆ ಹೋಗಿ ಸಕಲ ಮೂಲಿಕೆಗಳನ್ನೂ ರತ್ನಗಳನ್ನೂ ಅದರೊಳಗೆ ಹಾಕಿ ಮಥಿಸಿದರೆ ಅದರಲ್ಲಿ ಅಮೃತವು ಹುಟ್ಟುತ್ತದೆ. ಆ ಅಮೃತಪಾನದಿಂದ ದೇವತೆಗಳು ಸುಖದಲ್ಲಿರು ವರು ಎಂದು ಆಜ್ಞಾಪಿಸಲು ಬ್ರಹ್ಮನು ದೇವಾಸುರರಿಗೆ ಹಾಗೆಯೇ ಕಟ್ಟು ಮಾಡಿದನು ಆಗಲಾ ದೇವಾಸುರರು ಬಹ್ಮ ದೇವನ ಅಪ್ಪಣೆಯನ್ನು ಶಿರಸಾವಹಿಸಿ ಶರತ್ಕಾ ಲದ ಮೇಘಗಳೋಪಾದಿಯಲ್ಲಿ ಬಿಳುಪಾಗಿರುವ ಶಿಖರಗಳಿಂದ ಅಲಂಕೃತವಾದಂಥಾ ಗರುಡ ಗಂಧರ್ವ ಕಿನ್ನರ ಕಿಂಪುರುಷ ದೇವತಾ ಸವಹದಿಂದ ಸೇವಿಸಲ್ಪಟ್ಟಂಥಾ ನಾನಾ ಪಕ್ಷಿಗಳ ಧ್ವನಿಗಳಿಂದ ಶೋಭಿಸುವಂಥಾ ಸಿಂಹ ಶಾರ್ದೂಲ ಶರಭ ಮೊದ