ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 KANARESE : LECTIONSPART II KANARESE SELECTIONS-PART II ಹೊಂದಿ ಭೂಲೋಕಕ್ಕೆ ಹೋಗಿದ್ದ ನಿನ್ನ ಪರಿಚಾರಿಣಿಯಾದ ಶಾರಿಕೆಯಲ್ಲವೇ ? ಈಕೆಯು ಅಲ್ಲಿ ಪೂತವತಿ ಎಂಬ ಹೆಸರನ್ನು ಹೊಂದಿ ನನ್ನ ಭಕ್ತರನ್ನು ಕಾಪಾಡಿ ದವಳು, ಇವಳು ನನಗೆ ತಾಯಿಯಾಗಬೇಕು. ಇವಳನ್ನು ನಾನು ಪೂಜಿಸಬೇಕು ಎಂದು ನುಡಿದು ಪಾರ್ವತೀದೇವಿಯೊಡನೆ ಕೂಡಿ ಎದುರಾಗಿ ಹೋಗಿ ಇವಳನ್ನು ನೋಡಿ-ಎಲೈ, ಪೂತವತಿಯೇ ! ಸುಖವಾಗಿ ಬಂದೆಯಾ ? ಎಂದು ನುಡಿಯಲು ಆ ಪೂತವತಿಯು ಸಕಲವಾದ ಪ್ರಪಂಚಕ್ಕೂ ಒಡೆಯನಾದ ಪರಮೇಶ್ವರನಿಗೆ ನಮ ಸ್ಮಾರವನ್ನು ಮಾಡಿ ಆತನ ಅನುಗ್ರಹದಿಂದ ಅಪಾಕೃತವಾದ ದಿವ್ಯ ಶರೀರವನ್ನು ಧರಿ ಸಿ ಆ ಕೈಲಾಸ ಮಧ್ಯದಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಆನಂದವನ್ನೆ ದಿ ಎಂದಿನಂತೆ ಸುಖವಾಗಿ ಇದ್ದಳು,