ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೨ನೆಯ ಭಾಗ 111 ಶ್ವರನನ್ನು ಕರೆದು--ಈ ಪೂತವತಿಯನ್ನು ವಟಾರಣ್ಯಕ್ಕೆ ಕರೆದುಕೊಂಡು ಹೋಗಿ ಬಿಡೆಂದು ಕಟ್ಟು ಮಾಡಿದರು. ವಿಚ್ಛೇಶ್ವರನು ಅವರ ಅಪ್ಪಣೆಯ ಪ್ರಕಾರ ಪೂತ ವತಿಯನ್ನು ತನ್ನ ಸೊಂಡಲಿನಿಂದ ಎತ್ತಿ ಕೊಂಡು ಒಂದೇ ಕ್ಷಣದಲ್ಲಿ ಕರೆದು ಕೊಂಡು ಹೋಗಿ ವಟಾರಣ್ಯದಲ್ಲಿ ಬಿಡಲು ಪೂತವತಿಯು ವಟಾರಣ್ಯವನ್ನು ಸೇರಿ ಅಲ್ಲಿ ನವರತ್ನಮಯವಾದ ಸಭಾಮಂಟಪದಲ್ಲಿ ಬೆತ್ತವನ್ನು ಕೈಯಲ್ಲಿ ಹಿಡಿದು ತಿರು ಗುತ್ತಿರುವ ನಂದೀಶ್ವರನನ್ನೂ ವೀಣಾಗಾನವನ್ನು ಮಾಡುತ್ತಿರುವ ಸರಸ್ವತೀ ದೇವಿಯ ನ್ಯೂ ವೇಣುಗಾನವನ್ನು ಮಾಡುವ ಲಕ್ಷ್ಮೀದೇವಿಯನ್ನೂ ಮದ್ದಲೆಯನ್ನು ಬಾರಿಸು ವಂಥ ವಿಷ್ಣುವನ್ನೂ ತಾಳವನ್ನು ಕುಟ್ಟುತ್ತಿರುವಂಧ ಬ್ರಹ್ಮದೇವನನ್ನೂ ದೀಪಗಳಾಗಿ ಬೆಳಗುತ್ತಿರುವಂಧ ನಾಲ್ಕು ವೇದಗಳನ್ನೂ ವಿನೋದಗಳನ್ನು ನೋಡುತ್ತಿರುವ ಸಕಲ ಮುನಿಗಳನ್ನೂ ಗಾಯತ್ರೀಮಯವಾದ ಮಂಟಪವನ್ನೂ ಮೇಲ್ಕಟ್ಟು ಗಳಾಗಿ ಬೆಳಗು ತಿರುವ ಸಕಲಸಿದ್ಧಾಂತಗಳನ್ನೂ ಪುಷ್ಪಗಳಾಗಿ ಒಪ್ಪುತ್ತಿರುವ ಸಪ್ತಕೋಟಿ ಮಹಾ ಮಂತ್ರಗಳನ್ನೂ ಪಂಚಾಕ್ಷರೀಮಯವಾದ ಭದ್ರಪೀರವನ್ನೂ ಸಾಕ್ಷಿಗಳಾಗಿ ನೋಡು ತಿರುವ ಚಂದ್ರಸೂರರನ್ನೂ ಸರ್ವಸಾಕ್ಷಿಣಿಯಾದ ಪರದೇವತೆಯನ್ನೂ ಭದ್ರಪೀಠದಲ್ಲಿ ಕುಳಿತು ಕೊಂಡು ಇರುವ ಪರಮೇಶ್ವರಸ್ವಾಮಿಯವರನ್ನೂ ನೋಡಿ ಬಹಳ ಆಶ ರ್ಯಪಟ್ಟು ಆತನ ದಿವ್ಯಸುಂದರಮೂರ್ತಿಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಿರು ಪರಮೇಶ್ವರಸ್ವಾಮಿಯವರು ಪೂತವತಿಗೆ ಆನಂದಮಯವಾದ ನಾಟ್ಯವನ್ನು ತೋರಿ ಸಿದರು. ಪೂತವತಿಯು ಆ ನಾಟ್ಯವನ್ನು ನೋಡಿ ಸಂತೋಷಪಟ್ಟು ಪರಮೇಶ್ವರ ನನ್ನು ಸ್ತುತಿಸುತ್ತಿರಲು ಪರಮೇಶ್ವರನು ಪೂತವತಿಯನ್ನು ನೋಡಿ-ಎಲೈ, ಪೂತವ ತಿಯೇ! ನಿನ್ನ ಭಕ್ತಿಯಿಂದ ನನಗೆ ಸಂತೋಷವಾಯಿತು. ನಿನಗೆ ಮುಕ್ತಿಯನ್ನು ಕೊಡುತ್ತೇನೆ, ಕೈಲಾಸಕ್ಕೆ ಬಾ ಎಂದು ನುಡಿದು ಮಾಯವಾಗಿ ಹೋದನು. ಪೂತವ ತಿಯು ಪರಮೇಶ್ವರನಿಗೆ ಪ್ರದಕ್ಷಿಣನಮಸ್ಕಾರಗಳನ್ನು ಮಾಡಿ ಸ್ತುತಿಸಿ ಅಲ್ಲಿ ಇರುವ ಜನರೆಲ್ಲರೂ ಆಶ್ಚರ್ಯಪಡುವಹಾಗೆ ಯೋಗಮಾರ್ಗದಿಂದ ತನ್ನ ಶರೀರವನ್ನು ಬಿಟ್ಟು ಪರಮೇಶ್ವರಸ್ವಾಮಿಯವರ ಅಪ್ಪಣೆಯಿಂದ ಬಂದಂಧ ದಿವ್ಯ ವಿಮಾನವನ್ನು ಏರಿ ಕೈಲಾಸಪರ್ವತವನ್ನು ಸೇರಿ ದೂರದಲ್ಲಿ ವಿಮಾನದಿಂದ ಇಳಿದು ಕೈಲಾಸ ಪ್ರದೇಶವನ್ನು ಪಾದಗಳಿಂದ ಮುಟ್ಟಬಾರದೆಂಬ ಭಕ್ತಿಯಿಂದ ತಲೆ ಕೆಳಗಾಗಿ ಕೈಗ ಇನ್ನು ಊರಿಕೊಂಡು ಪರಮೇಶ್ವರಸ್ವಾಮಿಯವರ ಸನ್ನಿಧಿಗೆ ಹೋಗಲು ಅಮ್ಮನ ವರು ತಲೆಯಿಂದ ನಡೆದು ಬರುವಂಧ ಪೂತವತಿಯನ್ನು ಕಂಡು ಆಶ್ಚರ್ಯದಿಂದ ಪರ ಮೇಶ್ವರನನ್ನು ನೋಡಿ ಸ್ವಾಮಿ, ದೇವ ದೇವನೇ ! ತಲೆಯಿಂದ ನಡೆದು ಬರುವಂಥ ಈ ಸೀ ಯಾರು ? ಇವಳ ರೂಪವು ವಿಕಾರವಾಗಿದೆ. ಇವಳ ಮಹಿಮೆಯಾದರೆ ಅಧಿಕ ವಾಗಿದೆ. ಅಧಿಕವಾದ ಭಕ್ತಿಯುಳ್ಳವಳಾಗಿ ಎಪ್ಪತ್ತು ನಾಲ್ಕು ಸಾವಿರ ಯೋಜನಗ ಳಿಂದ ನಡೆದು ಬರುತ್ತಿದಾಳೆ, ಇವಳ ಸ್ವರೂಪವನ್ನು ತಿಳುಹಿಸಬೇಕೆನಲು ಪರಮೇಶ್ವ ರನು ಅಮ್ಮನವರನ್ನು ನೋಡಿ-ಎಲೈ, ಪಾರ್ವತಿಯೇ ! ಇವಳು ನಿನ್ನ ಪ್ಪಣೆಯನ್ನು