110 KANARESE SELECTIONS-PART II ಮದುವೆ ಮಾಡಿಕೊಂಡು ಅವಳೊಡನೆ ಕೂಡಿ ಸಕಲ ಭೋಗಗಳನ್ನೂ ಅನುಭವಿಸುತ್ತಾ ಬಬ್ಬ ಮಗಳನ್ನು ಪಡೆದು ಮೊದಲು ತನ್ನ ಹೆಂಡತಿಯನ್ನು ಬಿಟ್ಟಂಥ ಅಪರಾಧವು ಪರಿಹಾರವಾಗಬೇಕೆಂದು ಆ ಮಗಳನ್ನು ಪೂತವತಿ ಎಂಬ ಹೆಸರಿಂದ ಕರೆಯುತ್ತಾ ಸುಖವಾಗಿ ಇದ್ದನು ಆ ಮೇಲೆ ಧನದತ್ತನು ಇವನನ್ನು ಹುಡುವುದಕ್ಕಾಗಿ ಬೇಹಿ ನವರನ್ನು ಕಳುಹಿಸಿ ಅವರ ಮುಖದಿಂದ ತನ್ನ ಅಳಿಯನು ಮಧುರಾ ಪಟ್ಟಣದಲ್ಲಿ ಇದ್ದಾನೆಂದು ತಿಳಿದು ತನ್ನ ಮಗಳನ್ನು ಅಳಿಯನ ಬಳಿಗೆ ಕಳುಹಿಸುವುದಕ್ಕಾಗಿ ಪ್ರಯಾಣವನ್ನು ಸಿದ್ದ ಮಾಡಲು ಆ ಪೂತವತಿಯು ಧನದತ್ತನ ಮಾತನ್ನು ಕೇಳಿ ಬೇಕಾದ ಹಣವನ್ನೂ ಒಡವೆಗಳನ್ನೂ ವಸ್ತ್ರಗಳನ್ನೂ ತೆಗೆದುಕೊಂಡು ಪಲ್ಲಕ್ಕಿಯನ್ನು ಏರಿ ಆಪ್ತರಾದ ನೆಂಟರನ್ನು ತನ್ನ ಸಂಗಡ ಕರೆದುಕೊಂಡು ಪರಮದನ ಬಳಿಗೆ ಹೋಗಲು ಆ ಪರಮದತ್ತನು ತನ್ನ ಬಳಿಗೆ ಬಂದ ಪೂತವತಿಯನ್ನು ನೋಡಿ ಎದು ರಾಗಿ ಹೋಗಿ ತನ್ನ ಹೆಂಡತಿ ಮಗಳು ಸಹಿತವಾಗಿ ಅವಳಿಗೆ ನಮಸ್ಕಾರವನ್ನು ಮಾಡಿ ಹೇಳಿದುದೇನಂದರೆ-ಕೇಳು ಪೂತವತಿಯೇ ನೀನು ಪಾರ್ವತೀದೇವಿಗೆ ಸಮಾನಳಾಗಿ ಇರುವುದರಿಂದ ನಿನ್ನನ್ನು ತ್ಯಾಗಮಾಡಿ ಇಲ್ಲಿಗೆ ಬಂದೆನು ನಿನ್ನನ್ನು ಬಿಟ್ಟಂಧ ಅಪ ರಾಧವನ್ನು ಪರಿಹರಿಸಿಕೊಳ್ಳುವುದಕ್ಕೋಸ್ಕರ ನನ್ನ ಮಗಳನ್ನು ನಿನ್ನ ಹೆಸರಿನಿಂದ ಕರೆ ದಿದ್ದೇನೆ. ನಾನು ನಿನ್ನನ್ನು ದೇವತೆ ಎಂದು ಎಣಿಸಿ ನಿನ್ನ ಶರಣನ್ನು ಹೊಂದುತ್ತೇನೆ. ನೀನು ಇಲ್ಲಿಗೆ ಬಂದುದರಿಂದ ನಾನು ಇನ್ನೊಂದು ತಾವಿಗೆ ಹೋಗುತ್ತೇನೆ ಎಂದು ಹೇಳಿದನು. ಪೂತವತಿಯು ಗಂಡನ ಮಾತನ್ನು ಕೇಳಿಸ್ವಾಮಿ ಮಹಾ ನುಭಾವರುಗಳಿರಾ ! ಇಷ್ಟು ಪರ್ಯ೦ತರವೂ ನಿಮಗೋಸ್ಕರ ಈ ಶರೀರವನ್ನು ಕಾಪಾಡಿಕೊಂಡಿದ್ದೆನು. ಇನ್ನು ಮೇಲೆ ನನ್ನನ್ನು ನೀವು ಬಿಟ್ಟರೆ ಈ ಶರೀರವನ್ನು ಬಿಟ್ಟು 'ಶಿವಲೋಕಕ್ಕೆ ಹೋಗುತ್ತೇನೆ ಎಂದು ನುಡಿದು ಅಲ್ಲಿರುವಂಥ ಬ್ರಾಹ್ಮಣರನ್ನು ಕರೆದು ತಾನು ತಂದ ಹಣವೆಲ್ಲವನ್ನೂ ಅವರಿಗೆ ದಾನವಾಗಿ ಕೊಟ್ಟು ಅವರ ಅಪ್ಪಣೆಯಿಂದ ಪರಮೇಶ್ವರಸ್ವಾಮಿಯವರನ್ನು ಧ್ಯಾನಿಸಲು ಪರಮೇಶ್ವರಸ್ವಾಮಿ ಯವರು ವೃಷಭಾರೂಢರಾಗಿ ಪಾರ್ವತಿಯೊಡನೆ ಕೂಡಿ ಪ್ರತ್ಯಕ್ಷರಾದರು. ಪೂತ ವತಿಯು ಪ್ರಸನ್ನರಾದಂಧ ಪರಮೇಶ್ವರಸ್ವಾಮಿಯವರಿಗೆ ಪ್ರದಕ್ಷಿಣನಮಸ್ಕಾರ ಗಳನ್ನು ಮಾಡಿ ಸ್ತುತಿಸಲಾಗಿ ಪರಮೇಶ್ವರಸ್ವಾಮಿಯವರು ಪೂತವತಿಯು ಮಾಡಿದ ಸ್ಫೂತ್ರದಿಂದ ಸಂತೋಷಪಟ್ಟು ಅವಳನ್ನು ಕುರಿತು-ಎಲೆ, ಪೂತವ ತಿಯೇ ! ನಿನಗೆ ಬೇಕಾದ ವರವನ್ನು ಬೇಡಿಕೊ ಎನಲು ಅವಳು-ಸ್ವಾಮಿಾ ಪರಮೇಶ್ವರಸ್ವಾಮಿಯೇ ! ನಿಮ್ಮ ಆನಂದನಾಟ್ಯವನ್ನು ನೋಡುವುದಕ್ಕಾಗಿ ಕೈಲಾ ಸಕ್ಕೆ ಬರಬೇಕು ಎಂದು ಬೇಡಿಕೊಳ್ಳಲು ಪರಮೇಶ್ವರಸ್ವಾಮಿಯವರು--ಎಲೈ, ಪೂತವತಿಯೇ ! ವಟಾರಣ್ಯದಲ್ಲಿ ನಾಟ್ಯವನ್ನು ತೋರಿಸುತ್ತೇನೆ, ಅಲ್ಲಿಗೆ ಬಾ ಎಂದು ನುಡಿದರು. ಪೂತವತಿಯು ಪರಮೇಶ್ವರಸ್ವಾಮಿಯವರನ್ನು ಕುರಿತು ಸ್ವಾಮಿಾ, ಪರಮೇಶ್ವರ ಸ್ವಾಮಿಯವರೇ ! ನಾನು ಮುದುಕಿಯಾದುದರಿಂದ ನಡೆಯಲಾರೆನು ಎಂದು ಆತನ ಪಾದಗಳನ್ನು ಹಿಡಿದು ಕೊಳ್ಳಲು ಪರಮೇಶ್ವರಸ್ವಾಮಿಯವರು ವಿಶ್ಲೇ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೨
ಗೋಚರ