ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೨ನೆಯ ಭಾಗ 1092 ಊಟವನ್ನು ಮಾಡುವುದಕ್ಕೆ ಕುಳಿತುಕೊಳ್ಳಲು ಪೂತವತಿಯು ಗಂಡನಿಗೆ ಅನ್ನ ವನ್ನೂ ಕಜ್ರಾಯಗಳನ್ನೂ ಹಾಲು ತುಪ್ಪ ಮೊಸರುಗಳನ್ನೂ ಬಡಿಸಿದಳು. ಪರಮದನು ಅದೆಲ್ಲವನ್ನೂ ಊಟ ಮಾಡಿ ಹೆಂಡತಿಯನ್ನು ಕರೆದು ಮಾವಿನ ಹಣ್ಣನ್ನು ತಂದು ಬಡಿಸೆಂದು ನುಡಿಯಲು ಪೂತವತಿಯು ಒಂದು ಮಾವಿನ ಹಣ್ಣನ್ನು ತಂದು ಬಡಿಸಿ ದಳು ಪರಮದತ್ತನು ಅದನ್ನು ಮೆದ್ದು ಇನ್ನೊಂದನ್ನೂ ತಂದು ಬಡಿಸೆಂದು ನುಡಿ ಯಲು ಪೂತವತಿಯು ಪರಮದತ್ತನ ಮಾತನ್ನು ಕೇಳಿ ತಾನು ಮಾಡಿದ ಕಾರ್ಯ ವನ್ನು ಗಂಡನಿಗೆ ತಿಳಿಸಲಾರದೆ ಮೌನದಿಂದ ಅಡಿಗೆಯ ಮನೆಗೆ ಹೋಗಿ ಪರಮೇ ಶ್ವರಸ್ವಾಮಿಯವರನ್ನು ಮನಸ್ಸಿನಲ್ಲಿ ಧ್ಯಾನಮಾಡಿ ಸ್ವಾಮಿ, ಪರಮೇಶ್ವರನೇ ! ಗಂಡನಿಗೆ ಏನು ಉತ್ತರವನ್ನು ಹೇಳಲಿ ? ಸ್ವಾಮಿಾ ! ನನ್ನನ್ನು ರಕ್ಷಿಸು ಎಂದು ಬೇಡಿ ಕೊಳ್ಳಲಾಗಿ ಪರಮೇಶ್ವರಸ್ವಾಮಿಯವರು ಸಂತೋಷಪಟ್ಟು ತನ್ನ ಮಾಯೆಯಿಂದ ಒಂದು ಮಾವಿನ ಹಣ್ಣನ್ನು ಕಲ್ಪಿಸಿ ಅವಳ ಮುಂದೆ ಬೀಳುವ ಹಾಗೆ ಮಾಡಿದನು. ಪೂತವತಿಯು ಆ ಮಾವಿನ ಹಣ್ಣನ್ನು ತೆಗೆದು ಕೊಂಡು ಸಂತೋಷಪಟ್ಟು ಗಂಡನಿಗೆ ಕೊಡಲು ಪರಮ ದತ್ತನು ಆ ಹಣ್ಣನ್ನು ಮೆದ್ದು ಮೊದಲು ಮೆದ್ದ ಹಣ್ಣಿಗಿಂತ ಹೆಚ್ಚಾಗಿ ಸೀಯಾಗಿರುವುದರಿಂದ ಈ ಹಣ್ಣು ಎಲ್ಲಿಂದ ಬಂದಿತು ? ಎಂದು ಕೇಳಿದು ದಕ್ಕೆ ಪೂತವತಿಯು ಗಂಡನ ಮಾತನ್ನು ಕೇಳಿ ಆತನನ್ನು ಕುರಿತು ಶಿವಪ್ರಸಾದ ದಿಂದ ಬಂದಿತು ಎಂದು ಹೇಳಲು ಪರಮದತ್ತನು ಹೆಂಡತಿಯನ್ನು ನೋಡಿ-ಎಲೈ, ಪೂತವತಿಯೇ ! ನಿನಗೆ ಪರಮೇಶ್ವರಸ್ವಾಮಿಯವರು ಹಣ್ಣನ್ನು ಕೊಟ್ಟುದು ನಿಜವಾ ದರೆ ಇನ್ನೊಂದು ಹಣ್ಣನ್ನು ತೆಗೆದುಕೊಂಡು ಬಾ ಎಂದು ಹೇಳಿದನು, ಪೂತವತಿಯು ಒಳಗೆ ಹೋಗಿ ಪರಮೇಶ್ವರಸ್ವಾಮಿಯವರನ್ನು ಧ್ಯಾನ ಮಾಡಲು ಪರಮೇಶ್ವರಸ್ಕಾ ಮಿಯವರು ಪೂತವತಿಗೆ ಮತ್ತೊಂದು ಹಣ್ಣನ್ನು ಕೊಟ್ಟನು. ಪೂತವತಿಯು ಆ ಹಣ್ಣನ್ನು ತೆಗೆದು ಕೊಂಡು ಸಂತೋಷದಿಂದ ಗಂಡನಿಗೆ ಕೊಡಲು ಪರಮದತ್ತನು ಹಣ್ಣನ್ನು ನೋಡಿ ಅಧಿಕವಾದ ಭಯದಿಂದ ಈ ಪೂತವತಿಯು ಪರಮೇಶ್ವರ ಸ್ವಾಮಿ ಯವರನ್ನು ತನ್ನ ಅಧೀನವನ್ನು ಮಾಡಿಕೊಂಡಳು. ಇವಳು ಪಾರ್ವತೀದೇವಿಯೇ ಸಂ. ಅಲ್ಲದಿದ್ದರೆ ಪರಮೇಶ್ವರ ಸ್ವಾಮಿಯವರು ಪೂತವತಿಗೆ ಹಣ್ಣನ್ನು ಕೊಡುವರೇ ? ಆದು ದರಿಂದ ನಾನು ಇವಳನ್ನು ಮುಟ್ಟುವುದು ಯುಕ್ತವಲ್ಲವು. ಹಾಗೆ ಇವಳನ್ನು ಬಿಟ್ಟು ಬಿಟ್ಟರೆ ಅಪರಾಧ ಬರುತ್ತದೆ. ಬಿಡದೇ ಇದ್ದರೆ ಶಿವದ್ರೋಹ ಬರುತ್ತದೆ. ಹೀಗಿರುವಲ್ಲಿ ಏನು ಮಾಡಲಿ ? ಎಂದು ಮನಸ್ಸಿನಲ್ಲಿ ಯೋಚಿಸುತ್ತಾ ಒಂದು ಉಪಾಯವನ್ನು ನೆನೆದು ವ್ಯಾಪಾರವನ್ನು ಮಾಡುವುದಕ್ಕೋಸ್ಕರ ಹೋಗುತ್ತೇನೆ ಎಂದು ಕಪಟದಿಂದ ಹೇಳಿ ಮತ್ತೊಂದು ದೇಶಕ್ಕೆ ಹೋಗಿ ವಸ್ತ್ರಗಳನ್ನೂ ಹಸುಗಳನ್ನೂ ಬೇಕಾದ ವಸ್ತು ಗಳೆಲ್ಲವನ್ನೂ ಹಡಗುಗಳಲ್ಲಿ ತುಂಬಿಕೊಂಡು ಸಮುದ್ರವನ್ನು ದಾಟಿ ದ್ವೀಪಾಂತರ ದಲ್ಲಿ ವ್ಯಾಪಾರವನ್ನು ಮಾಡಿ ಹೆಚ್ಚಾಗಿ ಹಣವನ್ನು ಸಂಪಾದಿಸಿಕೊಂಡು ಅಲ್ಲಿಂದ ಹೊರಟು ಮಧುರಾ ಪಟ್ಟಣವನ್ನು ಸೇರಿ ಅಲ್ಲಿನ ಅರಸಿನ ಅಪ್ಪಣೆಯಿಂದ ಆ ಊರಲ್ಲಿ ಮನೆಯನ್ನು ಕಟ್ಟಿ ಕೊಂಡು ತಮ್ಮ ಕುಲದಲ್ಲಿ ಹುಟ್ಟಿದಂಥ ಮತ್ತೊಂದು ಹೆಣ್ಣನ್ನು