ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

108 KANARESE SELECTIONS-PART II ಗುಣಸಂಪನ್ನ ನಾದ, ವೈಶ್ಯ ಪುತ್ರನನ್ನು ಕರತರಿಸಿ' ಆತನಿಗೆ ತನ್ನ ಮಗಳನ್ನು ಕೊಟ್ಟು ಸಂತೋಷದಿಂದ ಮದುವೆಯನ್ನು ಮಾಡಿ ತನ್ನ ಮನೆಯ ಸಮೀಪದಲ್ಲಿ ಒಂದು ಮನೆಯನ್ನು ಕಟ್ಟಿಸಿ ಅಲ್ಲಿ ಸರ್ವೋಪಕರಣಗಳನ್ನೂ ಸಿದ್ಧ ಮಾಡಿ ಪರಮದನ ತಾಯಿತಂದೆಗಳ ಅಪ್ಪಣೆಯಿಂದ ಅಳಿಯನನ್ನೂ ಮಗಳನ್ನೂ ಅದರಲ್ಲಿ ಸೌಖ್ಯದಿಂದ ಇರಿಸಿ ಕಾಪಾಡುತ್ತಾ ಬರಲು ಆ ಪರಮ ದತ್ಯನು ಧನದತ್ತನ ಮಗಳೊಡನೆ ಕೂಡಿ ಸಕಲಭೋಗಗಳನ್ನೂ ಅನುಭವಿಸುತ್ತಾ ಪರಮೇಶ್ವರಸ್ವಾಮಿಯವರಲ್ಲಿ ಭಕ್ತಿ ಯುಳ್ಳವನಾಗಿ ಬ್ರಹ್ಮ ಜ್ಞಾನಿಗಳಾದ ಬ್ರಾಹ್ಮಣರಿಗೆ ಸಕಲದಾನಗಳನ್ನು ಕೊಡುತ್ತಾ ಅವರಿಂದ ಆಶೀರ್ವಾದಗಳನ್ನು ಹೊಂದುತ್ತಾ ತನ್ನ ಮನೆಗೆ ಬಯಸಿಬಂದಂಥ ಶಿವ ಭಕ್ತರಿಗೆ ಅನ್ನ ವನ್ನು ಕೊಡುತ್ತಾ ನಿತ್ಯವೂ ಬಂದಂಧವರಿಗೆ ಹಾಲು ತುಪ್ಪ ಮೊಸರು ಮೇಲೋಗರಗಳನ್ನೂ ಐದು ಬಗೆ ಕಜ್ಜಾಯಗಳನ್ನೂ ಕೊಡುತ್ತಾ ಬಂದವರಿಗೆ ಇಲ್ಲ ವೆಂದು ನುಡಿಯದೆ ಅನ್ನವನ್ನು ಕೊಡೆಂದು ತನ್ನ ಹೆಂಡತಿಗೆ ಕಟ್ಟು ಮಾಡಲು ಬಾಲ್ಯ ಮೊದಲ್ಗೊಂಡು ಶಿವಭಕ್ತಿಯುಳ್ಳವಳಾಗಿದ್ದ ಅವಳು ಹಾಗೆಯೇ ಆಗಲೆಂದು ಒಪ್ಪಿ ಬಂದಂಧ ಶಿವಭಕ್ತರಿಗೆ ಅನ್ನ ವನ್ನು ಕೊಡುತ್ತಾ ಶರೀರವನ್ನು ಧರಿಸಿ ಬಂದಿ ರುವ ಶಿವಭಕ್ತಿಯೋ ಎಂಬ ಹಾಗೆ ಅಧಿಕವಾಗಿ ಪರಮೇಶ್ವರಸ್ವಾಮಿಯವರಲ್ಲಿ ಭಕ್ತಿಯನ್ನು ಮಾಡುತ್ತಾ ಒಂದು ದಿವಸವನ್ನೂ ವ್ಯರ್ಥಮಾಡದೆ ನಿರಂತರವೂ ಧರ್ಮ ಕಾರ್ಯವನ್ನು ಮಾಡುತ್ತಿದ್ದಳು. ಒಂದು ದಿವಸದಲ್ಲಿ ಒಬ್ಬ ಶಿವಭಕ್ತನು ಒಂದೇ ತೊಟ್ಟಿನಲ್ಲಿರುವ ಎರಡು ಮಾವಿನ ಹಣ್ಣುಗಳನ್ನು ತಂದು ಪರಮದತ್ತನಿಗೆ ಕೊಟ್ಟನು. ಪರಮ ದತ್ತನು ಆ ಎರಡು ಹಣ್ಣು ಗಳನ್ನೂ ಮನೆಗೆ ತಂದು ಹೆಂಡತಿಯನ್ನು ಕರೆದು ಅವಳ ಕೈಯಿಗೆ ಕೊಡಲು ಆ ಪೂತ ವತಿಯು ಆ ಹಣ್ಣುಗಳನ್ನು ತೆಗೆದು ಕೊಂಡು ಎಚ್ಚರದಿಂದ ಬಚ್ಚಿಟ್ಟು ಶಿವಭಕ್ತರ ಪೂಜೆಯನ್ನು ಮಾಡುತ್ತಿದ್ದಳು. ಮಾರನೆಯ ದಿವಸ ಪ್ರಾತಃಕಾಲದಲ್ಲಿ ಪರಮೇಶ್ವರ ಸ್ವಾಮಿಯವರು ಪೂತವತಿಯ ಭಕ್ತಿಯನ್ನು ಲೋಕದಲ್ಲಿ ಪ್ರಕಟಮಾಡುವುದಕ್ಕೋಸ್ಕರ ಶಿವಭಕ್ತರ ವೇಷವನ್ನು ಧರಿಸಿ ಅಲ್ಲಿಗೆ ಬಂದು ಅನ್ನ ವನ್ನು ಕೇಳಲು ಪೂತವತಿಯು ಶೀಘ್ರವಾಗಿ ಎದ್ದು ಎದುರಾಗಿ ಹೋಗಿ ಕರೆದುಕೊಂಡು ಬಂದು ಪಾದಗಳಿಗೆ ಉದ ಕವನ್ನು ಕೊಟ್ಟು ಮಣೆಯ ಮೇಲೆ ಕುಳ್ಳಿರಿಸಿ ಆತನನ್ನು ಕುರಿತು-ಸ್ವಾಮಿ, ಮಹಾನುಭಾವರುಗಳಿರಾ ! ಇ – ಮೇಲೆ ಅಡಿಗೆಯನ್ನು ಮಾಡಬೇಕು, ಆದುದರಿಂದ ಈಗ ಸ್ವಲ್ಪ ಫಲಾಹಾರವನ್ನು ಮಾಡಿಕೊಳ್ಳಬಹುದು ಎಂದು ನುಡಿದು ಒಂದು ಮಾವಿನ ಹಣ್ಣನ್ನು ತಂದು ಕೊಡಲು ಆ ಪರಮೇಶ್ವರಸ್ವಾಮಿಯವರು ಮಾವಿನ ಹಣ್ಣನ್ನು ಮೆಚ್ಚು ಹಾಲು ಕುಡಿದು ಸಂತೋಷಪಟ್ಟು ಹಾಗೆಯೇ ಮಾಯವಾಗಿ ಹೋದರು, ಪೂತವತಿಯು ಶಿವಭಕ್ತರು ಮಾಯವಾದುದನ್ನು ನೋಡಿ ಆಶ್ಚರ್ಯ ಪಟ್ಟು ತನ್ನ ಮನಸ್ಸಿನಲ್ಲಿಸಿದ್ದ ಪುರುಷರ ಮಹಿಮೆಯನ್ನು ತಿಳಿಯಕೂಡದು ಎಂದು ಎಣಿಸಿ ಸಂತೋಷದಿಂದ ಅನ್ನ ದಾನವನ್ನು ಮಾಡುತ್ತಿದ್ದಳು. ಪರಮದತ್ತನು ಶಿವಭಕ್ತರೆ ಲ್ಲರೂ ಊಟವನ್ನು ಮಾಡಿದ ಬಳಿಕ ಅವರನ್ನು ಕಳುಹಿಸಿ ಸಾಯಂಕಾಲದಲ್ಲಿ ತಾನು