ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೨ನೆಯ ಭಾಗ 107 ಭೂಲೋಕದಲ್ಲಿ ಹೆಣ್ಣಾಗಿ ಹುಟ್ಟಿ ಸಕಲಭೋಗಗಳನ್ನೂ ಅನುಭವಿಸಬೇಕೆಂದು ಯೋಚಿಸಿ ಪಾರ್ವತೀದೇವಿಯ ಅಪ್ಪಣೆಯಿಂದ ಭೂಲೋಕದಲ್ಲಿ ಸ್ತ್ರೀರೂಪವನ್ನು ಧರಿಸಿ ನನ್ನ ಆಲಯದಲ್ಲಿ ಇದ್ದಾಳೆ. ಅವಳನ್ನು ನೀನು ಕರೆದುಕೊಂಡು ಹೋಗು. ಆ ಹೆಣ್ಣು ನಿನ್ನ ಕುಲವೆಲ್ಲವನ್ನೂ ಪವಿತ್ರಮಾಡುತ್ತಾಳೆ. ನಿನ್ನ ವಂಶವನ್ನು ಪವಿತ್ರ ಮಾಡುವವಳಾದುದರಿಂದ ಈ ಹೆಣ್ಣು ಪೂತವತಿ ಎಂಬ ಹೆಸರಿನಿಂದ ಪ್ರಸಿದ್ಧಳಾಗು ತಾಳೆ ಎಂದು ನುಡಿದು ಮಾಯವಾಗಿ ಹೋದನು. ಧನದತ್ತನು ಮಾರನೆಯ ದಿವ ಸದಲ್ಲಿ ಎದ್ದು ಸ್ನಾನವನ್ನು ಮಾಡಿ ಮಡಿಯನ್ನು ಉಟ್ಟು, ವಿಭೂತಿರುದ್ರಾಕ್ಷರ ಳನ್ನು ಧರಿಸಿ ಸಕಲನಿಯಮಗಳನ್ನೂ ತೀರಿಸಿಕೊಂಡು ತನ್ನ ನೆಂಟರನ್ನು ಕರೆದು ಸ್ವಪ್ನ ವೃತ್ತಾಂತವನ್ನು ತಿಳಿಸಲು ಆ ನೆಂಟರೆಲ್ಲರೂ ಧನದತ್ತನನ್ನು ನೋಡಿ - ಎಲೈ, ಧನದತ್ತ ನೇ ! ನೀನು ಪೂರ್ವಜನ್ಮದಲ್ಲಿ ಹೆಣ್ಣಾಗಿ ಪುಣ್ಯವನ್ನು ಮಾಡಿದೆ. ನೀನು ಕೃತಾರ್ಧನು, ನಿನ್ನನ್ನು ನೋಡಿದುದರಿಂದ ನಾವೆಲ್ಲರೂ ಪುಣ್ಯವಂತರಾದೆವು. ನೀನೇ ಧನ್ಯನು, ಅಲ್ಲದಿದ್ದರೆ ಈ ಪ್ರಕಾರ ಪರಮೇಶ್ವರ ಸ್ವಾಮಿಯವರು ನಿನಗೆ ಮಗಳನ್ನು ಕೊಡುವರೇ ? ದೇವತಾರೂಪಿಣಿಯಾಗಿರುವಂಧ ಮಗಳನ್ನು ಪರಮೇಶ್ವರಸ್ವಾಮಿ ಯವರು ನಿನಗೆ ಕೊಟ್ಟು ದರಿಂದ ನೀನು ಪುಣ್ಯವಂತನೇ ಸರಿ. ಆ ಮಗಳನ್ನು ನೀನು ಕರೆದುಕೊಂಡು ಬಾ ಎಂದು ನುಡಿದು ಧನದತ್ತನಿಗೆ ಬಹುಮಾನವನ್ನು ಮಾಡಿ ನೆಂಟ ರೆಲ್ಲರೂ ಸ್ವಸ್ಥಳಗಳಿಗೆ ಹೊರಟು ಹೋದರು. ಆ ಧನದತ್ತನು ಹೆಂಡತಿಯೊಡನೆ ಕೂಡಿ ಸಂತೋಷಪಡುತ್ತಾ ಪರಮೇಶ್ವರಸ್ವಾಮಿಯವರನ್ನು ಮನಸ್ಸಿನಲ್ಲಿ ಧ್ಯಾನ ಮಾಡಿ ಶಿವಾಲಯವನ್ನು ಹೊಕ್ಕು ಪ್ರದಕ್ಷಿಣನಮಸ್ಕಾರವನ್ನು ಮಾಡಿ ಸನ್ನಿಧಿ ಯಲಿ ನಿಂತು ಕೈಮುಗಿದು ಪರಮೇಶ ರಸಾಮಿಯವರ° ಅನುಗ್ರಹದಿಂದ ಒಂದು ವರುಷದ ಹೆಣ್ಣು ಮಗುವು ಆತನ ಮುಂದೆಸೆಯಲ್ಲಿ ಪ್ರಸನ್ನ ವಾಗಲು ಧನದತ್ತನು ಶಿವಪ್ರಸಾದದಿಂದ ಪ್ರಸನ್ನ ಳಾದಂಧ ಮಗಳನ್ನು ನೋಡಿ ಸಂತೋಷಪಟ್ಟು ಮನೆಗೆ ಕರೆದುಕೊಂಡು ಬಂದು ಅವಳ ರೂಪವನ್ನೂ ಸೌಂದರ್ಯವನ್ನೂ ಕಾಂತಿಯನ್ನೂ ನೋಡಿ ಆಶ್ಚರ್ಯಪಡುತ್ತಾ ತನ್ನ ಕುಲವೆಲ್ಲವೂ ಈ ದಿವಸ ಪವಿತ್ರವಾಯಿತು ಎಂದೆ ಣಿಸಿ ಶಿವನ ಅಪ್ಪಣೆಯ ಪ್ರಕಾರ ಆ ಶಿಶುವಿಗೆ ಪೂತವತಿ ಎಂಬ ನಾಮಕರಣವನ್ನು ಮಾಡಿ ಆ ಕಾಲದಲ್ಲಿ ಬ್ರಾಹ್ಮಣರಿಗೆ ಬಹು ಧನವನ್ನು ಕೊಟ್ಟು ನೆಂಟರಿಗೆ ಬಹು ಮಾನಗಳನ್ನು ಮಾಡಿ ಆ ಹೊತ್ತು ಮೊದಲ್ಗೊಂಡು ಪರಮೇಶ್ವರಸ್ವಾಮಿಯವರಿಗೆ ಹೆಚ್ಚಾಗಿ ಸೇವೆಯನ್ನು ಮಾಡುತ್ತಾ ಮಗಳಿಗೆ ನವರತ್ನ ಮಯಗಳಾದ ಒಡವೆಗಳ ನ್ನಿಟ್ಟು ಮೂರು ಲೋಕಗಳ ಮೋಹಿಸುವ ಹಾಗೆ ಮಾಡುತ್ತಾ ಬಹುಮಾನದಿಂದ ಕಾಪಾಡುತ್ತಾ ಮಗಳಿಗೆ ಆಯಸ್ಸು ಅಭಿವೃದ್ದಿ ಯಾಗುವುದಕ್ಕೋಸ್ಕರ ಶಿವಭಕ್ತ ರಾದ ಬ್ರಾಹ್ಮಣರ ಕೈಯಿಂದ ವಿಭೂತಿಯನ್ನು ಕೊಡಿಸುತ್ತಾ ಈ ಪ್ರಕಾರ ಕಾಪಾ ಡುತ್ತಾ ಇದ್ದನು, ಆ ಮೇಲೆ ಪುತ್ರಿಯು ವಯಸ್ಕಳಾದುದನ್ನು ಕಂಡು ಇವಳಿಗೆ ವಿವಾಹವನ್ನು ಮಾಡಬೇಕೆಂದು ಯೋಚಿಸಿ ಒಂದು ದಿವಸದಲ್ಲಿ ಪತ್ರಿಕೆಯನ್ನು ಬರೆದು ಕಳುಹಿಸಿ ನಾಗಪಟ್ಟಣದಲ್ಲಿರುವಂಥ ಪರಮ ದತ್ತನೆಂಬ ಹೆಸರುಳ್ಳ ಸಕಲ