106 KANARESE SELECTIONS-PART II ದರು, ಆ ಬಳಿಕ ಧರ್ಮಕೇತನನು ಪರಮೇಶ್ವರಸ್ವಾಮಿಯವರ ಅನುಗ್ರಹದಿಂದ ಬಂದ ದಿವ್ಯ ವಿಮಾನವನ್ನು ಏರಿ ಕೈಲಾಸಕ್ಕೆ ಹೋದನು 4, THE MERIT OF GIVNG FOOD. ೪, ಅನ್ನದಾನದ ಪುಣ್ಯ. ಮಧ್ಯಾಹ್ನ ಕಾಲದಲ್ಲಿ ತನ್ನ ಮನೆಗೆ ಬಂದು ಅನ್ನವನ್ನು ಕೇಳಿದಂಥ ಶಿವಭಕ್ತ ರಿಗೆ ಅನ್ನ ವನ್ನಾ ದರೂ ಉದಕವನ್ನಾದರೂ ಹಣ್ಣುಗಳನ್ನಾದರೂ ಕೊಟ್ಟು ಸಂತೋಷ ಪಡಿಸುವಂಥವರು ಪರಮೇಶ್ವರಸ್ವಾಮಿಯ ಅನುಗ್ರಹದಿಂದ ಮುಕ್ತರಾಗುವರು. ಈ ಅರ್ಥದಲ್ಲಿ ಒಂದು ಕಥೆಯು ಇರುವುದು, ಹೇಗಂದರೆ-- - ಪೂರ್ವದಲ್ಲಿ ಕಾವೇರೀತೀರದಲ್ಲಿ ಶಾರ್ಜರಿವನವೆಂಬ ಒಂದು ಪಟ್ಟಣವು ತಮ್ಮ ತಮ್ಮ ಧರ್ಮಗಳನ್ನು ಅತಿಕ್ರಮಿಸದೆ ವರ್ತಿಸುವ ಬಹುಮಂದಿ ಬ್ರಾಹ್ಮಣರಿಂದಲೂ ಕ್ಷತ್ರಿಯರಿಂದಲೂ ವೈಶ್ಯರಿಂದಲೂ ಶೂದ್ರರಿಂದಲೂ ತುಂಬಿ ಇರುವುದು, ಆ ಪಟ್ಟಣ ದಲ್ಲಿ ಧನವಂತರಾದ ವರ್ತಕರು ಕುಬೇರನಿಗೆ ಸಮಾನರಾಗಿ ಎಲ್ಲಿ ನೋಡಿದರೂ ನವ ರತ್ನಗಳನ್ನು ಬೀದಿಗಳಲ್ಲಿ ರಾಶಿಯಾಗಿ ಹಾಕಿಕೊಂಡು ವ್ಯಾಪಾರಗಳನ್ನು ಮಾಡುತ್ತಿ ರುವರು. ಇ೦ಧ ಪಟ್ಟಣದಲ್ಲಿ ಪ್ರಸಿದ್ಧ'ನಾದ ಧನದತ್ತನೆಂಬ ಒಬ್ಬ ವೈಶ್ಯನು ಶೀಲವತಿ ಎಂಬ ಹೆಂಡತಿಯೊಡನೆ ಕೂಡಿ ಸಕಲ ಭೋಗಗಳನ್ನೂ ಅನುಭವಿಸುತ್ತಾ ಅಲ್ಲಿರುವ ವೈಶ್ಯರೊಳಗೆ ಅಗ್ರಗಣ್ಯನಾಗಿ ತನ್ನ ವ್ಯಾಪಾರಗಳಿಂದ ಹೆಚ್ಚಾಗಿ ಹಣವನ್ನು ಸಂಪಾ ದಿಸಿ ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನಾಗಿ ನಿತ್ಯವೂ ಬ್ರಾಹ್ಮಣರನ್ನು ಪೂಜಿಸುತ್ತಾ ಸಕಲ ದಾನಗಳನ್ನು ಮಾಡುತ್ತಾ ಬ್ರಾಹ್ಮಣರಿಗೆ ಬೇಕಾದಷ್ಟು ಹಣವನ್ನು ಧರ್ಮಾ ರ್ಥವಾಗಿ ಕೊಟ್ಟು ಅವರಿಗೆ ವರ್ಷಾಶನಗಳನ್ನು ಕೊಡುತ್ತಾ ವೇದವನ್ನು ಓದು ವಂಧ ಬ್ರಾಹ್ಮಣರಿಗೆ ಅನ್ನ ವಸ್ತ್ರಗಳನ್ನು ನಡಿಸುತ್ತಾ ಪರಮೇಶ್ವರಸ್ವಾಮಿಯವರಲ್ಲಿ ಪರಮಭಕ್ತಿ ಯಳ್ಳವನಾಗಿ ನಿತ್ಯವೂ ಶಿವಾರ್ಚನೆಗಳನ್ನು ಮಾಡುತ್ತಾ ವಿಭೂತಿ ರುದ್ರಾಕ್ಷಧಾರಕರಾಗಿ ಬಂದಂಥ ಶಿವಭಕ್ತರನ್ನು ಪೂಜಿಸುತ್ತಾ ಮಧ್ಯಾಹ್ನ ದಲ್ಲಿ ಬಂದು ಅನ್ನ ವನ್ನು ಬೇಡಿದಂಧವರಿಗೆ ಕೊಡುತ್ತಾ ಈ ಪ್ರಕಾರದಿಂದ ಬಹುಕಾಲ ವಿದ್ದು ತನಗೆ ಮಕ್ಕಳಿಲ್ಲದೇ ಇರುವುದರಿಂದ ಒಂದು ದಿವಸ ತನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದನುನನಗೆ ಮಕ್ಕಳಿಲ್ಲದೇ ಇದ್ದರೆ ಕುಲವೆಲ್ಲವೂ ಅಪವಿತ್ರವಾಗಿರುವುದು ಎಂದು ತಿಳಿದು ಹತ್ತು ವರುಷ ಪರ್ಯ೦ತರವೂ ಸಕಲವಾದ ವ್ರತಗಳನ್ನು ಮಾಡಿ ಪರಮೇಶ್ವರಸ್ವಾಮಿಯವರನ್ನು ಸಂತೋಷಪಡಿಸಲು ಪರಮೇಶ್ವರಸ್ವಾಮಿಯವರು ಸಂತೋಷಪಟ್ಟು ಒಂದು ದಿವಸ ಧನದತ್ತನ ಸ್ವಪ್ನದಲ್ಲಿ ಬಂದು ಆತನನ್ನು ಕುರಿತುಎಲೈ, ಧನದತ್ತ ನೇ ! ನನ್ನ ಮಾತನ್ನು ಕೇಳು, ನಿನಗೆ ಒಬ್ಬ ಮಗಳನ್ನು ಕೊಡುತ್ತೇನೆ. ಪಾರ್ವತೀದೇವಿಯ ಸವಿಾಪದಲಿ ಪರಿಚಾರಿಕೆಯಾಗಿದ್ದಂಥ ಶಾರಿಕೆ ಎಂಬ ದಾಸಿಯು
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೮
ಗೋಚರ