ಕಥಾಸಂಗ್ರಹ೨ನೆಯ ಭಾಗ 105 ಸ್ವಾಮಿಯವರ ಶಿರಸ್ಸಿನಲ್ಲಿ ಆ ಪುಷ್ಪಗಳನ್ನು ನೋಡಿ ಆ ಬ್ರಾಹ್ಮಣನೇ ಪರಮೇಶ್ವರ ಸ್ವಾಮಿಯವರು ಎಂದು ಎಣಿಸಿ ಚಿನ್ನದಿಂದ ಸಾವಿರ ತಾವರೆಯ ಹೂವುಗಳನ್ನು ಮಾಡಿಸಿ ಆ ಬ್ರಾಹ್ಮಣನನ್ನು ಕರಿಸಿ ಆತನಿಗೆ ಕೊಟ್ಟು ಅದರ ಮೇಲೆ ಒಂದು ಗ್ರಾಮವನ್ನೂ ಒಂದು ಮನೆಯನ್ನೂ ಕೆಲವು ಗೋವುಗಳನ್ನೂ ಕೊಟ್ಟು ಆತನಿಗೆ ಶುಕ್ರೂಷೆಯನ್ನು ಮಾಡಿ ಕಳುಹಿಸಿ ಪರಮೇಶ್ವರಸ್ವಾಮಿಯವರಿಗೆ ಅಭಿಷೇಕಾರ್ಧವಾಗಿ ಒಂದು ಚಿನ್ನದ ಕಲಶವನ್ನೂ ಆ ಮದದಾನೆಯನ್ನೂ ಸಮರ್ಪಿಸಿ ಭಕ್ತಿಯುತವಾಗಿರುತ್ತಿರಲು ಅಲ್ಲಿ ಇರುವ ಜನರೆಲ್ಲರೂ ಈ ಭೂಪಾಲಕನು ನಂದೀಶ್ವರನಿಗೆ ಸಮಾನನೆಂದು ಎಣಿಸಿ ಪೂಜಿ ಸುತ್ತಿದ್ದರು. ಆ ಅರಸು ಧರ್ಮಾತ್ಮಕನೂ ಮಹಾ ವೀರನೂ ದಯಾವಂತನೂ ಆಗಿದ್ದು ಧರ್ಮದಿಂದ ರಾಜ್ಯವನ್ನಾಳುತ್ತಾ ಬಹು ಕಾಲವಿದ್ದು ಒಂದು ದಿವಸ ತನ್ನ ಮಂತ್ರಿ ಯನ್ನು ಕರೆದು ಶತ್ರುಗಳನ್ನು ಜಯಿಸಿಕೊಂಡು ಬಾರೆಂದು ಹೇಳಿಕಳುಹಿಸಲು ಆ ಮಂತ್ರಿಯು ಸೇನೆಯೊಡನೆ ಕೂಡಿಹೋಗಿ ತನ್ನ ಪರಾಕ್ರಮದಿಂದ ಸಕಲ ಶತ್ರುಗಳನ್ನೂ ಜಯಿಸಿ ಶತ್ರುಭೂಪಾಲಕರ ಶಿರಸ್ಸುಗಳನ್ನು ಬಂಡಿಯ ಮೇಲೆ ಹೇರಿಸಿಕೊಂಡು ಬರು ವಾಗ ಪರಮೇಶ್ವರಸ್ವಾಮಿಯವರು ಅರಸಿನ ಭಕ್ತಿಯನ್ನು ನೋಡುವುದಕ್ಕೋಸ್ಕರ ಆ ತಲೆಗಳೊಳಗೆ ಒಂದರಲ್ಲಿ ಜಡೆಗಳನ್ನು ಕಲ್ಪಿಸಿದರು, ಆ ಬಳಿಕ ಮಂತ್ರಿಯು ಅದನ್ನು ತಿಳಿಯದೆ ತಲೆಗಳೆಲ್ಲವನ್ನು ತೆಗೆದುಕೊಂಡು ಅರಸಿನ ಬಳಿಗೆ ಬರಲು ಅರಸು ಆ ತಲೆ ಗಳನ್ನು ನೋಡುವಾಗ ಜಡೆಗಳೊಡನೆ ಕೂಡಿದ ತಲೆಯನ್ನು ನೋಡಿ ಮಂತ್ರಿಯನ್ನು ಕುರಿತು-ಎಲೈ, ಮಂತ್ರಿಯೇ ! ನೀನು ಇಂಥಾ ಪಾಪವನ್ನು ಮಾಡಬಹುದೇ ? ಶಿವಭಕ್ತನ ತಲೆಯನ್ನು ತೆಗೆದು ಕೊಂಡು ಬಂದಂಧ ನಿನ್ನ ಪಾಪಕ್ಕೆ ಪ್ರಾಯಶ್ಚಿತ್ರವೇ ಇಲ್ಲ, ನೀನು ಶಿವದ್ರೋಹವನ್ನು ಮಾಡಿದಂಥವನು. ಆದಕಾರಣ ನಾನು ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಧಿಕ್ಕರಿಸಿ ಇಂಧ ಶಿವದ್ರೋಹಿಯ ಮುಖ ವನ್ನು ನೋಡಿದ ದೋಷಕ್ಕೆ ನನ್ನ ಶಿರಸ್ಸನ್ನು ತೆಗೆದು ಪರಮೇಶ್ವರಸ್ವಾಮಿಯವರಿಗೆ ಸಮರ್ಪಿಸಿದರೆ ಪ್ರಾಯಶ್ಚಿತ್ತವಾಗುತ್ತದೆ ಎಂದು ನಿರ್ಣಯಿಸಿ ತನ್ನಲ್ಲಿದ್ದ ಹಣವೆ ಲ್ಲವನ್ನೂ ಶಿವಭಕ್ತರಿಗೆ ದಾನ ಮಾಡಿ ರಾಜ್ಯ ಭಾರವನ್ನು ಮಗನಿಗೆ ವಹಿಸಿ ಅಗ್ನಿ ಪ್ರವೇಶದಿಂದ ಪ್ರಾಣತ್ಯಾಗವನ್ನು ಮಾಡಬೇಕೆಂದು ನಿಶ್ಚಯಿಸಿ ಅಗ್ನಿ ಯನ್ನು ಮಾಡಿಸಿ ಆ ಜಡೆಗಳೊಡನೆ ಕೂಡಿದ ತಲೆಯನ್ನು ತನ್ನ ಶಿರಸ್ಸಿನಲ್ಲಿ ಇರಿಸಿಕೊಂಡು ಆ ಅಗ್ನಿ ಹೋತ್ರದ ಸವಿಾಪಕ್ಕೆ ಹೋಗಿ ಮರು ಪ್ರದಕ್ಷಿಣಗಳನ್ನು ಮಾಡಿ ಅಗ್ನಿ ಯಲ್ಲಿ ಬೀಳುವಷ್ಟರೊಳಗೆ ಆ ಜಡೆಗಳೊಡನೆ ಕೂಡಿದ ಶಿರಸ್ಸು ಮಾಯವಾಗಿ ಹೋಗಲು ಅರಸು ಅದನ್ನು ನೋಡಿ ಆಶ್ಚರ್ಯಪಡುತ್ತಿದ್ದನು. ಆಗ ಪರಮೇಶ್ವರಸ್ವಾಮಿ ಯವರು ಆತನ ಭಕ್ತಿಗೆ ಮೆಚ್ಚಿ ವೃಷಭಾರೂಢರಾಗಿ ಆತನ ಎದುರಿಗೆ ಬಂದು ನಿಂತರು, ಅರಸು ಪರಮೇಶ್ವರಸ್ವಾಮಿಯವರನ್ನು ನೋಡಿ ಪ್ರದಕ್ಷಿಣನಮಸ್ಕಾರಗ ಳನ್ನು ಮಾಡಿ ಅಧಿಕವಾದ ಭಕ್ತಿಯಿಂದ ಸ್ತುತಿಸಲು ಪರಮೇಶ್ವರಸ್ವಾಮಿಯವರು ಸಂತೋಷಪಟ್ಟು ಧರ್ಮಕೇತನನಿಗೆ ಮುಕ್ತಿಯನ್ನು ಕೊಟ್ಟು ಕೈಲಾಸಕ್ಕೆ ಚಿಸಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೭
ಗೋಚರ