ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 KANARESE SELECTIONS-PART II ಒಪ್ಪಿಸಿ ಪತ್ನಿ ಯೊಡನೆ ವನಕ್ಕೆ ಹೋಗಿ ತಪಸ್ಸನ್ನು ಮಾಡುತ್ತಾ ಕೆಲವು ದಿವಸವಿದ್ದು ಆ ಬಳಿಕ ಶಿವಲೋಕವನ್ನೈದಿದನು. ಆ ಮೇಲೆ ಧರ್ಮಕೇತನನು ತಾಯಿತಂದೆಗಳಿಗೆ ಪರಲೋಕಕ್ರಿಯೆಗಳನ್ನು ಸಾಂಗವಾಗಿ ಮಾಡಿ ರಾಜನೀತಿಯನ್ನು ಸ್ವಲ್ಪವೂ ಅತಿಕ್ರಮಿಸದೆ ಧರ್ಮದಿಂದ ರಾಜ್ಯ ಪಾಲನೆಯನ್ನು ಮಾಡುತ್ತಾ ಪರಮೇಶ್ವರನೇ ಪರಮತತ್ವವೆಂದು ತಿಳಿದು ಆತನನ್ನು ಭಕ್ತಿಯಿಂದ ಪೂಜಿಸುತ್ತಾ ಅಲ್ಲಿ ಇರುವ ಜನರಿಂದ ತನ್ನ ಜನನದ ವಿವರವನ್ನು ತಿಳಿದು ಪರಮೇಶ್ವರಸ್ವಾಮಿಯವರಲ್ಲಿ ಭಕ್ತಿಯುಳ್ಳವನಾಗಿ ತನ್ನ ತಾಯಿಗೆ ಕುಲದೇವತೆ ಯಾಗಿ ಗೋಸ್ಥಳದಲ್ಲಿ ವಾಸವನ್ನು ಮಾಡಿಕೊಂಡಿರುವಂಧ ಪರಮೇಶ್ವರಸ್ವಾಮಿಯ ವರನ್ನೇ ಪೂಜಿಸುತ್ತಾ ಶಿವಕೈಂಕರ್ಯವನ್ನೇ ಮಾಡುತ್ತಾ ಶಿವಭಕ್ತರನ್ನು ಪಾಲಿಸುತ್ತಾ ಅನೇಕ ಗಜಘಟಗಳನ್ನು ಸಂಪಾದಿಸಿ ಕುದುರೆಗಳನ್ನೂ ರಧಗಳನ್ನೂ ಅತ್ಯಂತವಾಗಿ ಸೇರಿಸಿ ಸಕಲ ಶತ್ರುಗಳನ್ನೂ ಜಯಿಸಿ ಧರ್ಮದಿಂದ ಪ್ರಜಾರಕಣವಂ ಮಾಡುತ್ತಾ ಇರಲು ಅವನ ದೇಶದಲ್ಲಿ ಬ್ರಾಹ್ಮಣರು ವೇದಗಳನ್ನೋದಿ ವೇದಮಾರ್ಗವನ್ನು ಬಿಡದೆ ಆಚರಿಸುತ್ತಿದ್ದರು. ಭಟರೆಲ್ಲ ರೂ ಆಯುಧಗಳನ್ನು ಹಿಡಿದು ಸ್ವಾಮಿ ಕಾರ್ಯವೇ ಮುಖ್ಯವೆಂದು ನಡೆದು ಕೊಳ್ಳುತ್ತಿದ್ದರು. ದೇವೇಂದ್ರನು ಕಾಲಕಾಲಕ್ಕೆ ತಕ್ಕಂತೆ ಮಳೆಯನ್ನು ಹೊಯಿಸುತ್ತಿದ್ದನು. ಭೂಮಿಯು ಸಮೃದ್ಧವಾದ ಪೈರುಗಳೊಡನೆ ಕೂಡಿ ಇತ್ತು, ಈ ಪ್ರಕಾರದಿಂದ ಅತನು ಸಮೃದ್ದವಾದ ರಾಜ್ಯವನ್ನಾಳುತ್ತಿರುವಾಗ್ಗೆ ಒಂದು ದಿವಸ ಮಧ್ಯಾಹ್ನ ಕಾಲದಲ್ಲಿ ಒಬ್ಬ ಮಾವುತನು ಆನೆಯ ಮೇಲೆ ಏರಿಕೊಂಡು ಅದಕ್ಕೆ ನೀರನ್ನು ಕುಡಿಸುವುದಕ್ಕೋಸ್ಕರ ಕೆರೆಗೆ ಹೋಗುತ್ತಿರಲು ಶಿವದಾಸನೆಂಬ ಒಬ್ಬ ಬ್ರಾಹ್ಮಣನು ಸ್ವಾ ನಸಂಧ್ಯಾ ವಂದನೆಗಳನ್ನು ತೀರಿಸಿಕೊಂಡು ವಿಭೂತಿರುದ್ರಾಕ್ಷ ಗಳನ್ನು ಧರಿಸಿ ಶಿವಪೂಜೆಯನ್ನು ಮಾಡುವುದಕ್ಕೋಸ್ಕರ ಚೆಂಬಿನಲ್ಲಿ ಉದಕವನ್ನು ತುಂಬಿಕೊಂಡು ನಂದನವನದಲ್ಲಿ ಬಾಳೆಯ ಎಲೆಯೊಳಗೆ ಮಲ್ಲಿಗೆ ಮೊದಲಾದ ಪುಷ್ಪಗ ಳನ್ನು ಕೊಯಿದು ಪೊಟ್ಟಣವನ್ನು ಕಟ್ಟಿ ಕೈಯ್ಯಲ್ಲಿ ಹಿಡಿದುಕೊಂಡು ಮನೆಗೆ ಹೋಗುತ್ತಾ ಇದ್ದನು. ಆ ಮದದಾನೆಯು ಮಾವುತನಿಂದ ತಡೆಯಲ್ಪಟ್ಟುದಾದರೂ ಮದ ದಿಂದ ಆ ಬ್ರಾಹ್ಮಣನ ಸಮಿಾಪಕ್ಕೆ ಹೋಗಿ ಪೊಟ್ಟಣವನ್ನು ತನ್ನ ಸೊಂಡಲಿನಿಂದ ಎಳೆ ದು ಕೊಂಡು ಅದರಲ್ಲಿದ್ದ ಪುಷ್ಪಗಳನ್ನೆಲ್ಲಾ ನೆಲದ ಮೇಲೆ ಚೆಲ್ಲಿಬಿಡಲು ಬ್ರಾಹ್ಮಣನು ಭಯಪಟ್ಟು ಶಿವ ಶಿವಾ ! ಎಂದು ಕೂಗುತ್ತಾ ಓಡಿ ಹೋದನು, ಅರಸು ಉಪ್ಪರಿಗೆ ಯಲ್ಲಿ ಇದ್ದುಕೊಂಡು ಇದೆಲ್ಲವನ್ನೂ ನೋಡಿ-ಶಿವ ಶಿವಾ ! ಶಿವದ್ರೋಹ ಬಂದಿ ತಲ್ಲಾ ! ಇದಕ್ಕೆ ಪ್ರಾಯಶ್ಚಿತ್ಯವೇನು ? ಎಂದು ಯೋಚಿಸಿ ಪ್ರಾಣತ್ಯಾಗವೇ ಪ್ರಾಯ ಶಿತವೆಂದು ನಿಶ್ಚಯಿಸಿ ಕತ್ತಿಯಿಂದ ತಲೆಯನ್ನು ಕಡಿದು ಕೊಳ್ಳುವುದಕ್ಕೆ ಪ್ರಯತ್ನ ಮಾಡಲು ಆ ಸಮಯದಲ್ಲಿ ಆಕಾಶದಿಂದ-ಎಲೈ, ಭೂಪಾಲಕನೇ ! ನೀನು ಸಾಹ ಸವನ್ನು ಮಾಡಬೇಡ. ಆ ಪುಷ್ಪಗಳೆಲ್ಲವೂ ಪರಮೇಶ್ವರಸ್ವಾಮಿಯವರ ಶಿರಸ್ಸಿನಲ್ಲಿ ಕಾಣಲ್ಪಡುತ್ತವೆ. ಹೋಗಿ ನೋಡು ಎಂಬ ಶಬ್ದ ವಾಗಲು ಅರಸನು ಆ ಅಶರೀರವಾಕ್ಯ ವನ್ನು ಕೇಳಿ ಸಂತೋಷಪಟ್ಟು ಶೀಘ್ರವಾಗಿ ಶಿವಾಲಯಕ್ಕೆ ಹೋಗಿ ಪರಮೇಶ್ವರ