ಕಥಾಸಂಗ್ರಹ-೨ನೆಯ ಭಾಗ 103 ಚಿತ್ರಾಂಗಿಯೇ ! ನಿನ್ನ ಗಂಡನು ಮಾಡಿದ ಯಜ್ಞದಿಂದ ನನಗೆ ಸಂತೋಷವಾಯಿತು. ನಾನು ಪರಮೇಶ್ವರನು, ನಿನಗೆ ಬೇಕಾದ ವರಗಳನ್ನು ಕೊಡುತ್ತೇನೆ, ಕೇಳೆಂದು ನುಡಿದು ಮಾಯವಾಗಿ ಹೋದನು. ಆ ಚಿತ್ರಾಂಗಿಯು ಮಾರನೆಯ ದಿವಸ ಪ್ರಾತಃ ಕಾಲದಲ್ಲಿ ಎದ್ದು ಸ್ವಪ್ನವನ್ನು ತನ್ನ ಗಂಡನಿಗೆ ತಿಳಿಸಿ-ಎಲೈ, ಮಹಾನುಭಾವರು ಗಳಿರಾ ! ನನ್ನ ಸ್ವಪ್ನವು ಅದ್ಭುತವಾಗಿ ಇದೆ, ಅದರಿಂದ ಪರಮೇಶ್ವರಸ್ವಾಮಿಯವ ರನ್ನು ಸ್ತುತಿಸಿ ಮಗನನ್ನು ಕೊಡಬೇಕೆಂದು ಬೇಡಿಕೊಳ್ಳಬೇಕೆಂದು ನುಡಿಯಲು ಅರಸು ಆ ಮಾತನ್ನು ಕೇಳಿ ಅವಳನ್ನು ಕುರಿತು-ಎಲೈ, ಶುಭಾಂಗಿಯೇ ! ನನ್ನ ಮಾತನ್ನು ಕೇಳು, ನಿನಗೆ ಪರಮೇಶ್ವರಸ್ವಾಮಿಯವರಲ್ಲಿ ಭಕ್ತಿಯು ದೃಢವಾಗಿ ಇದೆ. ಆದುದರಿಂದ ನೀನೇ ಪರಮೇಶ್ವರಸ್ವಾಮಿಯವರನ್ನು ಪೂಜಿಸಿ ಮಗನನ್ನು ಕೊಡ ಬೇಕೆಂದು ಬೇಡಿಕೊಂಡರೆ ನಿನಗೆ ಕೊಡುತ್ತಾರೆ ಎಂದು ನುಡಿದು ಪುರೋಹಿತನನ್ನು ಕರಿಸಿ ಇವಳ ಕೈಯ್ಯ೦ದ ಶಿವಪೂಜೆಯನ್ನು ಮಾಡಿಸು ಎಂದು ಆ ಬ್ರಾಹ್ಮಣೋ ತಮನಿಗೆ ಕಟ್ಟು ಮಾಡಿದನು. ಆ ಬ್ರಾಹ್ಮಣನು-ಹಾಗೆಯೇ ಆಗಲಿ ಎಂದು ಒಪ್ಪಿ ಚಿತ್ರಾಂಗಿಯ ಸವಿಾಪಕ್ಕೆ ಹೋಗಿ ಆಕೆಗೆ ಶಿವಪೂಜಾವಿಧಾನವನ್ನು ತಿಳಿಸಲು ಆ ರಾಜಭಾರೈಯು ಕಲಶಸ್ಥಾಪನವನ್ನು ಮಾಡಿ ಪುರೋಹಿತನು ಹೇಳಿದ ರೀತಿಯಾಗಿ ಕಲಶದಲ್ಲಿ ಪರಮೇಶ್ವರ ಸ್ವಾಮಿಯವರನ್ನು ಆವಾಹನೆ ಮಾಡಿ ಶ್ರೀಗೋಸ್ಥಳನಿವಾಸ ರಾದ ಪರಮೇಶ್ವರಸ್ವಾಮಿಯವರನ್ನು ಪೂಜಿಸಿ ಪೂಜೆಯು ಮುಗಿದ ಬಳಿಕ ಪ್ರದ ಕೋಣನಮಸ್ಕಾರಗಳನ್ನು ಮಾಡಿ ಮನಸ್ಸಿನಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ ಈ ಪ್ರಕಾರದಿಂದ ಒಂದು ತಿಂಗಳ ಪರ್ಯ೦ತರವೂ ನಿಯಮದಿಂದ ಪೂಜಿಸುತ್ತಿರಲು ಒಂದು ದಿವಸ ಪರಮೇಶ್ವರಸ್ವಾಮಿಯವರು ಪ್ರಸನ್ನರಾಗಿ ರಾಜಪತ್ನಿಯನ್ನು ನೋಡಿ-ಎಲೈ, ಚಿತ್ರಾಂಗಿಯೇ !* ನಿನಗೆ ಅಯೋನಿಜನಾದ ಕುಮಾರನು ಉದಯಿ ಸುತ್ತಾನೆ ಎಂದು ನುಡಿದು ಅಂತರ್ಧಾನನಾದನು, ಆ ಸಮಯದಲ್ಲಿ ಪರಮೇಶ್ವರ ಸ್ವಾಮಿಯವರ ಮಹಿಮೆಯಿಂದ ಸರ್ವಲಕ್ಷಣಸಂಪನ್ನನೂ ಶೂರನೂ ದಿವ್ಯ ಸೌಂದರ್ಯ ವುಳ್ಳವನೂ ಆಗಿರುವ ಒಬ್ಬ ಬಾಲಕನು ತನ್ನ ತೇಜಸ್ಸಿನಿಂದ ದಿಕ್ಕುಗಳನ್ನು ಬೆಳಗಿಸುತ್ತಾ ಚೈತ್ರಮಾಸದ ಶುಕ್ಲ ಪಕ್ಷದಲ್ಲಿ ಹಸ್ತ ನಕ್ಷತ್ರಯುಕ್ತವಾದ ಶುಭಲಗ್ನದಲ್ಲಿ ಆ ಚಿನ್ನದ ಕಲಶದಿಂದ ಆವಿರ್ಭವಿಸಿ ಚಿತ್ರಾಂಗಿಯ ತೊಡೆಯ ಮೇಲೆ ಬಂದು ಕುಳಿತು ಕೊಳ್ಳಲು ಆಕೆಯು ಐದು ವರುಷದ ವಯಸ್ಸುಳ್ಳಂಧ ಆ ಬಾಲಕನನ್ನು ನೋಡಿ ಆಶ್ಚರ್ಯಪಟ್ಟು ಆತನನ್ನೇ ತನ್ನ ಮಗನೆಂದು ಎಣಿಸಿ ಪರಮೇಶ್ವರಸ್ವಾಮಿಯವ ರನ್ನು ಕುಲದೇವರೆಂದು ಭಾವಿಸಿ ಭಕ್ತಿಯಿಂದ ಪೂಜಿಸಿ ಬಾಲಕನನ್ನು ಕರೆದು ಕೊಂಡು ಗಂಡನ ಸಮಿಾಪಕ್ಕೆ ಬಂದು ತಾನು ಮಾಡಿದ ಕಾರ್ಯವನ್ನೆಲ್ಲಾ ಆತನಿಗೆ ತಿಳಿಸಿದಳು, ಅರಸು ಅದನ್ನು ಕೇಳಿ ಸಂತೋಷಪಟ್ಟು ಪುರೋಹಿತನನ್ನು ಕರೆತರಿಸಿ ಆ ಬಾಲಕನಿಗೆ ಜಾತಕವನ್ನು ಬರೆಯಿಸಿ ಧರ್ಮಕೇತನನೆಂದು ನಾಮಕರಣವನ್ನು ಮಾಡಿ ಸಕಲ ವಿದ್ಯಾಭ್ಯಾಸಗಳೂ ಮಾಡಿಸಿ ಹದಿನಾರು ವರುಷ ಪರ್ಯ೦ತರವೂ ಭಕ್ತಿಯಿಂದ ಕಾಪಾಡಿ ಮದುವೆಯನ್ನು ಮಾಡಿ ತನ್ನ ರಾಜ್ಯವನ್ನು ಆತನ ವಶಕ್ಕೆ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೫
ಗೋಚರ