102 KANARESE SELECTIONS-PART II ಸೇವೆಯು ಸಾರ್ಥಕವಾಗುತ್ತದೆ, ಆದುದರಿಂದ ಇದನ್ನು ತೆಗೆದು ಕೊಳ್ಳಬೇಕೆಂದು ಬೇಡಿ ಕೊಂಡುದಕ್ಕೆ ಆ ಬ್ರಾಹ್ಮಣನು ಆ ವಸ್ತ್ರವನ್ನು ತೆಗೆದು ಕೊಂಡು ಅಲ್ಲೇ ಅದೃಶ್ಯನಾದನು. ಕೀರ್ತಿಕಥಾಮೃತನು ಆ ಬ್ರಾಹ್ಮಣನನ್ನು ಕಾಣದೆ ಆಶ್ಚರ್ಯಪಡುತ್ತಿರುವಲ್ಲಿ ಪರಮೇ ಶ್ವರ ಸ್ವಾಮಿಯವರು ಆತನ ಭಕ್ತಿಗೆ ಮೆಚ್ಚಿ ವೃಷಭಾರೂಢರಾಗಿ ಪ್ರಧಮಗಣಗಳೊಡನೆ ಕೂಡಿ ಪ್ರತ್ಯಕ್ಷವಾಗಿ ಬಂದು ಆತನ ಮುಂದೆ ನಿಲ್ಲಲು ಕೀರ್ತಿಕಥಾಮೃತನು ಪರಮೇ ಶ್ವರಸ್ವಾಮಿಯವರನ್ನು ನೋಡಿ ಪರಮಭಕ್ತಿಯಿಂದ ಎದ್ದು ಸಾಷ್ಟಾಂಗವಾಗಿ ನಮ ಸ್ವಾರವನ್ನು ಮಾಡಿ ಕೈಗಳನ್ನು ಕಟ್ಟಿ ಕೊಂಡು ನಿಂತು ಸ್ತುತಿಸಿದನು. ಆಗ ಪರಮೇಶ್ವರ ಸ್ವಾಮಿಯವರು ಆತನನ್ನು ಕರೆದು--ಎಲೈ, ಪರಮಭಕ್ತನೇ ! ನಿನ್ನ ಭಕ್ತಿಯಿಂದ ನನಗೆ ಸಂತೋಷವಾಯಿತು. ನೀನು ಕೊಟ್ಟ ವಸ್ತ್ರವನ್ನು ಧರಿಸಿ ಇದ್ದೇನೆ, ನೋಡು ! ಎಂದು ಹೇಳಿ ಅದನ್ನು ತೋರಿಸಿ--ನಿನಗೆ ಮುಕ್ತಿಯನ್ನು ಕೊಡುತ್ತೇನೆ. ಕೈಲಾಸಕ್ಕೆ ಬಾ ಎಂದು ನುಡಿದು ಪ್ರಧಮ ಗಣಗಳೊಡನೆ ಕೂಡಿ ಮಾಯವಾಗಿ ಹೋಗಲು ಆ ಕೀರ್ತಿಕಥಾ ಮೃತನು ಪರಮೇಶ್ವರಸ್ವಾಮಿಯವರ ಅನುಗ್ರಹದಿಂದ ಬಂದ ವಿಮಾನವನ್ನು ಏರಿ ಸಂತೋಷದಿಂದ ಕೈಲಾಸಕ್ಕೆ ಹೋದನು. 3. THE REWARD OF GIVING UP LIFE TO ATONE FOR OFFENCES AGAINST THE FOLLOWERS OF SHIVA ೩. ತಿಳಿಯದೆ ಶಿವಭಕ್ತರಿಗೆ ದ್ರೋಹಮಾಡಿ ತನ್ನ ಪ್ರಾಣವನ್ನು ಬಿಟ್ಟ ಧರ್ಮಕೇತನನು, ಲೋಕದಲ್ಲಿ ಯಾವ ಪುರುಷನು ತಾನು ಶಿವಭಕ್ತನಾಗಿ ವಿಭೂತಿರುದ್ರಾಕ್ಷ ಗಳನ್ನು ಧರಿಸಿ ಬಂದಂಧ ಶಿವಭಕ್ತರಿಗೆ ಅಪರಾಧವನ್ನು ಮಾಡದೆ ಇದ್ದು ಕೊಂಡು ಒಂದು ವೇಳೆ ಅರಿಯದೆ ಅಪರಾಧವನ್ನು ಮಾಡಿದರೆ ಪ್ರಾಣಗಳನ್ನು ಬಿಡುವನೋ ಆತನು ಪರಮೇಶ್ವರಸ್ವಾಮಿಯವರ ಅನುಗ್ರಹದಿಂದ ಮುಕ್ತನಾಗುವನು. ಈ ಅರ್ಥ ದಲ್ಲಿ ಒಂದು ಕಥೆಯುಂಟು. ಹೇಗಂದರೆ ಚೋಳದೇಶದಲ್ಲಿ ಆಟೋದವೆಂಬ ಪಟ್ಟ ಣವಿರುವುದು, ಅದರಲ್ಲಿ ಧರ್ಮ ವರ್ಧನನೆಂಬ ಅರಸು ಅತ್ತೈಶ್ವರ್ಯಸಂಪನ್ನನಾಗಿ ಭೋಗಗಳಲ್ಲಿ ಇ೦ದ್ರನಿಗ ತ್ಯಾಗದಲ್ಲಿ ಬಲಿಚಕ್ರವರ್ತಿಗೂ ಯಾಗಗಳಲ್ಲಿ ಕಪಿಲಮುನೀಂದ್ರನಿಗೂ ಸಮಾನನಾಗಿ ಪರಾಕ್ರಮದಿಂದ ಸಕಲ ಶತ್ರುಗಳನ್ನೂ ಜಯಿಸಿ ಬಹು ಧನವನ್ನು ಸಂಪಾದಿಸಿ ಏಕವೀರನಾಗಿ ಸುಲೋಚನೆ ಎಂಬ ಹೆಸರುಳ್ಳ ಹೆಂಡತಿಯೊಡನೆ ಕೂಡಿ ಯಾಗವನ್ನು ಮಡಬೇಕೆಂದು ಆಲೋಚಿಸಿದವನಾಗಿ ಬ್ರಾಹ್ಮಣರನ್ನು ಕರತರಿಸಿ ವಿಶ್ವಜಿತ್ತೆಂಬ ಯಾಗವನ್ನು ಮಾಡಲು ಆ ಯಾಗದಿಂದ ಪರಮೇಶ್ವರಸ್ವಾಮಿಯವರು ಸಂತೋಷ ಪಟ್ಟು ಆತನ ಹೆಂಡತಿಯ ಸ್ವಪ್ನದಲ್ಲಿ ಬಂದು ಆಕೆಯನ್ನು ಕುರಿತು.ಎಲೈ,
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೪
ಗೋಚರ