1 1 1 101 ಕಥಾಸಂಗ್ರಹ-ಆನೆಯ ಭಾಗ ವನ್ನು ಬಿಡದೆ ಒಳ್ಳೆಯವಸ್ತ್ರಗಳನ್ನು ನೇಯುತ್ತಾ ಪರಮೇಶ್ವರನಲ್ಲಿ 'ಭಕ್ತಿಯುಳ್ಳವನಾಗಿ ಶಿವಭಕ್ತರನ್ನು ಕಂಡರೆ ಭಕ್ತಿಯಿಂದ ಪೂಜಿಸುತ್ತಾ ನಿತ್ಯವೂ ಮೊಳದಗಲವುಳ್ಳಂಥಾದು ದಾಗಿ ಸಣ್ಣದೂ ಮೃದುವೂ ವಿಚಿತ್ರವೂ ಮನೋಹರವೂ ಆಗಿರುವ ಒಂದು ವಸ್ತ್ರವನ್ನು ಭಕ್ತಿಪೂರ್ವಕವಾಗಿ ನೆಯ್ದು ಅದನ್ನು ಪರಮೆಶ್ವರಸ್ವಾಮಿಯವರಿಗೆ ಅರ್ಪಿಸುತ್ತಾ ನಿತ್ಯವೂ ಬಂದಂಥ ಬ್ರಾಹ್ಮಣರಿಗೂ ಶಿವಭಕ್ತರಿಗೂ ಯಾಚಕರಿಗೂ ಬೇಕಾದ ವಸ್ತ್ರಗ ಇನ್ನೂ ಕಂಧೆಗಳನ್ನೂ ಕೌಪೀನಗಳನ್ನೂ ಭಕ್ತಿಯಿಂದ ಕೊಡುತ್ತಾ ಒಳ್ಳೆಯ ಮಾತುಗ ಳಿಂದ ಉಪಚರಿಸಿ ಕಳುಹಿಸುತ್ತಾ ಶಿವಭಕ್ತರಿಗೆ ಅನ್ನ ವನ್ನು ಕೊಟ್ಟು ಬಳಿಕ ತಾನು ಭೋಜನ ಮಾಡುವ ವ್ರತವನ್ನು ಹಿಡಿದು ಲೋಪವಿಲ್ಲದೆ ಅದನ್ನು ನಡಿಸುತ್ತಾ ಈ ಪ್ರಕಾರ ಸುಖದಲ್ಲಿ ಇದ್ದು ಕೊಂಡು ಒಂದು ದಿವಸ ಪರಮಭಕ್ತಿಯಿಂದ ಪರಮೇಶ್ವ ರನಿಗೆ ಸಮರ್ಪಿಸುವುದಕ್ಕೋಸ್ಕರ ಒಂದು ವಸ್ತ್ರವನ್ನು ನೆಯ್ಯು ವಿಂಗಡವಾಗಿ ಒಂದು ತಾವಿನಲ್ಲಿ ಅದನ್ನು ಮಡಚಿ ಎಚ್ಚರವಾಗಿ ನೋಡುತ್ತಿರಲು ಪರಮೇಶ್ವರನು ಅವನ ಭಕ್ತಿ ಪರೀಕ್ಷೆಯನ್ನು ನೋಡುವುದಕ್ಕೋಸ್ಕರ ಬ್ರಾಹ್ಮಣರೂಪವನ್ನು ಧರಿಸಿ ಮುದುಕ ನಾಗಿ ಕೋಲನ್ನು ಊರಿಕೊಂಡು ತಲೆ ನಡುಗುತ್ತಾ ನೂರು ಮಂದಿ ಶಿವಭಕ್ತರನ್ನು ಸಂಗಡ ಕರೆದು ಕೊಂಡು ಕೀರ್ತಿಕಧಾಮೃತನ ಮನೆಗೆ ಬಂದು ಆ ಶಿವಭಕ್ತರನ್ನು ಅವನ ಬಳಿಗೆ ಕಳುಹಿಸಿ ತಾನು ಒಂದು ತಾವಿನಲ್ಲಿ ಮರೆಯಾಗಿ ಔತು ಕೊಂಡಿರಲು ಕೀರ್ತಿಕಥಾಮೃತನು ಬಂದಂಥಾ ಶಿವಭಕ್ತರನ್ನು ನೋಡಿ ಸಂತೋಷಪಟ್ಟು ಅವರೆಲ್ಲ ರಿಗೂ ಕ್ರಮವಾಗಿ ಒಂದೊಂದು ವಸ್ತ್ರವನ್ನು ಕೊಟ್ಟು ಕಳುಹಿಸಿದನು. ಕಡೆಗೆ ಪುಣ್ಯ ಶೀಲನ ಮನೆಯಲ್ಲಿದ್ದ ವಸ್ತ್ರಗಳೆಲ್ಲಾ ವೆಚ್ಚವಾಗಿ ಹೋಗಲು ಆ ಬಳಿಕ ಪರಮೇಶ್ವ ರನು ಮುದುಕನಾಗಿ ಕೌಪೀನವನ್ನು ಕಟ್ಟಿ ಕೊಂಡು ಆ ಭಕ್ತನು ಇರುವ ತಾವಿಗೆ ಬರಲು ಕೀರ್ತಿಕಥಾಮೃತನು ಬಂದ ಬ್ರಾಹ್ಮಣನನ್ನು ನೋಡಿ ಸಂತೋಷಪಟ್ಟು ಎದ್ದು ಎದುರಾಗಿ ಹೋಗಿ ಆತನ ಪಾದಗಳಿಗೆ ನಮಸ್ಕರಿಸಿ ಒಳಗೆ ಕರೆದುಕೊಂಡು ಬಂದು ಮಣೆಯನ್ನು ಕೊಟ್ಟು ಕುಳ್ಳಿರಿಸಿ ಕೈಕಟ್ಟಿ ನಿಂತುಕೊಂಡು-ಸ್ವಾಮಿ, ಮಹಾ ನುಭಾವರೆ ! ನಿಮ್ಮ ದರ್ಶನದಿಂದ ನಾನು ಧನ್ಯನಾದೆನು, ಅಪ್ಪಣೆಯನ್ನು ಪಾಲಿಸಬಹು ದೆಂದು ಬೇಡಿಕೊಂಡನು. ಆ ಬ್ರಾಹ್ಮಣನು-ಎಲೈ, ಭಕ್ತನೇ ! ನಾನು ಮುದುಕ ನಾದುದರಿಂದ ದಾರಿಯಲ್ಲಿ ನಡೆದು ಬರುವಾಗ ನನ್ನ ವಸ್ತ್ರವು ಗಾಳಿಯಿಂದ ಹಾರಿ ಹೋಯಿತು. ಅದು ಸಿಕ್ಕಲಿಲ್ಲ, ನೀನು ಧರ್ಮಾತ್ಮನಾದುದರಿಂದ ನಿನ್ನ ಬಳಿಗೆ ಬಂದೆನು ಎನಲು ಕೀರ್ತಿಕಥಾಮೃತನು ಆ ವಾಕ್ಯವನ್ನು ಕೇಳಿ ಸಂತೋಷಪಟ್ಟು-ಮನೆಯ ಲ್ಲಿರುವ ವಸ್ತ್ರಗಳೆಲ್ಲಾ ವೆಚ್ಚವಾಗಿ ಹೋದುವು. ಪರಮೇಶ್ವರನಿಗೆ ಸಮರ್ಪಿಸುವುದ ಕ್ರೋಸ್ಕರ ಮಾಸಲಾಗಿ ತೆಗೆದು ಇರಿಸಿದ್ದ ವಸ್ತ್ರವೊಂದೇ ಉಳಿದಿದೆ. ಪರಮೇಶ್ವರ ಸ್ವಾಮಿಯವರೇ ಈ ಬ್ರಾಹ್ಮಣ ರೂಪಿನಿಂದ ಬಂದಿದ್ದಾರೆ. ಈ ವಸ್ತ್ರವನ್ನು ಇವರಿಗೆ ಕೊಟ್ಟರೆ ಪರಮೇಶ್ವರ ಸ್ವಾಮಿಯವರು ಸಂತೋಷಪಡುವರು ಎಂದು ಮನಸ್ಸಿನಲ್ಲಿ ನಿತ್ಯ ಯಿಸಿ ಅದನ್ನು ತೆಗೆದು ಕೊಂಡು ಬ್ರಾಹ್ಮಣನ ಸಮಿಾಪಕ್ಕೆ ಬಂದು-ಸ್ವಾಮಿ, ಮಹಾನುಭಾವರೇ ! ಈ ವಸ್ತ್ರವನ್ನು ಸ್ವಾಮಿಯವರು ಧರಿಸಿದರೆ ನಾನು ಮಾಡಿದ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೩
ಗೋಚರ