00 KANARESE SELECTIONS PART II ಬಳಿಕ ತಾನೂ ಊಟಮಾಡಿ ಶಿವಭಕ್ತರಿಗೆ ಬೇಕಾದ ವಸ್ತ್ರವನ್ನು ಕೊಟ್ಟು ಒಳ್ಳೆಯ ಮಾತುಗಳನ್ನು ಆಡಿ ಅವರನ್ನು ಕಳುಹಿಸಿ ಸಾಯ೦ಕಾಲದ ಪಠ್ಯಂತರವೂ ಬ್ರಾಹ್ಮಣ ರಿಗೂ ಶಿವಭಕ್ತರಿಗೂ ಯಾಚಕರಿಗೂ ದರಿದ್ರರಿಗೂ ಹಣವನ್ನೂ ವಸ್ತ್ರವನ್ನೂ ಕೊಡುತ್ತಾ ಹಳೆಯವಾಗಿರುವ ಶಿವಾಲಯಗಳನ್ನು ಹೊಸದಾಗಿ ಕಟ್ಟಿಸುತ್ತಾ ತಿಂಗಳಿಗೊಂದು ಸಾರಿ ಒಂದು ವಸ್ಸವನ್ನು ಪರಮೇಶ್ವರಸ್ವಾಮಿಯವರಿಗೆ ಸಮರ್ಪಿಸುತ್ತಾ ಈ ಪ್ರಕಾ ರದಿಂದ ಐದು ವರುಷ ಪಠ್ಯಂತರವೂ ಪರಮೇಶ್ವರಸ್ವಾಮಿಯವರಿಗೆ ಕೈ೦ಕರವನ್ನು ಮಾಡುತ್ತಿರಲು ಪರಮೇಶ್ವರಸ್ವಾಮಿಯವರು ಒಂದು ದಿವಸ ಆ ಪುಣ್ಯಶೀಲನಿಗೆ ಪುತ್ರನನ್ನು ಕೊಡಬೇಕೆಂದು ನಿಶ್ಚಯಿಸಿ ಸ್ತ್ರೀರೂಪವನ್ನು ಧರಿಸಿ ಬಿಳಿಯ ಸೀರೆಯನ್ನು ಉಟ್ಟು ಸಕಲವಾದ ಒಡವೆಗಳನ್ನು ಧರಿಸಿ ಚಂದ್ರಬಿಂಬದೋಪಾದಿಯಲ್ಲಿ ಬಿಳುಪಾದ ತಾವರೆಯ ಹೂವನ್ನು ಹಿಡಿದು ಪುಣ್ಯಶೀಲನ ಸ್ವಪ್ನದಲ್ಲಿ ಬಂದು ಆತನನ್ನು ಕುರಿತು ಎಲೈ, ಪುಣ್ಯಶೀಲನೇ ? ಈ ತಾವರೆಯ ಹೂವನ್ನು ತೆಗೆದು ಕೊಂಡರೆ ನಿನಗೆ ಶುಭವಾ ಗುತ್ತದೆ ಎಂದು ನುಡಿದು ಅದನ್ನು ಪುಣ್ಯಶೀಲನಿಗೆ ಕೊಟ್ಟು ಹಾಗೆಯೇ ಮಾಯ ವಾಗಿ ಹೋಗಲು ಪುಣ್ಯಶೀಲನು ಆ ಸ್ವಪ್ನದಲ್ಲೇ ತನ್ನ ಹೆಂಡತಿಯನ್ನು ಕರೆದು ತಾವ ರೆಯ ಹೂವನ್ನು ಆಕೆಯ ಕೈಗೆ ಕೊಟ್ಟನು. ಅನಂತರದಲ್ಲಿ ಆ ಪುಣ್ಯಶೀಲನು ಬೆಳಗಾದ ಬಳಿಕ ಎದ್ದು ಸ್ವಪ್ನವನ್ನು ನೆನೆದು ಆಶ್ಚರ್ಯಪಡುತ್ತಾ ಸ್ನಾನವನ್ನು ಮಾಡಿ ಮಡಿಯನ್ನು ಉಟ್ಟು .ವೇದಶಾಸ್ತ್ರಗಳನ್ನು ಓದಿದಂಥ ಬ್ರಾಹ್ಮಣರನ್ನು ಕರಿಸಿ ತನ್ನ ಸ್ವಪ್ಪ ವೃತ್ತಾಂತವನ್ನು ಅವರಿಗೆ ತಿಳಿಸಿ ಸ್ವಾಮಿ, ಮಹಾನುಭಾವರುಗಳಿರಾ ! ಈ ಸ್ವಪ್ಪ ಕ್ಕೆ ಫಲವೇನು ? ಅದನ್ನು ನನಗೆ ತಿಳಿಸಬೇಕೆಂದು ಬೇಡಿಕೊಳ್ಳಲು ಆ ಬ್ರಾಹ್ಮಣರು ಆತನನ್ನು ನೋಡಿ-ಎಲೈ, ಪುಣ್ಯ ಶೀಲನೇ ! ಸ್ವಪ್ನದಲ್ಲಿ ಮುತ್ತೈದೆಯಾದ ಸ್ತ್ರೀಯನ್ನು ಕಂಡುದರಿಂದಲೂ ಬಳಿಕ ತಾವ ರೆಯ ಹೂವನ್ನು ತೆಗೆದು ಕೊಂಡು ಹೆಂಡತಿಗೆ ಕೊಟ್ಟು ದರಿಂದಲೂ ನಿನಗೆ ಶೀಘ್ರದಲ್ಲೇ ಪರಮೇಶ್ವರಸ್ವಾಮಿಯವರಿಗೆ ಸಮಾನನಾದ ಮಗನು ಹುಟ್ಟುತ್ತಾನೆ ಎಂದು ನುಡಿ ದರು. ಪೂಣ್ಯಶೀಲನು ಅವರ ವಾಕ್ಯವನ್ನು ಕೇಳಿ ಸಂತೋಷಪಟ್ಟು ಅವರಿಗೆ ಬಹುಮಾ ನವನ್ನು ಮಾಡಿ ಕಳುಹಿಸಿ ಆ ಹೊತ್ತು ಮೊದಲ್ಗೊಂಡು ಮತ್ತೂ ಅಧಿಕವಾದ ಭಕ್ತಿ ಯಿಂದ ಪರಮೇಶ್ವರಸ್ವಾಮಿಯವರಿಗೆ ಕೈಂಕರ್ಯವನ್ನು ಮಾಡುತ್ತಿರಲು ಆತನ ಪತ್ನಿಯು ಪರಮೇಶ್ವರಸ್ವಾಮಿಯವರ ಅನುಗ್ರಹದಿಂದ ಗರ್ಭಿಣಿಯಾಗಿ ಹತ್ತನೆಯ ತಿಂಗಳಲ್ಲಿ ಒಬ್ಬ ಕುಮಾರನನ್ನು ಪ್ರಸವಿಸಿದಳು, ಆ ಮಗನು ದಿನದಿನಕ್ಕೂ ಪ್ರವರ್ಧ ಮಾನನಾಗುತ್ತಿರಲು ಪುಣ್ಯಶೀಲನು ಆ ಕುಮಾರನನ್ನು ನೋಡಿ ಸಂತೋಷಪಟ್ಟು ಒಳ್ಳೆಯ ಕೀರ್ತಿಯನ್ನು ಸಂಪಾದಿಸುವವನಾಗುವನೆಂದೂ ಅಮೃತೋಪಮಾನಗಳಾದ ಕಥೆಗಳುಳ್ಳವನಾಗುವನೆಂದೂ ತಿಳಿದು ಕೀರ್ತಿಕಥಾಮೃತನೆಂದು ನಾಮಕರಣವನ್ನು ಮಾಡಿ ಬಹುಮಾನದಿಂದ ಕಾಪಾಡುತ್ತಾ ಹದಿನಾರನೆಯ ವರುಷದಲ್ಲಿ ಮದುವೆ ಯನ್ನು ಮಾಡಿ ತಾನು ಪರಮೇಶ್ವರಸ್ವಾಮಿಯವರಿಗೆ ಕೈಂಕರ್ಯವನ್ನು ಮಾಡುತ್ತಿ ರಲು ಕೀರ್ತಿಕಥಾಮೃತನು ಸಕಲ ವಿದ್ಯೆಗಳನ್ನೂ ಕಲಿತು ತಮ್ಮ ಜಾತಿಯ ಧರ್ಮ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೨
ಗೋಚರ