ಆಥಸಂಗ್ರಹ-ಎನಯ ಭೌಗ 99 ನಮಸ್ಕಾರವನ್ನು ಮಾಡಿ ಸ್ತುತಿಸಿ ಅವರ ಅಪ್ಪಣೆಯಿಂದ ಬಂದ ದಿವ್ಯ ವಿಮಾನವನ್ನು ಏರಿ ಕೈಲಾಸಕ್ಕೆ ಹೋದನು. 2. THE REWARD OF WORSHIPPING THE FOLLOWERS OF SHIVA. ಶಿವಭಕ್ತರ ಪೂಜಾಫಲ. ಉತ್ತಮವಾದ ಶಿವಭಕ್ತಿಯಿಂದ ಕೂಡಿದವರಾಗಿ ಬ್ರಾಹ್ಮಣರನ್ನೂ ಶಿವಭಕ್ಕೆ ರನ್ನೂ ಯಾಚಕರನ್ನೂ ಪೂಜಿಸಿದರೆ ಅವರು ಪರಮೇಶ್ವರಸ್ವಾಮಿಯವರ ಅನುಗ್ರಹ ದಿಂದ ಮುಕ್ತಿಯನ್ನು ಹೊಂದುವರು. ಈ ಅರ್ಧದಲ್ಲಿ ಒಂದು ಕಥೆಯುಂಟು ಹೇಗಂದರೆ ದಕ್ಷಿಣದೇಶದಲ್ಲಿ ಕಾಂಪಿಲ್ಯವೆಂಬ ಪಟ್ಟಣದಲ್ಲಿ ಪುಣ್ಯಶೀಲನೆಂಬ ಒಬ್ಬ ಜೇಡ ರವನು ತನ್ನ ಜಾತಿಧರ್ಮವನ್ನು ಬಿಡದೆ ವಸ್ತ್ರಗಳನ್ನು ನೇಯುವುದರಲ್ಲಿ ಬಹು ಸಮರ್ಥ ನಾಗಿ ಬುದ್ದಿವಂತನಾಗಿ ಆ ದೇಶದಲ್ಲಿರುವ ಜೇಡರಿಗೆಲ್ಲಾ ತಾನೇ ವೆಗ್ಗಳವಾಗಿ ಹೆಚ್ಚಾದ ಹಣವನ್ನು ಸಂಪಾದಿಸಿ ತನ್ನ ಕುಲದಲ್ಲಿ ಹುಟ್ಟಿದ ಸುಮುಖಿ ಎಂಬ ಹೆಸ ರುಳ್ಳ ಹೆಣ್ಣನ್ನು ಮದುವೆಮಾಡಿಕೊಂಡು ಅವಳೊಡನೆ ಕೂಡಿ ಸಕಲ ಭೋಗಗಳನ್ನೂ ಅನುಭವಿಸುತ್ತಾ ಐವತ್ತು ವರುಷಗಳ ಕಾಲವನ್ನು ಕಳೆದನು, ಆ ಬಳಿಕ ಒಂದು ದಿವ ಸದಲ್ಲಿ ತನಗೆ ಸಂತಾನವಿಲ್ಲದೆ ಇರುವುದರಿಂದ ತನ್ನ ಹೆಂಡತಿಯನ್ನು ಕರೆದು-ಎಲೈ, ಸುಮುಖಿಯೇ ! ನಾನು ಹೆಚ್ಚಾಗಿ ಹಣವನ್ನು ಸಂಪಾದಿಸಿದೆನು. ನಮಗೆ ಮಕ್ಕಳಿಲ್ಲ ದುದರಿಂದ ಇನ್ನು ಮೇಲೆ ಮುಪ್ಪಿನ ಕಾಲದಲ್ಲಿ ನಮ್ಮ ನ್ನು ಕಾಪಾಡುವಂಥಾವರು ಒಬ್ಬರೂ ಇಲ್ಲ, ಆದುದರಿಂದ ನಮ್ಮ ಮನೆಯಲ್ಲಿರುವ ಹಣವೆಲ್ಲ ವನ್ನೂ ಸತ್ಪಾತ್ರ ಕಾಗಿ ವಿನಿಯೋಗಿಸೋಣ ಎಂದು ನುಡಿದು ಹೆಂಡತಿಯನ್ನು ಒಡಂಬಡಿಸಿ ಆ ದಿನ ಮೊದಲು ಬಂದಂಧ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರಿಗೆ ವಸ್ತ್ರಗಳನ್ನೂ ಹಣವನ್ನೂ ಅಕ್ಕಿ ಬೇಳೆ ಮೊದಲಾದ ಪದಾರ್ಧಗಳನ್ನೂ ಕೊಟ್ಟು ಅಧಿಕವಾದ ಭಕ್ತಿಯಿಂದ ಪೂಜಿಸಿ ಅವರಿಗೆ ಅಡ್ಡ ಬಿದ್ದು ಅವರ ಸಂಗಡ ಕೆಲವು ದೂರ ಹೋಗಿ ಒಳ್ಳೆಯ ಮಾತುಗಳನ್ನು ನುಡಿದು ಅವರನ್ನು ಕಳುಹಿಸುತ್ತಾ ನಿತ್ಯವೂ ಪ್ರಾತಃಕಾಲದಲ್ಲಿ ಎದ್ದು ಸ್ನಾನವನ್ನು ಮಾಡಿ ಮಡಿಯನ್ನು ಉಟ್ಟು ಪತ್ರಪುಷ್ಪಗಳನ್ನೂ ಹಣ್ಣು ಕಾಯಿಗಳನ್ನೂ ತೆಗೆದುಕೊಂಡು ಶಿವಾಲಯಕ್ಕೆ ಹೋಗಿ ಪ್ರದಕ್ಷಿಣನಮಸ್ಕಾರಗ ಳನ್ನು ಮಾಡಿ ಸನ್ನಿಧಿಯಲ್ಲಿ ನಿಂತು-ಸ್ವಾಮಿ, ಪರಮೇಶ್ವರರೇ ! ನನಗೆ ಮಗ ನನ್ನು ಕೊಡಬೇಕೆಂದು ಬೇಡಿಕೊಂಡು ಮನೆಗೆ ಬಂದು ಮಧ್ಯಾಹ್ನ ವಾಗುವ ಪರಂ ತರವೂ ಪರಮೇಶ್ವರ ಸ್ವಾಮಿಯವರಿಗೆ ಸಮರ್ಪಿಸುವುದಕ್ಕೋಸ್ಕರ ಒಂದು ವಸ್ತ್ರವನ್ನು ನೇಯುತ್ತಿದ್ದು ಮಧ್ಯಾಹ್ನವಾದ ಬಳಿಕ ಬಂದ ಶಿವಭಕ್ತರಿಗೆ ಅನ್ನವನ್ನು ಕೊಟ್ಟು ಆ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೧
ಗೋಚರ