ಪುಟ:ಕಥಾಸಂಗ್ರಹ ಸಂಪುಟ ೧.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KANARESE SELECTIONS-PART II ದಿವಸದಲ್ಲಿ ಪರಮೇಶ್ವರಸ್ವಾಮಿಯವರು ಆತನ ಭಕ್ತಿಯನ್ನು ನೋಡುವುದಕ್ಕೋಸ್ಕರ ಒಂದೇ ಮತ್ತ್ವವು ಸಿಕ್ಕುವ ಹಾಗೆ ಮಾಡಲು ಅತಿಭಕ್ತನು ಆ ಒಂದು ಮತ್ತ್ವವನ್ನೇ ಪರಮೇಶ್ವರಸ್ವಾಮಿಯವರಿಗೋಸ್ಕರ ಬಿಟ್ಟುಬಿಟ್ಟನು. ಆ ಮೇಲೆ ಅವನು ಬಹು ಶ್ರಮಪಟ್ಟರೂ ಒಂದು ಮಾನಾದರೂ ಸಿಕ್ಕದೇ ಹೋಯಿತು. ತಿರಿಗಿ ಮನೆಗೆ ಬಂದನು. ಮತ್ತೊಂದು ದಿವಸದಲ್ಲಿ ಅತಿಭಕ್ತನು ಮತ್ತ್ವಗಳನ್ನು ಹಿಡಿಯುವುದಕ್ಕೋಸ್ಕರ ಬಲೆ ಯನ್ನು ನೀರಿನಲ್ಲಿ ಬಿಟ್ಟು ಕೊಂಡು ಸಾಯಂಕಾಲದ ವರೆಗೂ ಇದ್ದಾಗ್ಯೂ, ಕಡೆಯಲ್ಲಿ ಒಂದೇ ಮತ್ತ್ವವು ಸಿಕ್ಕಿತು, ಅದನ್ನು ಪರಮೇಶ್ವರಸ್ವಾಮಿಯವರಿಗೆ ಸಮರ್ಪಿಸಿ ಬಿಟ್ಟು ಬಿಟ್ಟು ಮನೆಗೆ ಬಂದು ರಾತ್ರಿಯನ್ನು ಕಳೆದು ಮಾರನೆಯ ದಿವಸ ಪ್ರಾತಃಕಾಲದಲ್ಲಿ ಎದ್ದು ಸಮುದ್ರದಲ್ಲಿ ಬಲೆಯನ್ನು ಹಾಕಿ ಎಳೆಯುವ ಸಮಯದಲ್ಲಿ ಪರಮೇಶ್ವರ ಸ್ವಾಮಿ ಯವರ ಅನುಗ್ರಹದಿಂದ ಕೋಟೆ ಮತ್ಯಗಳಿಗೆ ಸಮಾನವಾಗಿ ಬಲಿತು ಮಹೋನ್ನತ ವಾದ ಒಂದು ಚಿನ್ನದ ಮತೃವು ಸಮುದ್ರಮಧ್ಯದಲ್ಲಿ ಸಿಕ್ಕಿ ಬಲೆಯನ್ನು ಎಳೆದು ಕೊಂಡು ಹೋಗುವುದಕ್ಕಾರಂಭಿಸಿತು. ಅತಿಭಕ್ತನು ಆ ಮತ್ತ್ವವನ್ನು ಎಳೆಯಲಾರದೆ ತನ್ನ ಸವಿಾಪದಲ್ಲಿರುವ ನೆಂಟರನ್ನು ಕರೆದು--ಎಲೈ, ಮಹಾತ್ಮರುಗಳಿರಾ ! ಈ ಬಲೆ ಯನ್ನು ಎಳೆಯುವದಕ್ಕೆ ಬನ್ನಿರಿ ಎನಲು ಅವರೆಲ್ಲರೂ ಈ ಬಲೆಯಲ್ಲಿ ಸಿಕ್ಕಿರುವ ಮತ್ಯದಲ್ಲಿ ನಮಗೆ ಅರ್ಥವನ್ನು ಕೊಟ್ಟರೆ ಬರುತ್ತೇವೆ ಎಂದು ಹೇಳಿದರು. ಅತಿಭಕ್ತನು ಹಾಗೆಯೇ ಆಗಲೆಂದು ಒಪ್ಪಲು ಅವರೆಲ್ಲರೂ ಕೂಡಿ ಬಲೆಯನ್ನು ಎಳೆದು ಮತ್ತ್ವ ವನ್ನು ಹಿಡಿದು ಅದನ್ನು ದಡದಲ್ಲಿ ಇರಿಸಿದರು. ಅತಿಭಕ್ತನು ಕೋಟಿ ಮತ್ತ್ವಗಳಿಗೆ ಸಮಾನವಾಗಿ ಬಲಿತು ಮಿಂಚಿನ ಹಾಗೆ ಹೊಳೆಯುತ್ತಿರುವ ಚಿನ್ನದ ಮತ್ತ್ವವನ್ನು ನೋಡಿ ಆಶ್ಚರ್ಯಪಟ್ಟು ಇದನ್ನು ಪರಮೇಶ್ವರಸ್ವಾಮಿಯವರಿಗೆ ಸಮರ್ಪಿಸುತ್ತೇನೆ ಎಂದು ನುಡಿದು ಬಲೆಯಿಂದ ಆ ಮಿಾನನ್ನು ತೆಗೆದು ನೀರಿನಲ್ಲಿ ಬಿಟ್ಟು ಬಿಟ್ಟನು. ಅಲ್ಲಿ ರುವ ನೆಂಟರೆಲ್ಲರೂ ಕೂಡಿ ಈ ಮತ್ತ್ವವನ್ನು ಬಿಟ್ಟು ಬಿಡುವುದಕ್ಕೆ ಕಾರಣವೇನು ? ಇದು ಚಿನ್ನದ ಮತ್ಸವು, ಚಿನ್ನ ವೆಲ್ಲವನ್ನೂ ಮಾರಿದರೆ ಒಬ್ಬೊಬ್ಬನಿಗೆ ಸಾವಿರ ವರಹ ಗಳ ಮೇರೆಗೆ ಬರುವುವು, ನಮ್ಮ ಮತ್ತ್ವವನ್ನು ನಮಗೆ ಕೊಡು, ಇಲ್ಲವಾದರೆ ನಿನ್ನ ಮನೆಯಲ್ಲಿ ಇರುವ ಹಣವೆಲ್ಲವನ್ನೂ ನಮಗೆ ಹಂಚಿಕೊಡು ಎಂದು ತಡೆದುಕೊಂಡು ಬಿಡದೆ ಬಾಧಿಸಿದುದರಿಂದ ಅತಿಭಕ್ತನು ತನ್ನ ಮನೆಯಲ್ಲಿ ಇರುವ ಹಣವೆಲ್ಲ ವನ್ನೂ ಅವರಿಗೆ ಕೊಟ್ಟು ಸಮಾಧಾನವನ್ನು ಮಾಡಲು ನೆಂಟರೆಲ್ಲರೂ ಅದನ್ನು ತೆಗೆದು ಕೊಂಡು ಸಂತೋಷಪಟ್ಟು ಅವನನ್ನು ಹೊಗಳುತ್ತಿದ್ದರು. ಪರಮೇಶ್ವರಸ್ವಾಮಿಯ ವರು ಅತಿಭಕ್ತನ ಭಕ್ತಿಗೆ ಮೆಚ್ಚಿ ವೃಷಭಾರೂಢರಾಗಿ ಪಾರ್ವತಿಯ ಸಮೇತರಾಗಿ ಪ್ರಮಧಗಣಗಳೊಡನೆ ಕೂಡಿ ಪ್ರಸನ್ನರಾಗಿ ಬಂದು ಆತನ ಮುಂದೆ ನಿಂತು-ಎಲೆ ಅತಿಭಕ್ತನೇ ! ನಿನ್ನ ಭಕ್ತಿಯಿಂದ ನನಗೆ ಸಂತೋಷವಾಯಿತು, ನಿನಗೆ ಮುಕ್ತಿಯನ್ನು ಕೊಡುತ್ತೇನೆ, ಕೈಲಾಸಕ್ಕೆ ಬಾ ಎಂದು ನುಡಿದು ಪ್ರಮಧಗಣಗಳೊಡನೆ ಕೂಡಿ ಮಾಯವಾಗಿ ಹೋಗಲು ಅಲ್ಲಿರುವ ಅಂಬಿಗರೆಲ್ಲರೂ ಈ ಸಂಗತಿಯನ್ನು ಆಶ್ಚರ್ಯ ದಿಂದ ನೋಡುತ್ತಿದ್ದರು. ಅತಿಭಕ್ತನು ಪ್ರತ್ಯಕ್ಷರಾದ ಪರಮೇಶ್ವರಸ್ವಾಮಿಯವರಿಗೆ