ಕಥಾಸಂಗ್ರಹ-೨ನೆಯ ಭಾಗ 97 ತೃವವನ್ನು ನೋಡುವುದಕ್ಕೋಸ್ಕರ ಹೋಗುತ್ತಿದ್ದರು. ಆ ವ್ಯವನು ಅವರ ಸಂಗಡ ತಿರುವಾಲೂರಿಗೆ ಹೋಗಿ ರಥೋತ್ಸವವನ್ನು ನೋಡಿ ತ್ಯಾಗರಾಜ ಸ್ವಾಮಿಯವರನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಸಾಯಂಕಾಲ ವೇಳೆಯಲ್ಲಿ ಕಮಲಾಲಯದ ಸೋಪಾನ ದಲ್ಲಿ ಕುಳಿತುಕೊಂಡು ವಿನೋದಗಳನ್ನು ನೋಡುತ್ತಿರಲು ಆ ಹೊತ್ತು ಸಾಯ೦ಕಾ ಲದಲ್ಲಿ ಒಬ್ಬ ಬ್ರಾಹ್ಮಣನು ಸ್ನಾನವನ್ನು ಮಾಡಿ ಮಡಿಯನ್ನು ಉಟ್ಟು ಸೋಪಾನದಲ್ಲಿ ಕುಳಿತುಕೊಂಡು ವಿಭೂತಿ ರುದ್ರಾಕ್ಷಗಳನ್ನು ಧರಿಸಿ ಸೈಷ್ಟಲಿಂಗರೂಪ ಶಿವ ಪೂಜೆ ಯನ್ನು ಮಾಡಿ ನಿಲ್ಮಾಲ್ಯದ ಪತ್ರ ಪುಷ್ಪಗಳನ್ನೂ ತಿಲಾಕ್ಷತೆಗಳನ್ನೂ ಉದಕದಲ್ಲಿ ಹಾಕಲು ಒಂದು ಮತ್ತ್ವವು ಅಲ್ಲಿಗೆ ಬಂದು ಆ ತಿಲಾಕ್ಷತೆಗಳನ್ನು ಭಕ್ಷಿಸುತ್ತಿರಲು ಆ ಸ್ಥವನು ಅದನ್ನು ನೋಡಿ ಹಿಡಿದು ಸಂಹರಿಸುವುದಕ್ಕೆ ಯತ್ನಿಸಲು ಆ ಬ್ರಾಹ್ಮಣನು ಅದನ್ನು ನೋಡಿ ಆತನ ಸವಿಾಪಕ್ಕೆ ಬಂದು-ಆ ಮಾನನ್ನು ಬಿಟ್ಟು ಬಿಡು ಎಂದು ಹೇಳಲು ಆ ವ್ಯವನು ಬ್ರಾಹ್ಮಣನ ವಾಕ್ಯವನ್ನು ಕೇಳಿ ಆ ಮತ್ಸವನ್ನು ಬಿಟ್ಟು ಎದ್ದು ಕೈಮುಗಿದು--ಸ್ವಾಮಿ ಬ್ರಾಹ್ಮಣ ಶ್ರೇಷ್ಠರುಗಳಿರಾ ! ಈ ಮತ್ಸವನ್ನು ಬಿಟ್ಟು ದರಿಂದ ಫಲವೇನೆಂದು ಕೇಳಲು ಬ್ರಾಹ್ಮಣನು ಆತನನ್ನು ನೋಡಿ-ಎಲೈ ಪರಮಭಕ್ಕನೆ ! ನಿನ್ನ ಜಾತಿ ಯಾವುದೆಂದು ಕೇಳಲು ಆತನು ತನ್ನ ಜಾತಿಯನ್ನು ಆತನಿಗೆ ತಿಳಿಸಲು ಆ ಬ್ರಾಹ್ಮಣನು ಅವನನ್ನು ನೋಡಿ-ಎಲೈ, ಪರಮಭಕ್ಕನೆ ! ವಿಾನುಗಳನ್ನು ಕೊಲ್ಲುವುದು ನಿಮ್ಮ ಜಾತಿಯ ಧರ್ಮವು, ಆದರೂ ನೀನು ನನ್ನ ಮಾತನ್ನು ಕೇಳಿ ಈ ಮತ್ತ್ವವನ್ನು ಬಿಟ್ಟವನಾದುದರಿಂದ ನೀನು ಪರಮಭಕ್ಕನಾಗಿ ಪುಣ್ಯವಂತನಾಗು, ನಿನ್ನಲ್ಲಿ ಪರಮೇಶ್ವರಸ್ವಾಮಿಯವರು ಅನುಗ್ರಹವನ್ನು ಮಾಡು ತ್ತಾರೆ. ಈ ಭಾಗದಲ್ಲಿ ಸಂಶಯವಿಲ್ಲ, ಇನ್ನು ಪರಮೇಶ್ವರಸ್ವಾಮಿಯಲ್ಲಿ ನಿಜವಾದ ಭಕ್ತಿಯನ್ನು ಇಟ್ಟು ಕೊಂಡಿರು ಎಂದು ಹೇಳಿ ತನ್ನ ಕೈಯಲ್ಲಿದ್ದ ವಿಭೂತಿಯನ್ನು ಕೊಟ್ಟು ನಿನಗೆ ಶಿವಾನುಗ್ರಹವುಂಟಾಗಲಿ ಎಂದು ಆಶೀರ್ವಾದವನ್ನು ಮಾಡಿ ನೀನು ಅಧಿಕ ಭಕ್ತಿಯನ್ನು ಮಾಡಿದವನಾದುದರಿಂದ ಆತಿಭಕ್ತನೆಂದು ಪ್ರಸಿದ್ಧನಾಗುತಲಿದ್ದೀ ಎಂದು ನುಡಿದು ತನ್ನ ಮನೆಗೆ ಹೋದನು, ಅಲ್ಲಿದ್ದ ಜನರೆಲ್ಲರೂ ಆತನ ಭಕ್ತಿಯನ್ನು ನೋಡಿ ಆತನನ್ನು ಅತಿಭಕ್ತನೆಂದು ಕರೆಯುತ್ತಿದ್ದರು. - ಆ ಅತಿಭಕ್ತನು ಆ ಹೊತ್ತು ಮೊದಲ್ಗೊಂಡು ಪರಮೇಶ್ವರಸ್ವಾಮಿಯವರಲ್ಲಿ ಭಕ್ತಿಯುಳ್ಳವನಾಗಿ ಅಲ್ಲಿಂದ ಹೊರಟು ತಮ್ಮ ಊರಿಗೆ ಬಂದು ಪರಮೇಶ್ವರ ಸ್ವಾಮಿ ಯವರನ್ನು ಸ್ಮರಿಸುತ್ತಾ ಮತ್ತ್ವಗಳನ್ನು ಹಿಡಿಯುವಾಗ ಮೊದಲು ಸಿಕ್ಕಿದ ಮತ್ ವನ್ನು ಪರಮೇಶ್ವರಸ್ವಾಮಿಯವರಿಗೆ ಸಮರ್ಪಿಸಿ ಅದನ್ನು ಜೀವಸಹಿತವಾಗಿ ಬಿಟ್ಟು ಬಿಡುತ್ತಾ ನಿತ್ಯವೂ ಪರಮೇಶ್ವರ ಸ್ವಾಮಿಯವರಲ್ಲಿ ಭಕ್ತಿಯನ್ನು ಮಾಡುತ್ತಾ ಐವತ್ತು ವಗುಷದ ಪರಂತರ ತಪ್ಪದೆ ಈ ನಿಯಮವನ್ನು ನಡೆಸುತ್ತಾ ಬರುತ್ತಿರಲು ಅಲ್ಲಿರುವ ನೆಂಟರೆಲ್ಲರೂ ಅತಿಭಕ್ತನನ್ನು ನೋಡಿ ಹಾಸ್ಯವನ್ನು ಮಾಡುತ್ತಿದ್ದರು. ಆ ಆತಿಭ ಕ್ರನು ಈಶ್ವರಾನುಗ್ರಹದಿಂದ ಮತ್ತ್ವಗಳನ್ನು ಹಿಡಿದು ವ್ಯಾಪಾರಗಳನ್ನು ಮಾಡಿ ಯಾಚಿಸಿದಂಥವರಿಗೆ ಬೇಕಾದ ಹಣವನ್ನೂ ಮತ್ಸಗಳನ್ನೂ ಕೊಡತ್ತಿರಲು ಒಂದು.
ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೯
ಗೋಚರ