96 KANARESE SELECTIONS-PART I ಮದುವೆ ಮಾಡಿಕೊಂಡು ಅವಳೊಡನೆ ಕೂಡಿ ಸಕಲ ಭೋಗಗಳನ್ನೂ ಅನುಭವಿ ಸುತ್ತಾ ಇದ್ದನು. ಇವನು ಒಂದು ದಿವಸ ಕಾವೇರಿಯ ಸಂಗಮದಲ್ಲಿ ಮತ್ತ್ವಗಳನ್ನು ಹಿಡಿದು ದಡದಲ್ಲಿ ಗುಡ್ಡೆಯನ್ನು ಹಾಕಿಕೊಂಡು ವ್ಯಾಪಾರವನ್ನು ಮಾಡುತ್ತಾ ಇರಲು ಆ ದಿವಸ ಆಪಾಡಬಹುಳ ಅಮಾವಾಸ್ಯೆಯಾದುದರಿಂದ ಆ ಕಾವೇರಿಯ ತೀರದಲ್ಲಿ ಇರುವಂಥಾ ಬ್ರಾಹ್ಮಣರೆಲ್ಲ ರೂ ಸಂಗಮದಲ್ಲಿ ಸ್ಥಾನವನ್ನು ಮಾಡುವುದಕ್ಕೋಸ್ಕರ ಸಮುದ್ರಜಲದಲ್ಲಿ ನಿಂತು ಸ್ನಾನವನ್ನು ಮಾಡಿ ದಡದಲ್ಲಿ ಕುಳಿತು ಕೊಂಡು ಕೆಲ ವರು ಜಪವನ್ನು ಮಾಡುತ್ತಿದ್ದರು. ಕೆಲವರು ಪುರಾಣಗಳನ್ನು ಹೇಳುತ್ತಿದ್ದರು. ಕೆಲವರು ದಾನಧರ್ಮಗಳನ್ನು ಮಾಡುತ್ತಿದ್ದರು. ಆ ಮಾನದತ್ತನು ಸ್ನಾನವನ್ನು ಮಾಡುವಂಥಾ ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ವೈಶ್ಯರನ್ನೂ ಶೂದ್ರರನ್ನೂ ದಾನಗ ಳನ್ನು ಮಾಡುವಂಥಾ ಪುಣ್ಯ ಪುರುಷರನ್ನೂ ಪುರಾಣವನ್ನೂ ಹೇಳುವಂಥಾ ವೃದ್ದ ರನ್ನೂ ನೋಡಿ ಆಶ್ಚರ್ಯಪಟ್ಟು ಪುರಾಣವನ್ನು ಹೇಳುವಂಧಾ ಬ್ರಾಹ್ಮಣರ ಸಮಿ ಪದಲ್ಲಿ ನಿಂತು-ಪರಮೇಶ್ವರನ ಪಾದಗಳಲ್ಲಿ ಭಕ್ತಿಯುಳ್ಳಂಧವರು ಸಕಲ ಪಾಪಗಳ ಪರಿಹಾರವನ್ನೂ ಹೊಂದಿ ಮುಕ್ತರಾಗುವರು, ಮತ್ತು ಪರಮೇಶ್ವರಸ್ವಾಮಿಯವ ರಿಗೆ ಭಕ್ತಿಯಿಂದ ತನ್ನ ಶಕ್ತಿಗೆ ತಕ್ಕ ಹಾಗೆ ಹಣವನ್ನಾದರೂ ಪತ್ರ `ಪಷ್ಟ ಫಲಗಳ ನಾದರೂ ಒಂದು ಮಾನ ಅಕ್ಕಿಯನ್ನಾದರೂ ಅಡಿಕೆ ಎಲೆಗಳನ್ನಾದರೂ ತಂದು ಸಮರ್ಪಿಸಿದಂಥವರಿಗೆ ಪರಮೇಶ್ವರನು ಪ್ರಸನ್ನನಾಗಿ ಬೇಕಾದ ವರಗಳನ್ನು ಕೊಡು ವನು ಎಂಬ ಅರ್ಥವನ್ನು ಕೇಳಿ ಪುರಾಣ ಹೇಳುವಂಥಾ ಬ್ರಾಹ್ಮಣರಿಗೆ ನಮಸ್ಕಾರ ವನ್ನು ಮಾಡಿ ಆ ಹೊತ್ತ ಮೊದಲ್ಗೊಂಡು ಪರಮೇಶ್ವರನಲ್ಲಿ ಭಕ್ತಿಯುಳ್ಳವನಾಗಿ ನಿತ್ಯವೂ ಮಗಳ ವ್ಯಾಪಾರದಲ್ಲಿ ಬಂದ ಹಣದಲ್ಲಿ ನಾಲ್ಕನೆಯ ಪಾಲನ್ನು ತೆಗೆದು ಪರಮೇಶ್ವರಸ್ವಾಮಿಯವರಿಗೆ ಮಾಸಲಾಗಿ ಇರಿಸಿ ಮಿಕ್ಕಾದ ಹಣವನ್ನು ತಾನು ವೆಚ್ಚವನ್ನು ಮಾಡಿಕೊಳ್ಳುತ್ತಾ ನಿತ್ಯವೂ ಪರಮೇಶ್ವರಸ್ವಾಮಿಯವರನ್ನೇ ಮನಸ್ಸಿ ನಲ್ಲಿ ಸ್ಮರಿಸುತ್ತಾ ಕೂಡಿದ ಹಣವೆಲ್ಲವನ್ನೂ ತಿಂಗಳಿಗೆ ಒಂದು ಸಾರಿ ತ್ಯಾಗರಾಜ ಸ್ವಾಮಿಯವರಿಗೆ ಸಮರ್ಪಿಸುತ್ತಾ ಈ ಪ್ರಕಾರದಿಂದ ಅರವತ್ತು ವರುಷ ಪಠ್ಯಂತ ರವೂ ನಿಯಮವನ್ನು ತಪ್ಪದೆ ತ್ಯಾಗರಾಜಸ್ವಾಮಿಯವರಿಗೆ ಸೇವೆಯನ್ನು ಮಾಡು ತಿರಲು ಆ ಪರಮೇಶ್ವರಸ್ವಾಮಿಯವರ ಪ್ರಸಾದದಿಂದ ಒಬ್ಬ ದಿವ್ಯಪುರುಷನು ಮಾನದತ್ತನಿಗೆ ಪ್ರಸನ್ನ ನಾಗಿ ಆತನ ಮನೆಯಲ್ಲಿ ಬೆಳೆಯುತ್ತಿರಲು ವಿಾನದತ್ತನು ಆ ಬಾಲಕನನ್ನು ನೋಡಿ ಸಂತೋಷಪಟ್ಟು ಪರಮೇಶ್ವರಸ್ವಾಮಿಯವರೇ ಈ ರೂಪ ದಿಂದ ಬಂದಿದಾರೆ ಎಂದು ಎಣಿಸಿ ಬಹು ಪ್ರೀತಿಯಿಂದ ಕಾಪಾಡುತ್ತಾ ಅವನನ್ನು ಸ್ಥವನೆಂಬ ಹೆಸರಿನಿಂದ ಕರೆಯುತ್ತಾ ಅಧಿಕವಾದ ಸಂತೋಷವುಳ್ಳವನಾಗಿ ಬಹು ದಿವಸ ಬದುಕಿದ್ದು ಕಡೆಗೆ ಕೈಲಾಸವನ್ನೈದಿದನು. ಆ ಸ್ಥವನು ತನ್ನ ಕುಲಾಚಾರ ವನ್ನು ಬಿಡದೆ ಮತ್ತ್ವಗಳನ್ನು ಹಿಡಿದು ವ್ಯಾಪಾರವನ್ನು ಮಾಡುತ್ತಾ ಬುದ್ದಿವಂತ ನಾಗಿ ಇರುತ್ತಿದ್ದನು. ಒಂದು ದಿವಸ ಫಾಲ್ಕು ಣಮಾಸದಲ್ಲಿ ತ್ಯಾಗರಾಜಸ್ವಾಮಿ ಯವರಿಗೆ ರಥೋತ್ಸವವಾಗುತ್ತಿರಲು ಆ ನಾಗಪಟ್ಟಣದಲ್ಲಿರುವ ಜನರೆಲ್ಲರೂ ರಥೋ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೮
ಗೋಚರ