ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ನೆಯ ಭಾಗ ಶಿವಪುರಾಣದಿಂದ ಸಂಗ್ರಹಿಸಿದ ಕಥೆಗಳು 1. THE REWARD OF WORSHIPPING SHIVA. ೧, ನಿಯಮದಿಂದ ಶಿವಪೂಜೆ ಮಾಡಿದುದರ ಫಲ. ಲೋಕದಲ್ಲಿ ನಿಯಮದಿಂದ ಪರಮೇಶ್ವರಸ್ವಾಮಿಯವರಿಗೆ ಸೇವೆಯನ್ನು ಮಾಡುವವರು ಸಂಸಾರ ಬಂಧಗಳನ್ನು ಪರಿಹರಿಸಿಕೊಂಡು ಮುಕ್ತರಾಗುವರು. ಈ ಅರ್ಧದಲ್ಲಿ ಒಂದು ಕಥೆಯುಂಟು. ಅದು ಹೇಗಂದರೆ - ಜೋಳದೇಶಕ್ಕೆ ಸೇರಿರುವುದಾಗಿ ಸಮುದ್ರತೀರದಲ್ಲಿ ಪ್ರಸಿದ್ಧ ಮಾದ ನಾಗಪ ಟ್ಟಣವಿರುವುದು ಅದು ತತ್ವಜ್ಞಾನಿಗಳಾದ ಬ್ರಾಹ್ಮಣರಿಂದಲೂ ಧನುರ್ವಿದ್ಯಾವಿಶಾರ ದರಾದ ಕ್ಷತ್ರಿಯರಿಂದಲೂ” ಹಡಗುಗಳ ಮೂಲಕ ನಾನಾ ದ್ವೀಪಾಂತರಗಳಲ್ಲಿ ಮಾಡುವ ವ್ಯಾಪಾರಗಳಿಂದ ರಾಶಿರಾಶಿಗಳಾಗಿ ಸುರಿದಿರುವ ನವರತ್ನ ಗಳುಳ್ಳ ವಣಿಗ್ರನ ಗಳಿಂದಲೂ ಗೋಬ್ರಾಹ್ಮಣ ಸೇವೆಯಲ್ಲಿ ನಿರತರಾಗಿ ಕೃಷಿಕರ್ಮಾವಲಂಬಿಗಳಾದ ಶೂದ್ರರಿಂದಲೂ ಕೂಡಿ ನಿರ೦ತರವೂ ಶೋಭಿಸುತ್ತಿರುವುದು. ಮತ್ತು ನವರತ್ಯಾದಿಗಳಿಂದ ನಿರ್ಮಿತಗಳಾಗಿ ಗಗನವನ್ನು ಚುಂಬಿಸುತ್ತಿರುವ ಸೌಧಪಬಗಳಿಂದಲೂ ದೀರ್ಘವಾಗಿಯ ವಿಸ್ತಾರವಾಗಿಯೂ ಇರುವ ರಾಜವೀಧಿ ಗಳಿಂದಲೂ ವಿಚಿತ್ರತರಗಳಾದ ದೇವಾಲಯಗಳಿಂದಲೂ ಲೋಕೋಪಕಾರಾರ್ಥವಾಗಿ ಸ್ಥಾಪಿತಗಳಾಗಿರುವ ಅನ್ನ ಸತ್ರಗಳಿಂದಲೂ ವಿಕಸನವಾಗಿ ಸುಗಂಧವನ್ನು ಬೀರುತ್ತಿರುವ ಕಮಲಗಳುಳ್ಳ ಸರೋವರಗಳಿಂದಲೂ ಅನೇಕ ವಿಧ ಫಲಪುಷ್ಪಭರಿತ ತರುಲತಾಮಂಜು ಭಮಾಗಿಯ ಶುಕಪಿಕ ಮಯರಾದಿ ಮಂಜುರವಮಂಡಿತವಾಗಿಯೂ ಇರುವ ಉದ್ಯಾನವನಗಳಿಂದಲೂ ಪರೋಪಕಾರಶೀಲರಾದ ಧರ್ಮಾತ್ಮರಿಂದಲೂ ಪೂಜ್ಯರಾದ ಜ್ಞಾನವಯೋವೃದ್ದರುಗಳಿಂದ ಕೂಡಿ ರಮಣೀಯವಾಗಿರುವ ಆ ಪುಟಛೇದನವು ತನ್ನಲ್ಲಿ ನಿರಂತರವೂ ವಾಸಿಸುವ ಜನರಿಗೆ ಸ್ವರ್ಗಾದ್ಯುಮಲೋಕಗಳ ಭೋಗಾಸಕ್ತಿ ಯನ್ನು ಮರೆಯಿಸುತ್ತಿತ್ತು. ಅಂಥಾ ನಾಗಪಟ್ಟಣದಲ್ಲಿ ಮಾನದತ್ತನೆಂಬ ಒಬ್ಬ ಬೆಸ್ತನು ಸಮುದ್ರದಲ್ಲಿ ಇರುವ ಮತ್ಸಗಳನ್ನು ಹಿಡಿದು ವ್ಯಾಪಾರವನ್ನು ಮಾಡಿ ಹೆಚ್ಚಾಗಿ ಹಣವನ್ನು ಸಂಪಾದಿಸಿ ತನ್ನ ಕುಲದಲ್ಲಿ ಹುಟ್ಟಿದ ಮಾಲಿನಿ ಎಂಬ ಸ್ತ್ರೀಯನ್ನು