ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 KANARESE SELECTIONS-PART I ಕೊಡುವಂತೆ ನೀವು ವರವನ್ನು ಕೊಟ್ಟರೆ ನಿಮ್ಮ ವ್ಯವಹಾರವನ್ನು ತೀರಿಸಿಕೊಡುವೆನೆಂದು ಹೇಳಿದುದರಿಂದ ಅವರು ಹಾಗೇ ಆಗಲಿ ಎಂದು ವರವನ್ನು ಕೊಟ್ಟು ಕೇಳಲು ಹರಿದತ್ತನು ( ಬುದ್ಧಿಃ ಕರ್ಮಾನುಸಾರಣೀ ?” ಎಂದು ದೇವರ ವಾಕ್ಯವಿರುವದರಿಂದ ಕರ್ಮಾಭಿಮಾನದೇವತೆಯು ಯಜಮಾನಿಯು ಬುದ್ಧಭಿಮಾನದೇವತೆಯು ಆಕೆಯ ಅನುಚರಿಯು. ಇದು ಸತ್ಯವ್ರ, ಆದುದರಿಂದ ಇನ್ನು ಮೇಲೆ ಇಂಥಾ ವ್ಯರ್ಧ ಕಲಹ ಗಳನ್ನು ಮಾಡದೆ ಸುಖವಾಗಿ ಈ ಚಂಡಪರಾಕ್ರಮಿಯಲ್ಲಿ ವಾಸವನ್ನು ಮಾಡಿ ಕೊಂ ಡಿರಿ ಎಂದು ಹೇಳಿದನು. ಆ ಕ್ಷಣದಲ್ಲಿಯೇ ಚಂಡಪರಾಕ್ರಮಿಯ ಕಾಲುಗಳು ಪೂರ್ವದಂತೆ ಹುಟ್ಟಲು ಆಗ ಸಂತೋಷದಿಂದ ಅಭಿಮಾನದೇವತೆಗಳಿಗೆ ಚಂಡಪರಾ ಕ್ರಮಿ ಹರಿದ ಕಿರಾತಸೇನಾಪತಿಗಳು ಸಾಂಷ್ಟಾ೦ಗವಾಗಿ ಪ್ರಣಾಮವನ್ನು ಮಾಡಿ ದರು, ಅಭಿಮಾನದೇವತೆಗಳು--ನಿಮ್ಮ ಇಷ್ಟಾರ್ಥ ಕೈಗೂಡಲೆಂದು ಹರಿಸಿ ಅದೃಶ್ಯರಾಗಿ ಚಂಡಪರಾಕ್ರಮಿಯ ಶರೀರವನ್ನು ಹೊಕ್ಕು ತಮ್ಮ ತಮ್ಮ ಸ್ಥಾನದಲ್ಲಿ ನೆಲೆಗೊಂಡರು. - ಇತ್ತಕಡೆ ದೇವರ ದಯೆಯಿಂದ ಸಮುದ್ರದಲ್ಲಿ ಮುಳುಗಿ ಹೋಗಿದ್ದ ಇವರ ಚತುರಂಗಬಲವೂ ಎದ್ದು ಸಿಂಹವಿಕ್ರಮನ ಅರಿದು ರ್ಘಟವೆಂಬ ಪಟ್ಟಣವನ್ನು ಮುತ್ತಿ ಸ್ವಯಂವರ ಮಂಟಪವನ್ನು ಹೊಕ್ಕ ಕೆಲವರು ಆತನ ಸೇನೆಯೊಡನೆ ಯುದ್ಧಕ್ಕೆ ನಿಂತು ಕೆಲವರು ಸಿಂಹವಿಕ್ರಮನನ್ನು ಹಿಡಿದು ಮದದಾನೆಯ ಮೇಲೆ ಅಂಬಾರಿಯಲ್ಲಿ ಕೂರಿಸಿಕೊಂಡು ಚಂಡಪರಾಕ್ರಮಿ ಇರುವ ಸ್ಥಳಕ್ಕೆ ಕರೆದುಕೊಂಡು ಬರುತ್ತಾ ಇರು ವಲ್ಲಿ ಚಂಡಪರಾಕ್ರಮಿಯು ದೂರದಿಂದಲೇ ಕಂಡು ಹರಿದತ್ತ ನನ್ನೂ ಕಿರಾತಸೇನಾ ಪತಿಯನ್ನೂ ಕರೆದುಕೊಂಡು ಆತನೆಡೆಗೆ ಹೋಗಿ ಭೂಮಿಯಲ್ಲಿ ಸಾಷ್ಟಾಂಗ ಪ್ರಮಾ ಣವನ್ನು ಮಾಡಿ ಕೈಮುಗಿದು ನಿಂತುಕೊಂಡು ಸ್ವಾಮಿ ! ಸಿಂಹಳದೀಪದ ಸಾರ್ವಭೌಮರಾದ ಸಿಂಹವಿಕ್ರಮ ಮಾವಾಜಿಯವರೇ ! ಚಂಡಪರಾಕ್ರಮಿ ಎಂಬ ನಿಮ್ಮ ಅಳಿಯನು ನಾನೇ, ದೇವರು ಮಾಡಿದಂಥಾ ಕೆಲಸಕ್ಕೆ ನಾವು ಸರ್ವರೂ ಸಂತೋ ಷಪಟ್ಟು ಕೊಂಡು ಇರಬೇಕೇ ಹೊರತು ವ್ಯಸನಪಡಕೂಡದು, ನಿಮ್ಮ ಚಿರಂಜೀವಿ ಯಾದ ನನ್ನ ಅಪರಾಧಗಳನ್ನು ಚಿತ್ರದಲ್ಲಿ ತಾರದೆ ಬಾಲಕನನ್ನು ಮನ್ನಿಸಬೇಕೆಂದು ತಿರಿಗಿ ಪೊಡಮಡಲು ಸಿಂಹವಿಕ್ರಮನು ಆನೆಯಿಂದ ಇಳಿದು ಆಲಿಂಗಿಸಿಕೊಂಡು ಆ ಮೂವರೂ ತಾನೂ ಸಹ ಗಜಾರೂಢರಾಗಿ ಪಟ್ಟಣಕ್ಕೆ ಬಂದು ಅರಮನೆಯಲ್ಲಿ ಇಳಿದು ಕುಶಲಶೇಖರರಾಜನ ಬಿಡಾರಕ್ಕೆ ಸರ್ವವರೂ ಬಂದು ಕಾಣಿಸಿಕೊಳ್ಳಲು ದೇವದಾಸನು ಆದಿಯಿಂದಲೂ ನಡೆದ ವೃತ್ತಾಂತವನ್ನೆ ಲ್ಲಾ ಸರ್ವರ ಮುಂದೆ ತಿಳಿಸಲು ಸರ್ವರೂ ಕೇಳಿ-ಇವರು ಹರಿದಾಸನ ತಾಯಿತಂದೆಗಳೆಂದು ತಿಳಿದು ಅತ್ಯಾಶ್ಚರ್ಯ ಗೊಂಡರು. ಸಿಂಹವಿಕ್ರಮನು ಚಂಡಪರಾಕ್ರಮಿಗೂ ಆನಂದವಲ್ಲಿಗೂ ವಿವಾಹ ಪ್ರಸ್ತವನ್ನು ಬೆಳೆಸಿ ತನ್ನ ದ್ವೀಪದ ನಾಲ್ಕು ಭಾಗದಲ್ಲಿ ಒಂದು ಭಾಗವನ್ನು ಅಳೆಯನಿಗೆ ಧಾರೆಯನ್ನೆ ರದು ಕೊಟ್ಟು ಕುಶಲವತೀನಗರಕ್ಕೆ ಹೋಗುವಂತೆ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಬಳಿಕ ಕುಶಲಶೇಖರರಾಜನು ಮಗನನ್ನೂ ಸೊಸೆಯನ್ನೂ ಕರಕೊಂಡು ಸರ್ವಪರಿವಾರಸಮೇತನಾಗಿ ಪಟ್ಟಣಕ್ಕೆ ಬಂದು ದೇವದಾಸನನ್ನೂ ದೇವದಾಸಿಯನ್ನೂ ಪೂಜಿಸುತ್ತಾ ದೇವರ ಧ್ಯಾನವನ್ನು ಮಾಡಿಕೊಂಡು ಸುಖದಲ್ಲಿದ್ದನು.