ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೩ನೆಯ ಭಾಗ 157 ಷವೂ ನಿಶ್ವಹಿಸಲಾರವು. ಆದುದರಿಂದ ಈ ಮೂರು ಮಂದಿಯೊಳಗೆ ಒಬ್ಬರನ್ನೂ ಬಿಡುವುದಕ್ಕಾಗುವುದಿಲ್ಲ, ಯಾವ ಪ್ರಯತ್ನದಿಂದಾದರೂ ಈ ಆಪತ್ತನ್ನು ಪರಿಹರಿಸು ವುದಕ್ಕೆ ಉಪಾಯವನ್ನು ಕಾಣದೆ ಇರುವುದರಿಂದ ಹೆಂಡತಿಯ ಮಗನೂ ನಾನೂ ಏಕಕಾಲದಲ್ಲಿ ಸಾಯುವುದೇ ಉಚಿತವೆಂದು ನಿಶ್ಚಯಿಸಿದನು. ಹೀಗೆ ಏಕಕಾಲದಲ್ಲಿ ಎಲ್ಲರೂ ಸತ್ತುಹೋಗಬೇಕೆಂದು ಹಂಬಲಿಸುತ್ತಿರುವ ಪತಿಯನ್ನು ಕುರಿತು ಹೆಂಡತಿಯು ಇಂತೆಂದಳು--ಎಲೈ, ನಾಯಕನೇ ! ಮೂಢ ಮನುಷ್ಠರೋಪಾದಿಯಲ್ಲಿ ನೀವು ಯಾತಕ್ಕೆ ಕ್ಷೌಶಪಡುತ್ತಿದ್ದೀರಿ ? ವಿಶೇಷವಾದ ಸಂತಾಪಕ್ಕೆ ಇದು ಕಾಲವಲ್ಲ, ಪುರುಷರು ಧೈರಗೆಡುವರೇ ? ಹುಟ್ಟಿದಾಗಲೇ ಮನುಷ್ಯನಿಗೆ ಮರಣವು ನಿಶ್ಚಯವಾಗಿರುವುದು ಅವಶ್ಯವಾಗಿ ಮಾಡತಕ್ಕಂಥಾ ಕಾಠ್ಯಕ್ಕೆ ಕೇಶಪಟ್ಟುದರಿಂದ ಪ್ರಯೋಜನವೇನು ? ಪತ್ರಮಿತ್ರ ಕಳತ್ರಾದಿಗಳು ನಿಮ್ಮ ನಿಮಿತ್ತವಾದುದರಿಂದ ನೀವು ಸುಖವಾಗಿದ್ದು ನನ್ನನ್ನು ಕಳುಹಿಸಿಬಿಡಿರಿ. ಪತಿಯ ನಿಮಿತ್ತವಾಗಿ ಪ್ರಾಣಗಳನ್ನು ಪರಿತ್ಯಜಿಸುವುದಕ್ಕಿಂತ ಸ್ತ್ರೀಯರಿಗೆ ಮತ್ತೊಂದು ಧರ ಉಂಟೇ ? ನಿಮ್ಮ ನಿಮಿತ್ತವಾಗಿ ನಾನು ಶರೀರತ್ಯಾಗವನ್ನು ಮಾಡಿದರೆ ಈ ಲೋಕದಲ್ಲಿ ನಿಮಗೆ ಸೌಖ್ಯವೂ ಪರಲೋಕದಲ್ಲಿ ನನಗೆ ಗತಿಯ ಉಂಟಾಗುವುದು. ಲೋಕದಲ್ಲಿ ಮದುವೆಯಾಗುವುದು ಸಂತಾನಾರವಾಗಿಯೇ ಇದೆ. ನಮಗೆ ಅಂಥಾ ಸಂತಾನವು ಕನ್ಯಾಕುಮಾರರೂಪದಿಂದ ಆಯಿತು. ನಾನು ನಿಮ್ಮ ಋಣವನ್ನು ತೀರಿಸಿಕೊಂಡಿ ದ್ದೇನೆ, ನೀವಿದ್ದರೆ ಈ ಚಿಕ್ಕವರಿಗೆ ಸೌಖ್ಯ ಉಂಟು. ನಾನು ಅಬಲೆಯಾದುದರಿಂದ ಇವರನ್ನು ರಕ್ಷಿಸಲಾರೆನು ನೀವಿಲ್ಲ ದೆಹೋದರೆ ಜಾತಿಹೀನರಾದವರು ಅಹಂಕಾರಗಸ ರಾಗಿ ನಮ್ಮ ಸ್ವರೂಪವನ್ನು ತಿಳಿಯದೆ ಈ ಕನ್ನೆಯನ್ನು ಕೇಳುವುದಕ್ಕೆ ಬಂದರೆ ಅನಾ ಧಳಾದ ನಾನು ಹೇಗೆ ಅವರನ್ನು ನಿರಾಕರಿಸಲಿ ? ಭೂಮಿಯಲ್ಲಿ ಬಿದ್ದಿರುವ ಮಾಂಸ ಖಂಡವನ್ನು ಪಕ್ಷಿಗಳು ಅಪೇಕ್ಷಿಸುವ ಹಾಗೆ ಪತಿರಹಿತಳಾದ ಸ್ತ್ರೀಯನ್ನು ಯಾರಾ ದರೂ ಅಪೇಕ್ಷಿಸುವರು. ಅದರಿಂದ ಅಂಧಾ ದುರಾತ್ಮರು ಬಹು ಪ್ರಕಾರದಿಂದ ಬಾಧಿ ಸಿದರೆ ನನಗೆ ಪಾತಿವ್ರತ್ಯಧರ್ಮವು ದಕ್ಕಲಾರದು. ಲೋಕದಲ್ಲಿ ದುಷ್ಟ ಜನರು ಹೆಚ್ಚಿ ದುದರಿ೦ದ ಸ್ತ್ರೀ ಜನ್ಮವು ನಿಂದಿತವಾದುದೆಂದು ಎಣಿಸುತ್ತಿದ್ದೇನೆ. ಅದರಿಂದಲೇ ಸ್ತ್ರೀಯರು ಬಾಲ್ಯದಲ್ಲಿ ತಾಯಿತಂದೆಗಳಿಗೂ ಯೌವನದಲ್ಲಿ ಗಂಡನಿಗೂ ವಾರ್ಧಿಕ್ಯದಲ್ಲಿ ಮಕ್ಕಳಿಗೂ ಅಧೀನರಾಗಿ ಇರಬೇಕೇ ಹೊರತು ಸ್ವತಂತ್ರರಾಗಿರಬಾರದು, ಸ್ವತಂತ್ರ ರಾಗಿದ್ದರೆ ತುಪ್ಪದಿಂದ ನೆನೆದ ವಸ್ತಖಂಡವನ್ನು ನಾಯಿಗಳು ಎಳೆಯುವ ಹಾಗೆ ದುರ್ಜನರು ಸ್ತ್ರೀಜನರನ್ನು ಬಾಧಿಸದೆ ಇರರು, ಉಪನಯನವಿಲ್ಲದೆ ಇರುವಂಥಾ ಈ ಬಾಲಕನಿಗೆ ಉಪನಯನಾದಿ ಕೃತ್ಯಗಳನ್ನು ಮಾಡಿ ವೇದಶಾಸ್ತ್ರಗಳನ್ನು ಓದಿಸುವಂ ಥಾವರಾರು ? ನಿಮ್ಮನ್ನು ಬಿಟ್ಟು ಅನಾಥೆಯಾಗಿರುವ ನನ್ನನ್ನು ಎಣಿಸದೆ ಈ ಕನಕೆ ಯನ್ನು ಯಾರಾದರೂ ದುಷ್ಟರು- ಶೂದ್ರನು ಶ್ರುತಿಯನ್ನು ಬಯಸುವ ಪ್ರಕಾರವೂ ಕಾಕವು ಮಂತ್ರಪೂತವಾದ ಹವಿಸ್ಸನ್ನು ಇಚ್ಛೆಸುವಂತೆಯ `ಇಚ್ಛೆಸಿ ಕೇಳಿದಲ್ಲಿ ನಾನು ಒಡಂಬಟ್ಟು ಕೊಡದಿದ್ದರೆ ಬಲಾತ್ಕಾರದಿಂದ ಅಪಹರಿಸುವರು, ಅದನ್ನು