ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158 KANARESE SELECTIONS—PART III ನೋಡಿ ಸಹಿಸಲಾರದೆ ನಾನು ಶರೀರವನ್ನು ಬಿಡುವೆನು, ಆ ಮೇಲೆ ಇವರಿಬ್ಬರೂ ನೀರಿನಿಂದ ಹೊರಗೆ ಬಂದ ವಿಾನುಗಳ ಹಾಗೆ ಕೆಟ್ಟು ಹೋಗುವರು. ಆದುದರಿಂದ ಹೇಗೆ ನೋಡಿದರೂ ನಿಮ್ಮನ್ನು ಬಿಟ್ಟರೆ ಈ ಮೂರು ಮಂದಿಗೂ ಪ್ರಾಣಸಂಶಯವಾ ಗುವುದರಿಂದ ಇದೆಲ್ಲವನ್ನು ನಿನ್ನ ಮನಸ್ಸಿನಲ್ಲಿ ನಿಶ್ಚಯಿಸಿ ನನ್ನನ್ನು ಅವಶ್ಯವಾಗಿ ಕಳು ಹಿಸಿಬಿಡಿ, ಪತಿವ್ರತಾ ಜನಗಳಿಗೆ ಪತಿಗಳಿಗಿಂತ ಮೊದಲೇ ಅರಸಿನ ಕುಂಕುಮ ಪುಷ್ಪ ಮಂಗಳಸೂತ್ರ ಇವುಗಳ ಸಂಗಡ ಪರಲೋಕಕ್ಕೆ ಹೋಗಿ ತನ್ನ ಗಂಡನು ಕೊಟ್ಟ ತರ್ಪಣಾದಿಗಳಿಂದ ತೃಪ್ತಿಯನ್ನು ಪಡೆಯುವುದು ಉತ್ತಮವೇ ಹೊರತು ವೈಧವ್ಯವನ್ನು ಅನುಭವಿಸುತ್ತಾ ಮಕ್ಕಳು ಕೊಟ್ಟ ಅನ್ನ ದಿಂದ ಕಾಲವನ್ನು ಕಳೆಯುವುದು ಧರ್ಮ ವಲ್ಲ, ಗಂಡನ ಪಾದಗಳನ್ನು ತನ್ನ ಮನಸ್ಸಿನಲ್ಲಿ ಧ್ಯಾನಿಸುತ್ತಾ ಪತಿಗಿಂತ ಮೊದಲೇ ಶರೀರವನ್ನು ಬಿಡುವಂಥಾ ಸ್ತ್ರೀಯು ಪಾರ್ವತೀದೇವಿಗೆ ಕೆಳದಿಯಾಗಿ ಆ ಮಹಾದೇವಿ ಯೊಡನೆ ಚತುರಂಗವನ್ನು ಆಡುತ್ತಿರುವಳು. ಅದಲ್ಲದೆ ತಾಯಿತಂದೆಗಳೂ ಒಡಹುಟ್ಟಿ ದವರೂ ಮಕ್ಕಳೂ ಇವರೆಲ್ಲರೂ ಹೀಗೆ ಮಿತವಾದ ಸೌಖ್ಯವನ್ನು ಕೊಡುವವರೇ ಹೊರತು ಗಂಡನೋಪಾದಿಯಲ್ಲಿ ಅಮಿತ ಸೌಖ್ಯವನ್ನು ಕೊಡಲಾರರು. ಆದುದರಿಂದ ಗಂಡನನ್ನು ಉಪಚರಿಸದೆ ಇರುವಂಧ ನಿರ್ಭಾಗ್ಯಳು ಲೋಕದಲ್ಲಿ ಉಂಟೇ ? ಈ ಮಗ ನನ್ನ ಮಗಳನ್ನೂ ಬಿಟ್ಟು ಮತ್ತು ಬಂಧು ಜನಗಳನ್ನೆಲ್ಲಾ ತೊರೆದು ನಿಮಗೆ ಸುಖ ವಾಗುವ ರೀತಿಗೆ ನನ್ನ ಪ್ರಾಣಗಳನ್ನು ಒಪ್ಪಿಸುತ್ತೇನೆ. ಸೀಜನಗಳಿಗೆ ಯಜ್ಞದಾನ ತಪೋನಿಯಮಗಳಿಗಿಂತಲೂ ಪತಿಗೆ ಹಿತವನ್ನು ಮಾಡುವುದೇ ಪರಮಧರ್ಮವೆನಿಸು ವುದು, ಈಗ ನಾನು ಹೇಳಿದ ಮಾತುಗಳೆಲ್ಲವೂ ನಿಮಗೂ ನಿಮ್ಮ ಕುಲಕೂ ಹಿತವಾ ಗಿರುವುವು. ಲೋಕದಲ್ಲಿ ಪುರುಷನಿಗೆ ಕುಮಾರಕರೂ ಧನವೂ ಮಿತ್ರವರ್ಗವೂ ಹೆಂಡ ತಿಯ ಆಪತ್ತಿನ ಸಮಯಕ್ಕೆ ಒದಗದಿದ್ದರೆ ವ್ಯರ್ಧವೆನಿಸಿಕೊಂಬುವರು ತನ್ನ ಕುಲ ವೆಲ್ಲವೂ ಆತ್ಮ ಸಂರಕ್ಷಣ ಧರ್ಮಕ್ಕೆ ಸಮಾನವಾಗಿ ಇರಲಾರದು, ಅದರಿಂದ ಈ ಆಪತ್ತನ್ನು ನನ್ನ ದೆಸೆಯಿಂದ ತಪ್ಪಿಸಿಕೊಳ್ಳಿರಿ, ನೀವು ಉಳಿದು ಈ ಮಕ್ಕಳನ್ನು ರಕ್ಷಿಸಿ ಕೊಳ್ಳಿರಿ. ಲೋಕದಲ್ಲಿ ಸ್ತ್ರೀ ವಧೆಯು ಅಧರ್ಮವೆಂದು ಧರ್ಮಶಾಸ್ತ್ರಜ್ಞರು ಹೇಳುವು ದರಿಂದ ಆ ರಾಕ್ಷಸನು ಒಂದು ವೇಳೆ ನನ್ನನ್ನು ಕರುಣಿಸಿ ಬಿಟ್ಟು ಬಿಟ್ಟಾನು. ಆದುದ ರಿಂದ ನೀವು ನಿಂತು ನನ್ನನ್ನು ಕಳುಹಿಸಿ ಬಿಡುವುದು ಯುಕ್ತವ, ಯಾಕಂದರೆ ನಾನು ನಿಮ್ಮ ದೆಸೆಯಿಂದ ಸಕಲ ಸೌಖ್ಯಗಳನ್ನೂ ಅನುಭವಿಸಿ ಪ್ರಿಯವಾದುವುಗಳನ್ನು ಹೊಂದಿ ಧರ್ಮವನ್ನು ಆಚರಿಸಿ ಸಂತಾನವನ್ನು ಪಡೆದು ನಿಮಗೆ ಶುಶೂಷೆಯನ್ನು ಮಾಡಿ ಪಾತಿ ವ್ಯತ್ಯಧರ್ಮದಿಂದ ಕೀರ್ತಿಯನ್ನು ಹೊಂದಿ ಯೌವನವನ್ನು ಮಾರಿದೆನು. ಇನ್ನು ಮೇಲೆ ನಿಮಗೆ ಪ್ರಿಯವನ್ನೇ ಮಾಡಬೇಕೆಂಬ ಒಯಕೆ ಇದೆಯೇ ಹೊರತಾಗಿ ಮತ್ತೊಂದು ಬಯಕೆ ಇಲ್ಲ ನೀವು ಇನ್ನೊಂದು ಮದುವೆ ಮಾಡಿಕೊಂಡು ಧರ್ಮ ಲೋಪವಿಲ್ಲದಂತೆ ನಡೆದುಕೊಳ್ಳಿರಿ. ಸೀಜನಗಳಿಗೆ ಗಂಡನನ್ನು ಬಿಟ್ಟು ಮತ್ತೊಬ್ಬ ಪುರುಷನನ್ನು ಪರಿಗ್ರಹಿಸುವುದು ದೋಷವೇ ಹೊರತಾಗಿ ಪುರುಷರಿಗೆ ಬಹು ಪಪ. ರಿಗ್ರಹವು ದೋಷವಲ್ಲ. ಈ ಧರ್ಮವನ್ನು ನಿಮ್ಮ ಮನಸ್ಸಿನಲ್ಲಿ ವಿಚಾರಿಸಿ ಆತ್ಮತ್ಯಾ