ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 159 ಗವು ದೋಷವೆಂದು ತಿಳಿದು ನನ್ನಿಂದ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ನಿಮ್ಮ ಕುಲ ವನ್ನೂ ಊರ್ಜಿತವಾಗಿ ರಕ್ಷಿಸಿಕೊಳ್ಳಿರಿ ಎನಲು ; ಆ ಬ್ರಾಹ್ಮಣನು ಅತಿದುಃಖದಿಂದ ಅವಳನ್ನು ಅಪ್ಪಿಕೊಂಡು ಕಣ್ಣೀರು ತುಂಬಿ--ನೀನು ಸುಖವಾಗಿರುವುದೇ ನನಗೆ ಪರ ಮಸುಖವು. ಆದುದರಿಂದ ಹೀಗೆ ನುಡಿಯಬೇಡ, ಪ್ರಾಜ್ಞನಾದ ಮನುಷ್ಯನು ಪತ್ರ ಮಿತ್ರಕಳತಾದ್ರಿಗಳನ್ನು ಯಾಕೆ ಬಿಡುವನು ? ವಿಶೇಷವಾಗಿ ಸ್ತ್ರೀಜನಗಳನ್ನು ರಕ್ಷಿಸು ಲಾರದೆ ಇರುವ ಪುರುಷನು ಚತುರ್ವಿಧ ಪುರುಷಾರ್ಥಗಳಿಗೂ ದೂರಸ್ಥನಾಗುವನು ಎಂದು ಹೇಳುತ್ತಿದ್ದನು. ಈ ಪ್ರಕಾರ ತಾಯಿ ತಂದೆಗಳು ಕೌಶಪಡುವುದನ್ನು ನೋಡಿ ಆ ಬ್ರಾಹ್ಮಣನ ಮಗಳು ತಾನು ಕ್ಷೇಶಪಟ್ಟು ಧೈರ್ಯವನ್ನು ಹೊಂದಿ ತಾಯಿ ತಂದೆಗಳನ್ನು ನೋಡಿ ಎಲೈ ! ನೀವು ಅನಾಧರೋಪಾದಿಯಲ್ಲಿ ಹಂಬಲಿಸುವುದೇಕೆ ? ನನಗೆ ತೋರಿದಂತೆ ಹೇಳುತ್ತೇನೆ. ನಿಮಗೆ ಸಮ್ಮತವಾದರೆ ಹಾಗೆಯೇ ನಡಿಸಿರಿ. ನಿಮ್ಮಿಬ್ಬರಿಗೂ ನಾನು ಮಗಳಾದುದರಿಂದ ನನ್ನನ್ನು ಅವಶ್ಯವಾಗಿ ಕಳುಹಿಸಬೇಕು. ನನ್ನನ್ನು ಕಳುಹಿಸಿ ನಿಮ್ಮನ್ನು ಸಂರಕ್ಷಿಸಿಕೊಳ್ಳುವುದು ಯುಕ್ತವು ಲೋಕದಲ್ಲಿ ಜನರು ತಾವು ಆಪತ್ತು ಗಳನ್ನು ಪರಿಹರಿಸಿಕೊಳ್ಳಬೇಕೆಂದಲ್ಲವೇ ಮಕ್ಕಳನ್ನು ಬಯಸುವುದು ? ಇಂಥಾ ಆಪ ತಾಲದಲ್ಲಿ ನನ್ನಿ೦ದ ಈ ಆಪತ್ತನ್ನು ಪರಿಹರಿಸಿಕೊ೦ಬುವುದು ಯುಕ್ತವು, ಇಹಲೋಕ ಪರಲೋಕಗಳಲ್ಲಿ ಮಾತಾಪಿತೃಗಳ ದುಃಖವನ್ನು ಪರಿಹರಿಸುವಂಧವಳೇ ಪುತ್ರಿಯೆನಿಸಿ ಕೊಳ್ಳುವಳು. ಆದುದರಿಂದ ಅಂಧಾ ದುಃಖವನ್ನು ಈ ಲೋಕದಲ್ಲಿ ಪರಿಹರಿಸುತ್ತೇನೆ. ದೌಹಿತ್ರನ ದೆಸೆಯಿಂದ ಅತಿಶಯ ಬರಬೇಕೆಂದು ಪ್ರಾರ್ಥಿಸುವಂಥ ನಿಮಗೆ ನಾನೇ ಪ್ರಾಣದಾನವನ್ನು ಮಾಡುತ್ತೇನೆ. ನನ್ನ ತಮ್ಮನು ಬಾಲಕನಾದುದರಿಂದ ನಿಮ್ಮನ್ನು ಬಿಟ್ಟು ಬದುಕಲಾರನು ? ಮತ್ತು ನೀವೂ ಈ ನನ್ನ ತಮ್ಮನೂ ಇಬ್ಬರೂ ಇಲ್ಲದೇ ಹೋದರೆ ಪಿತೃದೇವತೆಗಳಿಗೆ ಪಿಂಡೋದಕಪ್ರದಾನಗಳು ನಿಂತುಹೋಗುವುವು. ಆದು ದರಿಂದ ನೀವು ಹೋಗುವುದು ಪಿತೃದೇವತೆಗಳಿಗೆ ಸಮ್ಮತವಲ್ಲ, ತಾಯಿತಂದೆಗೆ ಳಾದ ನೀವೂ ತಮ್ಮ ನೂ ನನ್ನನ್ನು ಬಿಟ್ಟರೆ ನಾನು ದುಃಖದ ಮೇಲೆ ದುಃಖವನ್ನು ಹೊಂದಿ ಶರೀರವನ್ನು ಬಿಡಬೇಕಾಗುವುದು. ನೀವು ನಿಂತರೆ ಪಿತೃದೇವತೆಗಳಿಗೆ ಪಿಂಡೋದಕ ಕ್ರಿಯೆಗಳು ಊರ್ಜಿತವಾಗಿ ನಡೆದು ನನ್ನ ತಾಯಿಯ ಮತ್ತು ನಿಮ್ಮ ವಂಶಗಳು ಅಭಿವೃದ್ದಿ ಯಾಗುವುವು, ತಂದೆಯು ತಾನೇ ಮಗನಾಗಿರುವುದರಿಂದಲೂ ಹೆಂಡತಿಯು ಸಕಲ ಕಾರ್ಯಗಳಲ್ಲಿಯ ಸಹಾಯಕಳಾಗಿ ಸತಿ ಎನಿಸಿಕೊಂಡಿರುವು ದರಿಂದಲೂ ಮಗನನ್ನೂ ಹೆಂಡತಿಯನ್ನೂ ಬಿಡಬಾರದು, ಕನ್ಯಾ ಜನವು ತಾಯಿತಂದೆ ಗಳಿಗೆ ದುಃಖವನ್ನು ಉಂಟುಮಾಡುವವರಾಗಿರುವುದರಿಂದ ನನ್ನ ನ್ನು ಕಳುಹಿಸಿ ಸದ್ಯಕಿ ಬಂದ ದುಃಖವನ್ನು ಪರಿಹರಿಸಿಕೊಳ್ಳಿರಿ, ನಾನು ಇಂಥಾ ಧರ್ಮದಿಂದ ಪುಣ್ಯಲೋಕ ಗಳನ್ನು ಹೊಂದುತ್ತೇನೆ. ನಾನು ಚಿಕ್ಕವಳಾದ ಅಬಲೆಯಾಗಿರುವುದರಿಂದ ನೀವು ಹೋದರೆ ನಾನು ಅನಾಥೆಯಾಗಿ ದೈನ್ಯದಿಂದ ಭೂಮಿಯಲ್ಲಿ ಬಿದ್ದು ಹೊರಳಾಡುತ್ತಿರ ಬೇಕು, ಈಗ ನೀವು ನನ್ನನ್ನು ಕಳುಹಿಸಿದರೆ ನಾನು ಶರೀರವನ್ನು ರಾಕ್ಷಸನಿಗೆ ಕೊಟ್ಟು