ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

169 KANARESE SELECTIONS-PART III ಕುಲಸಂರಕ್ಷಣೆಯನ್ನು ಮಾಡಿ ಅಪರಿಮಿತವಾದ ಪುಣ್ಯಲೋಕಗಳನ್ನೆದುವೆನು. ಆದು ದರಿಂದ ಬಿಡತಕ್ಕವಳಾಗಿರುವ ನನ್ನನ್ನು ಕಳುಹಿಸಿ ವಂಶಾಭಿವೃದ್ಧಿಗೆ ಕಾರಣರಾದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು ಇದು ಧರ ವು. ನೀವು ಕೊಡುವಂಥಾ ತರ್ಪಣೋ ದಕದ ದೆಸೆಯಿಂದ ನಾನು ಪರಲೋಕ ಸುಖವನ್ನು ಹೊಂದುತ್ತೇನೆ. ಹಾಗಲ್ಲ ವೆಂದು ನೀವು ನನ್ನನ್ನು ಬಿಟ್ಟು ಪರಲೋಕಕ್ಕೆ ಹೋದರೆ ನಾನು ನಾಯಿಯಂತೆ ಮನೆಮನೆಗೂ ತಿರುಗಿ ಅನ್ನವನ್ನು ಬೇಡಿ ಬೇಸರಪಡಬೇಕು. ಇದಕ್ಕಿಂತ ಇನ್ನು ಬೇರೇ ದುಃಖ ಉಂಟೆ ? ನೀವು ಸಮಸ್ತ ಬಂಧುಜನಗಳೊಡನೆ ಸುಖವಾಗಿದ್ದರೆ ಅದರಿಂದ ಪರಲೋಕದಲ್ಲಿ ಸುಖ ಪಡುವುದಕ್ಕಿಂತ ನನಗೆ ಬೇರೆ ಸುಖವುಂಟೆ ? ನೀವು ಇವೆರಡನ್ನೂ ವಿಚಾರಿಸಿ ನಿಮಗೂ ನನ್ನ ತಾಯಿ ತಮ್ಮಂದಿರಿಗೂ ಸುಖವಾಗುವ ಹಾಗೆಯೇ ನಡಿಸಿರಿ, ನೀವು ಚೆನ್ನಾಗಿದ್ದರೆ ನಿಮಗೆ ಇನ್ನೂ ಗುಣವಂತರಾದ ಹೆಣ್ಣು ಗಂಡು ಮಕ್ಕಳು ಹುಟ್ಟುವರೇ ಹೊರತು ಮಕ್ಕಳಿಗೆ ತಾಯಿತಂದೆಗಳು ತಿರಿಗಿ ಹುಟ್ಟಲಾರರು, ಅದರಿಂದ ನಿಮಗೆ ಪ್ರಿಯವಾಗು ವುದಕ್ಕೋಸ್ಕರ ನನ್ನ ಪ್ರಾಣವನ್ನು ಅರ್ಪಿಸುತ್ತೇನೆ ಎಂದಳು. ಹೀಗೆ ತಾಯಿ ತಂದೆ ಗಳು ಮಗಳು ಸಹ ರೋದನದನ್ನು ಮಾಡುತ್ತಿದ್ದರು. ಆ ಕುಮಾರನು ಅವರ ಸಮೀಪಕ್ಕೆ ಹೋಗಿ ತೊದಲು ನುಡಿಗಳಿಂದ-ಅಳ ಬೇಡಿರೆಂದು ಪ್ರತ್ಯೇಕ ಪ್ರತ್ಯೇಕವಾಗಿ ತಾಯಿ ತಂದೆ ಅಕ್ಕಂದಿರಿಗೆ ಸಮಾಧಾನವನ್ನು ಹೇಳುತ್ತಾ ನಗುತ್ತಾ, ಬಬ್ಬೊಬ್ಬರ ಸಮಿಾಪಕ್ಕೆ ಹೋಗಿ ಅವರ ಮೇಲೆ ಬಿದ್ದು ಸಂತೋಷಪಡುತ್ತಾ ಹುಲ್ಲನ್ನು ತೆಗೆದುಕೊಂಡು ಮನುಷ್ಯರನ್ನು ಕೊಲ್ಲುವ ಆ ರಾಕ್ಷ ಸನನ್ನು ಇದರಿಂದ ಕೊಂದು ಹಾಕುತ್ತೇನೆ ಎಂದು ಹೇಳಿದುದಕ್ಕೆ ಅವರು ಅತಿ ದುಃಖಿ ತರಾಗಿದ್ದರೂ ಆ ಚಿಕ್ಕವನ ಮಾತನ್ನು ಕೇಳಿ ಸಂತೋಷಪಟ್ಟು ನಗುತ್ತಿರಲು : ಇದೇ ಸಮಯವೆಂದು ಕುಂತಿಯು ಆ `ರ ಸಮಿಾಪಕ್ಕೆ ಹೋಗಿ ಆ ಬ್ರಾಹ್ಮಣನನ್ನು ಕುರಿತು ಮಧುರವಚನದಿಂದ ಇಂತೆಂದಳು-ಎಲೈ ಬ್ರಾಹ್ಮಣಶ್ರೇಷ್ಟನೆ ! ನೀವು ಹೀಗೆ ಕೇಶ ಪಡುವುದಕ್ಕೆ ಕಾರಣವೇನು ? ಹೇಳು, ಅದು ನಮ್ಮ ಕೈಲಾಗುವ ಕಾರ್ಯವಾದರೆ ತೀರಿಸುತ್ತೇವೆ ಎನಲು ; ಆ ಬ್ರಾಹ್ಮಣನು-ಸರದುಃಖಗಳನ್ನು ಹೋಗಲಾಡಿಸುವು ದಕ್ಕೆ ಉಜ್ಜುಗಿಸುವುದು ಸಜ್ಜನರಿಗೆ ಸ್ವಭಾವವಾದುದು. ನೀವು ಹೀಗೆ ಕೇಳುವುದು ಉಚಿತವೇ ಸರಿ, ಆದರೆ ಈ ದುಃಖವು ದೇವತೆಗಳಿಂದಲೇ ಹೊರತು ಮನುಷ್ಯರಿಂದ ತೀರಿಸುವುದಕ್ಕೆ ಶಕ್ಯವಲ್ಲ, ಆದರೂ ನೀವು ಕೇಳಿದುದರಿಂದ ವಿವರಿಸುತ್ತೇನೆ. ಈ ಪಟ್ಟಣಕ್ಕೆ ಎರಡು ಹರದಾರಿಯ ದೂರದಲ್ಲಿ ಯಮುನಾನದೀ ತೀರದ ಪರ್ವತ ಗುಹಾಂತರದಲ್ಲಿ ಮಹಾ ಬಲಶಾಲಿಯಾಗಿಯ ಈ ದೇಶಕ್ಕಧಿಪತಿಯಾಗಿಯ ಮನುಷ್ಯ ಮಾಂಸ ಭಕ್ಷ ಕನಾಗಿಯ ಕಾಮರೂಪಿಯಾಗಿಯೂ ಇರುವ ಒಕನೆಂಬ ಒಬ್ಬ ರಾಕ್ಷಸನಿರುವನು. ಅವನು ಈ ದೇಶಕ್ಕೆ ಬಂದು ಹದಿಮೂರು ಸಂವತ್ಸರಗಳ ಪರ್ಯ೦ತರವೂ ಸಕಲ ಜನರಿಗೂ ಉಪದ್ರವನ್ನು ಮಾಡುತ್ತಾ ಒಂದೊಂದು ಮನೆ ಯನ್ನು ಹೊಕ್ಕು ಅದರಲ್ಲಿರುವ ಜನರೆಲ್ಲರನ್ನೂ ಒಂದೇ ದಿವಸದಲ್ಲಿ ಭಕ್ಷಿಸುತ್ತಾ ಇತರರ ಭಯವಿಲ್ಲದೆ ಇರುತ್ತಿದ್ದನು. ಹೀಗೆ ನಮಗೆ ಯಾರೂ ರಕ್ಷಕರಿಲ್ಲದೆ ಇದ್ದು